ETV Bharat / bharat

ಇಂದು ಬೆಳಗ್ಗೆ ಶುಭ ಸುದ್ದಿ, ಮಧ್ಯಾಹ್ನ ಅಥವಾ ಸಂಜೆ ನೂತನ ಸಚಿವರ ಪ್ರಮಾಣವಚನ: ಸಿಎಂ - ಕರ್ನಾಟಕ ಸಚಿವ ಸಂಪುಟ

ಇಂದು ಬೆಳಗ್ಗೆ ಹೈಕಮಾಂಡ್​ನಿಂದ ಶುಭ ಸುದ್ದಿ ಸಿಗಲಿದ್ದು, ಮಧ್ಯಾಹ್ನ ಅಥವಾ ಸಂಜೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

Bommai cabinet
Bommai cabinet
author img

By

Published : Aug 3, 2021, 10:51 PM IST

Updated : Aug 4, 2021, 2:28 AM IST

ನವದೆಹಲಿ: ನೂತನ ಸಚಿವ ಸಂಪುಟ ರಚನೆ ವಿಚಾರವಾಗಿ ದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರವೂ ಹೈಕಮಾಂಡ್​ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಚರ್ಚೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರೊಂದಿಗೆ ಮಂಗಳವಾರ ಸಂಜೆ ಅಂತಿಮವಾಗಿ ಮಾತುಕತೆ ನಡೆಸಿದ್ದೇನೆ. ಬುಧವಾರ ಬೆಳಗ್ಗೆ ಶುಭ ಸುದ್ದಿ ಸಿಗಲಿದ್ದು, ಬೆಳಗ್ಗೆಯೇ ಸೂಚನೆ ಸಿಕ್ಕರೆ ಬೇಗ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದಿದ್ದಾರೆ.

ಜನಪರ ಆಡಳಿತ ಗಮನದಲ್ಲಿಟ್ಟುಕೊಂಡು ಸಂಪುಟ ರಚನೆಯಾಗಲಿದೆ. ಸಾಮಾಜಿಕ ನ್ಯಾಯ, ವಲಸಿಗರ ಬಗ್ಗೆ ಚರ್ಚೆ ಆಗಿದೆ. ಜೆ. ಪಿ. ನಡ್ಡಾ ಅವರಿಗೆ ಕೆಲ ಸ್ಪಷ್ಟನೆ ನೀಡಲಾಗಿದೆ. ಬೆಳಗ್ಗೆ ಅಂತಿಮ ನಿರ್ಣಯ ತಿಳಿಸುವುದಾಗಿ ಅವರು ಹೇಳಿದ್ದಾರೆ. ಆ ಬಳಿಕ ನಾನು ಸಚಿವರ ಪಟ್ಟಿಯನ್ನು ರಾಜಭವನಕ್ಕೆ ಕಳಿಸಲಿದ್ದೇನೆ ಎಂದರು.

ಸಂಪುಟ ರಚನೆ ಬಗ್ಗೆ ಸಿಎಂ ಮಾಹಿತಿ

ಬೆಳಗ್ಗೆಯೇ ಮಾಹಿತಿ ಸಿಗುವ ವಿಶ್ವಾಸವಿದ್ದು, ಹಾಗಾದರೆ ಇಂದು ಸಂಜೆಯೊಳಗೆ ಪ್ರಮಾಣವಚನ ನಡೆಯಲಿದೆ. ಸಚಿವರ ಸಂಖ್ಯೆ ಕುರಿತಂತೆ, ಒಂದಿಬ್ಬರನ್ನು ಸೇರಿಸುವ ಹಾಗೂ ಉಪ ಮುಖ್ಯಮಂತ್ರಿಗಳ ಸೇರ್ಪಡೆ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಈ ಕುರಿತಂತೆ ಅಂತಿಮ ನಿರ್ಣಯವನ್ನು ಹೈಕಮಾಂಡ್​​ ಕೈಗೊಳ್ಳಲಿದ್ದು, ಅಲ್ಲಿಂದ ಮಾಹಿತಿ ಬಂದ ಕೂಡಲೇ ನಾನೇ ಅಂತಿಮ ಪಟ್ಟಿಯನ್ನು ಮಾಡಿ ಪ್ರಕಟ ಮಾಡಲಿದ್ದೇನೆ. ಮತ್ತೆ ಹೈಕಮಾಂಡ್​ ನಾಯಕರನ್ನು ಭೇಟಿ ಆಗುವುದಿಲ್ಲ. ಬೆಳಗ್ಗೆಯೇ 6.10ರ ಸಮಯದ ವಿಮಾನದಲ್ಲಿ ನಾನು ಬೆಂಗಳೂರಿಗೆ ತೆರಳಲಿದ್ದೇನೆ. ಅಂತಿಮ ಪಟ್ಟಿ ಬಗ್ಗೆ ಹೈಕಮಾಂಡ್​ನಿಂದ ಫೋನ್​ ಮೂಲಕ ನನಗೆ ಮಾಹಿತಿ ಬರಲಿದೆ ಎಂದು ತಿಳಿಸಿದರು.

