ETV Bharat / bharat

ನೂಪುರ್​ ಶರ್ಮಾ ವಿರುದ್ಧ ತನಿಖೆಗೆ ಮುಂಬೈ ಸರ್ಕಾರ ಸೂಚನೆ.. ನೋಟಿಸ್​ ನೀಡಿದ ಪೊಲೀಸ್​ ಇಲಾಖೆ - ನೂಪುರ್​ ಶರ್ಮಾಗೆ ನೋಟಿಸ್​ ಜಾರಿ

ಆಕ್ಷೇಪಾರ್ಹ ಧಾರ್ಮಿಕ ಹೇಳಿಕೆ ನೀಡಿದ ನೂಪುರ್​ ಶರ್ಮಾ ವಿರುದ್ಧ ಪೊಲೀಸರು ವಿಚಾರಣೆಗೆ ಹಾಜರಾಗಲು ಸಮನ್ಸ್​ ಜಾರಿ ಮಾಡಿದ್ದಾರೆ. ಜೂನ್​ 22 ರಂದು ವಿಚಾರಣೆ ಎದುರಿಸಲು ತಿಳಿಸಲಾಗಿದೆ.

mumbai-govt-instructs-probe-against-nupur-sharma
ನೂಪುರ್​ ಶರ್ಮಾ ವಿರುದ್ಧ ತನಿಖೆಗೆ ಮುಂಬೈ ಸರ್ಕಾರ ಸೂಚನೆ
author img

By

Published : Jun 7, 2022, 5:20 PM IST

ಮುಂಬೈ(ಮಹಾರಾಷ್ಟ್ರ): ಪ್ರವಾದಿ ಮಹಮ್ಮದ್​ ಪೈಗಂಬರ್​ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ನೂಪುರ್​ ಶರ್ಮಾರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್​ 22 ರಂದು ವಿಚಾರಣೆ ಹಾಜರಾಗಲು ಮುಂಬೈ ಪೊಲೀಸರು ಸಮನ್ಸ್​ ಜಾರಿ ಮಾಡಿದ್ದಾರೆ. ಅಲ್ಲದೇ, ಸರ್ಕಾರವೂ ಕೂಡ ಶರ್ಮಾರ ವಿರುದ್ಧ ತನಿಖೆಗೆ ಸೂಚಿಸಿದೆ.

ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇರೆಗೆ ನೂಪುರ್​ ಶರ್ಮಾ ವಿರುದ್ಧ ಮುಂಬ್ರಾ ಪೊಲೀಸ್ ಠಾಣೆಯಲ್ಲಿ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ದೂರು ದಾಖಲಿಸಿದೆ. ಇದೀಗ ಮೊಹಮ್ಮದ್ ಗುಫ್ರಾನ್ ಅಕ್ಮಲ್ ಖಾನ್ ಎಂಬುವವರು ನೀಡಿದ ದೂರಿನ ಮೇರೆಗೆ ಥಾಣೆಯ ಮುಂಬ್ರಾ ಪೊಲೀಸರು ನೂಪುರ್ ಶರ್ಮಾ ವಿರುದ್ಧ ಸೆಕ್ಷನ್ 153 ಎ, 153 ಬಿ, 295 ಎ, 298 ಮತ್ತು 505 ರ ಅಡಿ ಪ್ರಕರಣ ದಾಖಲಿಸಿಕೊಂಡು ಜೂನ್​ 22 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್​ ಜಾರಿ ಮಾಡಿದ್ದಾರೆ.

ಟಿವಿ ಚರ್ಚೆಯೊಂದರಲ್ಲಿ ನೂಪುರ್ ಶರ್ಮಾ ಪ್ರವಾದಿ ಮಹಮ್ಮದ್​ರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಮುಂಬೈನ ರೆಜಾ ಅಕಾಡೆಮಿ ಮುಂಬೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.

ಈ ಬಗ್ಗೆ ಹೇಳಿಕೆ ನೀಡಿರುವ ರಾಜ್ಯ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ವಿವಾದಾತ್ಮಕ ಹೇಳಿಕೆಯ ಆಧಾರದ ಮೇಲೆ ನೂಪುರ್ ಶರ್ಮಾ ವಿರುದ್ಧ ಪೊಲೀಸರ ತನಿಖೆ ಆರಂಭಿಸಿದ್ದಾರೆ. ಆಕೆಯ ವಿರುದ್ಧ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಓದಿ: ನಟ ಸಲ್ಮಾನ್​ಗೆ ಜೀವ ಬೆದರಿಕೆ ಪತ್ರ ಯಾರು ಬರೆದಿದ್ದಾರೋ ಗೊತ್ತಿಲ್ಲ: ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.