ETV Bharat / bharat

ಟೋಲ್​ ಪ್ಲಾಜಾದಲ್ಲಿ ನಿಂತಿದ್ದ ವಾಹನಗಳಿಗೆ ಗುದ್ದಿದ ಇನ್ನೋವಾ: 3 ಸಾವು, 6 ಮಂದಿಗೆ ಗಾಯ - ಸೀ ಲಿಂಕ್​ ಟೋಲ್ ಪ್ಲಾಜಾ

ಮುಂಬೈನಲ್ಲಿ ಕಳೆದ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದು, ಆರು ಜನರು ಗಾಯಗೊಂಡಿದ್ದಾರೆ.

several injured in multiple car crash at Bandra  Bandra Worli Sea Link toll plaza  people died in Bandra plaza accident  Bandra Worli Sea Link toll plaza accident  ಟೋಲ್​ ಪ್ಲಾಜಾದಲ್ಲಿ ನಿಂತಿದ್ದ ಆರು ವಾಹನಗಳಿಗೆ ಡಿಕ್ಕಿ  ಆರು ಮಂದಿಗೆ ಗಾಯ  ಮುಂಬೈನಲ್ಲಿ ಕಳೆದ ರಾತ್ರಿ ಭೀಕರ ರಸ್ತೆ ಅಪಘಾತ  ಮೂವರು ಮೃತ  ವಾಣಿಜ್ಯ ನಗರಿ ಮುಂಬೈನಲ್ಲಿ ಭೀಕರ ರಸ್ತೆ ಅಪಘಾತ  ಸೀ ಲಿಂಕ್​ ಟೋಲ್ ಪ್ಲಾಜಾ  ನಿಂತ ವಾಹನಗಳಿಗೆ ಡಿಕ್ಕಿ ಹೊಡೆದ ಕಾರು
ಟೋಲ್​ ಪ್ಲಾಜಾದಲ್ಲಿ ನಿಂತಿದ್ದ ಆರು ವಾಹನಗಳಿಗೆ ಡಿಕ್ಕಿ ಹೊಡೆದ ಇನ್ನೋವಾ
author img

By ETV Bharat Karnataka Team

Published : Nov 10, 2023, 10:40 AM IST

ಮುಂಬೈ(ಮಹಾರಾಷ್ಟ್ರ): ವಾಣಿಜ್ಯ ನಗರಿ ಮುಂಬೈನ ಸೀ ಲಿಂಕ್​ ಟೋಲ್ ಪ್ಲಾಜಾದಲ್ಲಿ ನಿಂತಿದ್ದ ಆರು ವಾಹನಗಳಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗುರುವಾರ ರಾತ್ರಿ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂದ್ರಾ ವರ್ಲಿ ಸೀ ಲಿಂಕ್ ಸಮೀಪ ಅಪಘಾತದಿಂದಾಗಿ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಅಪಘಾತಕ್ಕೀಡಾದ ಕಾರುಗಳು ತೀವ್ರವಾಗಿ ಹಾನಿಗೊಳಗಾಗಿವೆ.

ಇನ್ನೋವಾ ಕಾರು ವರ್ಲಿ ಕಡೆಗೆ ವೇಗವಾಗಿ ಬರುತ್ತಿತ್ತು. ಚಾಲಕ ಸಿ-ಲಿಂಕ್​ ಬರುವ ಮುನ್ನ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಗಾಬರಿಗೊಂಡ ಆತ ಬಾಂದ್ರಾದೆಡೆಗೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಸೀ ಲಿಂಕ್‌ನಲ್ಲಿರುವ ಟೋಲ್ ಪ್ಲಾಜಾದಲ್ಲಿ ಅನೇಕ ವಾಹನಗಳಿದ್ದವು. ಅತಿವೇಗವಾಗಿ ಬಂದ ಕಾರು ಇತರೆ ವಾಹನಗಳಿಗೂ ಡಿಕ್ಕಿ ಹೊಡೆದಿದೆ.

ಸಾವನ್ನಪ್ಪಿದವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಕಾರು ಚಾಲಕ ಕೂಡ ಗಾಯಗೊಂಡಿದ್ದಾನೆ. ನಾಲ್ವರು ಬಾಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸ್ಚಾರ್ಜ್ ಆದ ನಂತರ ಚಾಲಕನನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪೂರ್ವ ಸಿರಿಯಾದ ಇರಾನ್‌ ಬೆಂಬಲಿತ ನೆಲೆಗಳ ಮೇಲೆ ಅಮೆರಿಕ ದಾಳಿ

  • #WATCH | Mumbai: Zone 9 DCP Krishnakant Upadhyay said, "Today around 10:15 am, a vehicle was going north from Worli towards Bandra, 100 meters before the toll plaza on sea link, it collided with a vehicle. After colliding the car sped up and hit 2-3 vehicles at the toll plaza. A… https://t.co/J6JHQr4Lzj pic.twitter.com/wWRcEqMpNR

    — ANI (@ANI) November 9, 2023 " class="align-text-top noRightClick twitterSection" data=" ">

ಡಿಸಿಪಿ ಕೃಷ್ಣಕಾಂತ್ ಉಪಾಧ್ಯಾಯ ಪ್ರತಿಕ್ರಿಯಿಸಿ, "ನಿನ್ನೆ ರಾತ್ರಿ 10:15 ರ ಸುಮಾರಿಗೆ ಬಾಂದ್ರಾ ಕಡೆಗೆ ಹೋಗುತ್ತಿದ್ದ ಕಾರೊಂದು ಸೀ ಲಿಂಕ್​ ಟೋಲ್ ಪ್ಲಾಜಾಕ್ಕಿಂತ 100 ಮೀಟರ್ ಮೊದಲು ವಾಹನವೊಂದಕ್ಕೆ ಡಿಕ್ಕಿ ಹೊಡೆದಿದೆ. ನಂತರ ತಪ್ಪಿಸಿಕೊಳ್ಳುವ ಭರದಲ್ಲಿ ಚಾಲಕ ಟೋಲ್ ಪ್ಲಾಜಾದಲ್ಲಿ ನಿಂತಿದ್ದ ವಾಹನಗಳಿಗೂ ಗುದ್ದಿದ್ದಾನೆ. ಘಟನೆಯಲ್ಲಿ ಒಟ್ಟು 6 ವಾಹನಗಳು ಜಖಂಗೊಂಡಿವೆ. ಇಲ್ಲಿಯವರೆಗೆ ಒಟ್ಟು 9 ಜನರು ಗಾಯಗೊಂಡಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ. 6 ಜನರು ಚಿಕಿತ್ಸೆಯಲ್ಲಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ" ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.