ವಿಜಯೇಂದ್ರಗೆ ಸಚಿವ ಸ್ಥಾನ?

ಬಿ.ವೈ. ವಿಜಯೇಂದ್ರಗೆ ಸಚಿವ ಸ್ಥಾನ ನೀಡಬೇಕೆಂಬ ವಿಚಾರದ ಬಗ್ಗೆ ಯಡಿಯೂರಪ್ಪನವರು ತಮ್ಮೊಂದಿಗೆ ಮಾತನಾಡಿಲ್ಲ. ಈ ಬಗ್ಗೆ ಬುಧವಾರ ಬೆಳಗ್ಗೆ ವರಿಷ್ಠರು ಹಾಗೂ ಬಿಎಸ್​ವೈ ನಡುವೆ ಚರ್ಚೆ ನಡೆಯಲಿದೆ. ಚರ್ಚೆ ಬಳಿಕ ವಿಜಯೇಂದ್ರಗೆ ಸಚಿವ ಸ್ಥಾನ ಕೊಡುವ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಸಂಪುಟದಿಂದ ಹಿರಿಯರನ್ನು ಕೈಬಿಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನಿಲ್ಲ, 2023ರ ಚುನಾವಣೆ ಹಾಗೂ ಜನಪರ ಆಡಳಿತವನ್ನು ಗಮನದಲ್ಲಿಟ್ಟುಕೊಂಡು ಅನುಭವ ಹಾಗೂ ಹೊಸ ಚೈತನ್ಯದಿಂದ ಕೂಡಿರುವ ಸಂಪುಟ ರಚನೆಯಾಗಲಿದೆ. ಎರಡು ಹಂತದಲ್ಲಿ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ. ಎಲ್ಲವೂ ಬುಧವಾರ ಬೆಳಗ್ಗೆ ನಿರ್ಧಾರವಾಗಲಿದೆ ಎಂದು ಬೊಮ್ಮಾಯಿ ತಿಳಿಸಿದರು.

ಸಂಪುಟ ಕಸರತ್ತಿನಿಂದ ಸುಸ್ತಾಗಿಲ್ಲ:

ಸಂಪುಟ ರಚನೆ ಕಸರತ್ತಿನಿಂದ ನನಗೇನು ಸುಸ್ತಾದಂತೆ ಕಂಡುಬರುತ್ತಿಲ್ಲ. ಈ ಹಿಂದೆ ನಾನು 4-5 ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದು, ಇಂತಹ ಅನುಭವ ನನಗಿದೆ. ಕ್ಯಾಬಿನೆಟ್​ ರಚನೆ ಸಹಜ ಪ್ರಕ್ರಿಯೆಯಾಗಿದ್ದು, ಚರ್ಚೆ, ಪರ-ವಿರೋಧಗಳು ಸಾಮಾನ್ಯವಾಗಿದೆ. ವಲಸಿಗರ ಬಗ್ಗೆಯೂ ನಾನು ಚರ್ಚೆ ಮಾಡಿದ್ದು, ನಾನು ವಲಸಿಗರೆಂದು ಕರೆಯುವುದಿಲ್ಲ, ಅವರೆಲ್ಲ ನೆಲೆಸಿಗರು. ಅವರೂ ಕೂಡ ಬಿಜೆಪಿಯ ಭಾಗವಾಗಿದ್ದು, ಒಟ್ಟಾರೆ ಸಂಪುಟದ ನಿರ್ಣಯ ಮಾಡುವಲ್ಲಿ ಪ್ರಮುಖರಾಗಿರುತ್ತಾರೆ ಎಂದರು.

ಇದನ್ನೂ ಓದಿ: ಗಡಿಯಲ್ಲಿ ಉಗ್ರರೊಂದಿಗೆ ಗುಂಡಿನ‌ ಕಾಳಗ : ಕಲಬುರ್ಗಿಯ ಯೋಧ ಹುತಾತ್ಮ

Last Updated : Aug 4, 2021, 2:28 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.