ಕೇರಳ: ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರದಲ್ಲಿಯೂ ಪುರುಷರಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ. ಆದರೆ ಸಾಮಾನ್ಯವಾಗಿ ವೇದಾಧ್ಯಯನ ಪುರುಷರಿಗಷ್ಟೇ ಸೀಮಿತವಾಗಿದೆ. ವೇದ, ಶಾಸ್ತ್ರ, ಸಂಸ್ಕೃತ, ದೇವಾಲಯಗಳಲ್ಲಿ ಪೂಜೆ, ಪೌರೋಹಿತ್ಯ ಪುರುಷರಿಗೆ ಮಾತ್ರ ಸೂಕ್ತ ಎಂಬ ನಂಬಿಕೆ ಇದೆ. ಇದೆಲ್ಲರ ನಡುವೆ, ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣೂ ಸಹ ಪೌರೋಹಿತ್ಯ ಮಾಡಿ ಗೌರವ ಸಂಪಾದಿಸಹುದು ಎನ್ನುವುದನ್ನು ಕೇರಳದ ತಾಯಿ-ಮಗಳಿಬ್ಬರು ತೋರಿಸಿಕೊಟ್ಟಿದ್ದಾರೆ.
ಹೌದು, ಕೇರಳದಲ್ಲಿ ಪೌರೋಹಿತ್ಯ ಮತ್ತು ತಾಂತ್ರಿಕ ಆಚರಣೆಗಳಲ್ಲಿ ಶತಮಾನಗಳಿಂದಲೂ ಪುರುಷ ಪ್ರಾಬಲ್ಯವಿದೆ. ಆದ್ರೆ, ಈ ಪರದೆಯನ್ನು ಸರಿಸಿ ಮೌನವಾಗಿ ಇತಿಹಾಸ ಸೃಷ್ಟಿಸುತ್ತಿರುವ 24 ವರ್ಷದ ಜ್ಯೋತ್ಸ್ನಾ ಪದ್ಮನಾಭನ್ ಮತ್ತು ಆಕೆಯ ತಾಯಿ ಅರ್ಚನಾ ಕುಮಾರಿ (47) ಅವರ ಕುರಿತಾದ ಕಥೆ ಇಲ್ಲಿದೆ ನೋಡಿ.
ಬಾಲ್ಯದಿಂದಲೂ ತಂದೆಯೊಂದಿಗೆ ದೇವಸ್ಥಾನದಲ್ಲಿ ಪೂಜೆ ನಡೆಸಲು ಹಂಬಲಿಸುತ್ತಿದ್ದ ಅರ್ಚನಾ ಕುಮಾರಿ ಅವರು ಇದೀಗ ಮಗಳಿಗೂ ತಮ್ಮ ಕಲೆಯನ್ನು ಹೇಳಿ ಕೊಡುತ್ತಿದ್ದಾರೆ. ಈ ಇಬ್ಬರೂ ಮಹಿಳೆಯರು ಕೇರಳ ಜಿಲ್ಲೆಯ ದೇವಸ್ಥಾನದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ವೇಳೆ ನೆರೆಯ ದೇವಾಲಯಗಳಲ್ಲಿ ಮತ್ತು ಇತರೆ ಸ್ಥಳಗಳಲ್ಲಿ ತಾಂತ್ರಿಕ ಆಚರಣೆಗಳನ್ನು ಮಾಡುತ್ತಿದ್ದಾರೆ.
