ಗುರುದಾಸ್ಪುರ(ಪಂಜಾಬ್): ಪಾಕಿಸ್ತಾನದ ಕರ್ತಾರ್ಪುರ್ ಸಾಹಿಬ್(Sahib in Kartarpur) ಭೇಟಿ ನೀಡಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot Singh Sidhu) ವಿವಾದಿತ ಹೇಳಿಕೆ ನೀಡಿದ್ದು, ಇದೀಗ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
-
#KartarpurCorridor: #ImranKhan is like my big brother, says @INCPunjab
— Ravinder Singh Robin ਰਵਿੰਦਰ ਸਿੰਘ رویندرسنگھ روبن (@rsrobin1) November 20, 2021 " class="align-text-top noRightClick twitterSection" data="
chief #NavjotSinghSidhu whole interacting with Muhammad Latif CEO, PMU, #Kartarpur project. pic.twitter.com/JTlgGy7xAy
">#KartarpurCorridor: #ImranKhan is like my big brother, says @INCPunjab
— Ravinder Singh Robin ਰਵਿੰਦਰ ਸਿੰਘ رویندرسنگھ روبن (@rsrobin1) November 20, 2021
chief #NavjotSinghSidhu whole interacting with Muhammad Latif CEO, PMU, #Kartarpur project. pic.twitter.com/JTlgGy7xAy#KartarpurCorridor: #ImranKhan is like my big brother, says @INCPunjab
— Ravinder Singh Robin ਰਵਿੰਦਰ ਸਿੰਘ رویندرسنگھ روبن (@rsrobin1) November 20, 2021
chief #NavjotSinghSidhu whole interacting with Muhammad Latif CEO, PMU, #Kartarpur project. pic.twitter.com/JTlgGy7xAy
ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಕರ್ತಾರ್ಪುರ್ ಸಾಹಿಬ್ಗೆ ಭೇಟಿ ನೀಡಿರುವ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್(Pak PM Imran Khan) ತಮ್ಮ ಹಿರಿಯ ಸಹೋದರ ಎಂದು ಹೇಳಿಕೆ ನೀಡಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಪಶ್ಚಿಮ ಬಂಗಾಳದ ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಉಸ್ತುವಾರಿ ಅಮಿತ್ ಮಾಳವಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಮಾಳವಿಯಾ, ರಾಹುಲ್ ಗಾಂಧಿ ಅವರ ನೆಚ್ಚಿನ ನವಜೋತ್ ಸಿಂಗ್ ಸಿಧು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ಹಿರಿಯ ಸಹೋದರ ಎಂದು ಕರೆದಿದ್ದಾರೆ. ಈ ಹಿಂದೆ ಕೂಡ ಪಾಕ್ನ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಅವರನ್ನ ತಬ್ಬಿಕೊಂಡಿದ್ದರು. ಇಂತಹ ವ್ಯಕ್ತಿಯನ್ನ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಆಶ್ಚರ್ಯ ಮೂಡಿಸಿದೆ ಎಂದಿದ್ದಾರೆ.
-
Rahul Gandhi’s favourite Navjot Singh Sidhu calls Pakistan Prime Minister Imran Khan his “bada bhai”. Last time he had hugged Gen Bajwa, Pakistan Army’s Chief, heaped praises.
— Amit Malviya (@amitmalviya) November 20, 2021 " class="align-text-top noRightClick twitterSection" data="
Is it any surprise that the Gandhi siblings chose a Pakistan loving Sidhu over veteran Amarinder Singh? pic.twitter.com/zTLHEZT3bC
">Rahul Gandhi’s favourite Navjot Singh Sidhu calls Pakistan Prime Minister Imran Khan his “bada bhai”. Last time he had hugged Gen Bajwa, Pakistan Army’s Chief, heaped praises.
— Amit Malviya (@amitmalviya) November 20, 2021
Is it any surprise that the Gandhi siblings chose a Pakistan loving Sidhu over veteran Amarinder Singh? pic.twitter.com/zTLHEZT3bCRahul Gandhi’s favourite Navjot Singh Sidhu calls Pakistan Prime Minister Imran Khan his “bada bhai”. Last time he had hugged Gen Bajwa, Pakistan Army’s Chief, heaped praises.
— Amit Malviya (@amitmalviya) November 20, 2021
Is it any surprise that the Gandhi siblings chose a Pakistan loving Sidhu over veteran Amarinder Singh? pic.twitter.com/zTLHEZT3bC
ಇದನ್ನೂ ಓದಿರಿ: Farm Laws: ಮೃತ ರೈತ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಿ.. ಪ್ರಧಾನಿಗೆ ವರುಣ್ ಗಾಂಧಿ ಪತ್ರ
ನವೆಂಬರ್ 18ರಂದು ಪಾಕ್ನ ಕರ್ತಾರ್ಪುರ್ ಸಾಹಿಬ್ ಭೇಟಿಗೆ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ ನೇತೃತ್ವದ ರಾಜ್ಯ ಕ್ಯಾಬಿನೆಟ್ ಹಾಗೂ ನವಜೋತ್ ಸಿಂಗ್ ಸಿಧು ಪ್ರಯಾಣ ಬೆಳೆಸಿದ್ದರು. ಅಲ್ಲಿಗೆ ತೆರಳುತ್ತಿದ್ದಂತೆ ಮಾತನಾಡಿದ್ದ ಸಿಧು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ತಮ್ಮ ಹಿರಿಯ ಸಹೋದರ ಎಂದು ಹೊಗಳಿದ್ದರು.
ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ (Guru Nanak Dev)ಅವರ ಸ್ಥಳವಾಗಿರುವ ಪಾಕಿಸ್ತಾನದ ಕರ್ತಾರ್ಪುರ್ಗೆ ಪ್ರತಿ ವರ್ಷ ಭಾರತದಿಂದ ಸಿಖ್ರು ತೆರಳುತ್ತಾರೆ. ಪಂಜಾಬ್ನಿಂದ ಅತಿ ಹೆಚ್ಚಿನ ಜನರು ಇಲ್ಲಿಗೆ ಭೇಟಿ ನೀಡ್ತಾರೆ.