ETV Bharat / bharat

ಬುಲ್ಲಿ ಬಾಯ್ ಆ್ಯಪ್​ ಕೇಸ್​: ಬೆಂಗಳೂರು ಮೂಲದ ವಿದ್ಯಾರ್ಥಿ ವಶಕ್ಕೆ ಪಡೆದ ಮುಂಬೈ ಪೊಲೀಸರು

author img

By

Published : Jan 4, 2022, 6:49 AM IST

ಮೊಬೈಲ್ ಆ್ಯಪ್​ನಲ್ಲಿ ಮಹಿಳೆಯರ ತಿರುಚಲಾದ ಫೋಟೋಗಳನ್ನು ಅಪ್ಲೋಡ್ ಮಾಡಲಾಗುತ್ತಿತ್ತು ಎಂಬ ಆರೋಪದ ಮೇಲೆ ಬೆಂಗಳೂರು ಮೂಲದ ವಿದ್ಯಾರ್ಥಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Mumbai cyber cell arrests suspect in Bangalore case
ಬುಲ್ಲಿ ಬಾಯ್ ಆ್ಯಪ್​ ಕೇಸ್​: ಬೆಂಗಳೂರು ಮೂಲದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು

ಮುಂಬೈ, ಮಹಾರಾಷ್ಟ್ರ : 'ಬುಲ್ಲಿ ಬಾಯಿ' ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್​ನ ಸೈಬರ್ ಸೆಲ್ ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಸೋಮವಾರ ವಶಕ್ಕೆ ಪಡೆದಿದೆ.

ಆರೋಪಿಯ ವಿರುದ್ಧ ಐಪಿಸಿ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯ ಕುರಿತು ಬೇರೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆತನನ್ನು ಮುಂಬೈಗೆ ಕರೆತಂದು ವಿಚಾರಣೆ ನಡೆಸಲಾಗುತ್ತದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಶಂಕಿತರಿದ್ದು, ಅವರನ್ನೂ ಬಂಧಿಸುವ ಸಾಧ್ಯತೆ ಇದೆ.

ಏನಿದು ಬುಲ್ಲಿಬಾಯ್ ಆ್ಯಪ್ ಕೇಸ್?

ಬುಲ್ಲಿ ಬಾಯ್ ಇಂದೊಂದು ಮೊಬೈಲ್ ಅಪ್ಲಿಕೇಷನ್​​ ಆಗಿದ್ದು, ಈ ಅಪ್ಲಿಕೇಷನ್​ ಗೂಗಲ್ ಪ್ಲೇಸ್ಟೋರ್ ರೀತಿಯ ಮತ್ತೊಂದು ಪ್ಲಾಟ್​ಫಾರ್ಮ್ ಆದ ಗಿಟ್​ಹಬ್​​ನಲ್ಲಿ (GitHub) ದೊರೆಯುತ್ತದೆ. ಈ ಅಪ್ಲಿಕೇಷನ್​ನಲ್ಲಿ ಮುಸ್ಲಿಂ ಮಹಿಳೆಯರ ತಿರುಚಲಾದ ಫೋಟೋಗಳನ್ನು ಅಪ್ಲೋಡ್ ಮಾಡಲಾಗುತ್ತಿತ್ತು ಎಂದು ಮಹಿಳಾ ಪತ್ರಕರ್ತೆಯೊಬ್ಬರು ಟ್ವಿಟರ್‌ನಲ್ಲಿ ವಿಷಯ ಹಂಚಿಕೊಂಡಿದ್ದರು. ಈ ಆ್ಯಪ್​ನಲ್ಲಿ ಮುಸ್ಲಿಂ ಮಹಿಳೆಯರನ್ನು ಟಾರ್ಗೆಟ್​ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ನವಾಬ್ ಮಲಿಕ್ ಈ ಬಗ್ಗೆ ಗೃಹ ಇಲಾಖೆಗೆ ದೂರು ನೀಡುವುದಾಗಿ ಹೇಳಿದ್ದರು. ಮತ್ತೊಂದೆಡೆ ಪೊಲೀಸರು ಬುಲ್ಲಿಬಾಯ್ ಆ್ಯಪ್, ಗಿಟ್​ಹಬ್ ಮತ್ತು ಬುಲ್ಲಿಬಾಯ್ ಆ್ಯಪ್ ಅನ್ನು ಪ್ರಮೋಟ್ ಮಾಡುವ ಟ್ವಿಟರ್​ ಹ್ಯಾಂಡಲ್​ಗಳ ಮೇಲೆ ದೂರನ್ನು ದಾಖಲಿಸಿ, ತನಿಖೆ ನಡೆಸಿದ್ದರು.

ದೆಹಲಿಯಲ್ಲೂ ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಪ್ರಕರಣದ ತನಿಖೆಯಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ಪೊಲೀಸ್ ಸಂಸ್ಥೆಗಳೊಂದಿಗೆ ಕೇಂದ್ರ ಸರ್ಕಾರವೂ ಕೆಲಸ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್​​ ಸುರಿದುಕೊಂಡು ಆತ್ಮಹತ್ಯೆ: ಒಂದೇ ಕುಟುಂಬದ ಮೂವರ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.