ನವದೆಹಲಿ: ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗೆ ಇದು ಶುಭ ಸುದ್ದಿ. ವೈದ್ಯಕೀಯ ಶಿಕ್ಷಣ ಪಡೆಯಲು ನೀಟ್ ಪರೀಕ್ಷೆಗೆ ಇದ್ದ ವಯೋಮಿತಿಯನ್ನು ಕೈಬಿಡಲಾಗಿದೆ. ಹೀಗಾಗಿ ಇನ್ನು ಮುಂದೆ ಎಲ್ಲಾ ವಯೋಮಾನದ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳಬಹುದು.
-
Under Graduate Medical Education Board, National Medical Commission removes the fixed upper age limit for appearing in the NEET-UG examination. pic.twitter.com/wTc3akQBDh
— ANI (@ANI) March 9, 2022 " class="align-text-top noRightClick twitterSection" data="
">Under Graduate Medical Education Board, National Medical Commission removes the fixed upper age limit for appearing in the NEET-UG examination. pic.twitter.com/wTc3akQBDh
— ANI (@ANI) March 9, 2022Under Graduate Medical Education Board, National Medical Commission removes the fixed upper age limit for appearing in the NEET-UG examination. pic.twitter.com/wTc3akQBDh
— ANI (@ANI) March 9, 2022
ನೀಟ್ ಪರೀಕ್ಷೆಯ ಮೂಲಕ ವೈದ್ಯಕೀಯ ಪದವಿ ಪಡೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 30 ವರ್ಷ ವಯೋಮಿತಿಯನ್ನು ಈ ಹಿಂದೆ ನಿಗದಿ ಮಾಡಲಾಗಿತ್ತು. ಇದರ ವಿರುದ್ಧ ದೇಶಾದ್ಯಂತ ಟೀಕೆ ವ್ಯಕ್ತವಾಗಿತ್ತು. ಸದ್ಯ ನಿಗದಿಯಾಗಿರುವ ವಯೋಮಿತಿ ಕೈಬಿಡಲು ರಾಷ್ಟ್ರೀಯ ವೈದ್ಯಕೀಯ ಆಯೋಗದ ಸಲಹೆಯ ಮೇರೆಗೆ ಪದವಿ ವೈದ್ಯಕೀಯ ಶಿಕ್ಷಣ ಮಂಡಳಿಯು ಈ ನಿರ್ಧಾರಕ್ಕೆ ಬಂದಿದೆ.
ಇದನ್ನೂ ಓದಿ: ನಾಳೆ ಪಂಚರಾಜ್ಯಗಳ ಚುನಾವಣೆ ಫಲಿತಾಂಶ.. ಬೆಳಗ್ಗೆ 8 ಗಂಟೆಯಿಂದ ರಿಸಲ್ಟ್ ತಿಳಿಯಲು ಇಲ್ಲಿದೆ ಲಿಂಕ್