ನವದೆಹಲಿ: ದೇಶದಲ್ಲಿ ಇದುವರೆಗೆ ನೀಡಲಾಗಿರುವ ಕೋವಿಡ್-19 ಲಸಿಕೆ ಪ್ರಮಾಣವು 23,88,40,635ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಮಾಹಿತಿ ಪ್ರಕಾರ, 18ರಿಂದ 44 ವರ್ಷದೊಳಗಿನ 13,32,471 ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಇದೇ ವಯಸ್ಸಿನ 76,723 ಜನರು ತಮ್ಮ ಎರಡನೇ ಡೋಸ್ ಕೂಡ ಪಡೆದುಕೊಂಡಿದ್ದಾರೆ.
ಒಟ್ಟಾರೆ 37 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ 3,17,37,869 ಜನರು ತಮ್ಮ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೀಕರಣ ಅಭಿಯಾನದ 3ನೇ ಹಂತವು ಆರಂಭವಾದಾಗಿನಿಂದ ಒಟ್ಟು 3,16,134 ಜನರು ತಮ್ಮ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ 18ರಿಂದ 44 ವರ್ಷದೊಳಗಿನ 10 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಒಟ್ಟು 23,88,40,635 ಜನರಲ್ಲಿ ಮೊದಲ ಡೋಸ್ ತೆಗೆದುಕೊಂಡ 99,95,552 ಆರೋಗ್ಯ ಕಾರ್ಯಕರ್ತರು ಮತ್ತು ಎರಡನೇ ಡೋಸ್ ತೆಗೆದುಕೊಂಡ 68,91,662 ಆರೋಗ್ಯ ಕಾರ್ಯಕರ್ತರಿದ್ದಾರೆ. 1,63,80,521 ಫ್ರಂಟ್ಲೈನ್ ಕಾರ್ಯಕರ್ತರು ಮೊದಲ ಡೋಸ್, 87,26,071 ಫ್ರಂಟ್ಲೈನ್ ಕಾರ್ಯಕರ್ತರು ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. 18ರಿಂದ 44 ವರ್ಷದೊಳಗಿನ 3,17,37,869 ಮಂದಿಗೆ ಮೊದಲ ಡೋಸ್ ಮತ್ತು ಅದೇ ವಯಸ್ಸಿನ 3,16,134 ಮಂದಿಗೆ 2ನೇ ಡೋಸ್ ನೀಡಲಾಗಿದೆ. ಇದರಲ್ಲಿ 45ರಿಂದ 60 ವರ್ಷದೊಳಗಿನ 7,25,46,765 ಜನರು ಮೊದಲ ಡೋಸ್, ಅದೇ ವಯಸ್ಸಿನ 1,15,34,478 ಜನರಿಗೆ 2ನೇ ಡೋಸ್, 6,12,75,505 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 1ನೇ ಡೋಸ್ ಮತ್ತು ಅದೇ ವಯಸ್ಸಿನ 1,94,36,078 ಫಲಾನುಭವಿಗಳಿಗೆ 2ನೇ ಡೋಸ್ ನೀಡಲಾಗಿದೆ.
ಲಸಿಕೀಕರಣ ಅಭಿಯಾನದ 144ನೇ ದಿನವಾದ ನಿನ್ನೆ (ಜೂನ್ 8) ಒಟ್ಟು 25,58,652 ಜನರಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ 22,67,842 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 2,90,810 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ: ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಅನೂಪ್ ಚಂದ್ರ ಪಾಂಡೆ ನೇಮಕ