ಪುರಾತನ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಇರಿಂಜಲಕುಡದ ಕಟ್ಟೂರಿನ ಥರನೆಲ್ಲೂರು ತೆಕ್ಕಿನಿಯೇದತ್ತು ಮನದ ಜ್ಯೋತ್ಸ್ನಾ ಮತ್ತು ಅರ್ಚನಾ ಅವರು ತಮ್ಮ ಶುದ್ಧ ಭಕ್ತಿಯಿಂದ ಮಾತ್ರ ಪುರೋಹಿತ ಜಗತ್ತಿಗೆ ಪ್ರವೇಶಿಸಿದ್ದು, ಸಮಾಜದಲ್ಲಿ ಯಾವುದೇ ಅಂಶವನ್ನು ಸಾಬೀತುಪಡಿಸಲು ಅಲ್ಲ. ಇದನ್ನು ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಲಿಂಗ ಸಮಾನತೆಯ ಸ್ಟೀರಿಯೊಟೈಪ್ಗಳನ್ನು ಮುರಿಯುವ ಯಾವುದೇ ಪ್ರಯತ್ನವೆಂದು ನಾವು ಕರೆಯಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವೇದ ಮತ್ತು ಸಾಹಿತ್ಯ (ಸಂಸ್ಕೃತ)ದಲ್ಲಿ ಎರಡು ಸ್ನಾತಕೋತ್ತರ ಪದವೀಧ ಪಡೆದಿರುವ ಜ್ಯೋತ್ಸ್ನಾ ಏಳು ವರ್ಷದವಳಿದ್ದಾಗಿನಿಂದ ಮಂತ್ರಗಳನ್ನು ಕಲಿಯಲು ಪ್ರಾರಂಭಿಸಿದಳು. ಆದ್ರೆ, ನಾನು ಚಿಕ್ಕ ವಯಸ್ಸಿನಲ್ಲಿ ಆಕೆಗಿಂತಲೂ ಮುಂಚೆಯೇ ಪ್ರಾರಂಭಿಸಿದೆ. ನನ್ನ ತಂದೆ ಪದ್ಮನಾಭನ್ ನಂಬೂತಿರಿಪಾಡ್ ಅವರು ಪೂಜೆಗಳು ಮತ್ತು ತಾಂತ್ರಿಕ ವಿಧಿ ವಿಧಾನಗಳನ್ನು ನಡೆಸುವುದನ್ನು ನೋಡುತ್ತಾ ಬೆಳೆದಿದ್ದೇನೆ. ಹಾಗಾಗಿ, ಇದನ್ನು ಕಲಿಯುವ ಕನಸು ಚಿಕ್ಕ ವಯಸ್ಸಿನಿಂದಲೂ ನನ್ನ ಮನಸ್ಸಿನಲ್ಲಿ ಚಿಗುರಿತು" ಎಂದು ಅರ್ಚಕಿ ಅರ್ಚನಾ ತಿಳಿಸಿದ್ದಾರೆ.
"ಇದು ಹೆಂಗಸರು ಸಾಮಾನ್ಯವಾಗಿ ಮಾಡುವ ಕೆಲಸವಲ್ಲ ಎಂದು ತಿಳಿಯುವ ಮೊದಲೇ ಈ ಕೆಲಸದ ಬಗ್ಗೆ ಮನದಲ್ಲಿ ಆಸೆ ಚಿಗುರಿತು. ತಂದೆಯ ಬಳಿ ನನ್ನ ಆಸೆಯನ್ನು ಹೇಳಿದಾಗ ಅವರು ವಿರೋಧಿಸಲಿಲ್ಲ, ಎಲ್ಲಾ ರೀತಿಯ ಬೆಂಬಲ ನೀಡಿದರು. ಯಾವುದೇ ಪುರಾತನ ಗ್ರಂಥಗಳು ಅಥವಾ ಸಂಪ್ರದಾಯಗಳು ಮಹಿಳೆಯರು ತಾಂತ್ರಿಕ ಆಚರಣೆಗಳನ್ನು ಅಥವಾ ಮಂತ್ರಗಳನ್ನು ಪಠಿಸುವುದನ್ನು ನಿರ್ಬಂಧಿಸಿಲ್ಲ " ಎಂದು ಮಹಿಳಾ ಪೂಜಾರಿ ಹೇಳಿದ್ದಾರೆ.
ಇದನ್ನೂ ಓದಿ : 135 ವರ್ಷಗಳ ಪುರಾತನ ದೇವಾಲಯಕ್ಕೆ 6 ಕೋಟಿ ನೋಟು, ಚಿನ್ನಾಭರಣದಿಂದ ಅಲಂಕಾರ..!
ಕಳೆದ ಕೆಲವು ವರ್ಷಗಳಿಂದ ಅರ್ಚನಾ ಅವರು ತಾಂತ್ರಿಕ ಆಚರಣೆಗಳನ್ನು ನಡೆಸುತ್ತಿದ್ದಾರೆ. ಆಯಾ ದೇವಾಲಯದ ಆಡಳಿತ ಮಂಡಳಿಗಳ ಕೋರಿಕೆಯಂತೆ ಹತ್ತಿರದ ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಮತ್ತು ಪುನರ್ ಪ್ರತಿಷ್ಠಾಪನೆ ಕಾರ್ಯ ನೆರವೇರಿಸುತ್ತಾರೆ. ಆದರೆ, ಮುಟ್ಟಿನ ಸಮಯದಲ್ಲಿ ಮಾತ್ರ ಇಬ್ಬರೂ ಪುರೋಹಿತರ ಕರ್ತವ್ಯಗಳಿಂದ ದೂರವಿರುತ್ತಾರಂತೆ.