ETV Bharat / bharat

ಕಳೆದ 30 ರಿಂದ 40 ವರ್ಷಗಳಲ್ಲಿ ಭಾರತ-ಚೀನಾ ಸಂಬಂಧ ಅತ್ಯಂತ ಕಠಿಣ ಹಂತ ತಲುಪಿದೆ : ಜೈಶಂಕರ್ - ದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್

ಭಿನ್ನಾಭಿಪ್ರಾಯಗಳ ನಡುವೆಯೂ ಉಭಯ ದೇಶಗಳು ಗಡಿಯಲ್ಲಿ ಶಾಂತಿ ಕಾಪಾಡಿಕೊಂಡಿವೆ. ಈ ವರ್ಷದ ಮೇ ತಿಂಗಳಿನಿಂದ ಗಡಿಯಲ್ಲಿ ನಿಯಮಗಳ ಉಲ್ಲಂಘನೆ ಕಂಡು ಬಂದಿಲ್ಲ..

Most difficult phase with China in last 30-40 years
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್
author img

By

Published : Dec 9, 2020, 7:31 PM IST

ನವದೆಹಲಿ : ಕಳೆದ 30 ರಿಂದ 40 ವರ್ಷಗಳಲ್ಲಿ ಭಾರತವು ಚೀನಾದೊಂದಿಗಿನ ಸಂಬಂಧದ ಅತ್ಯಂತ ಕಠಿಣ ಹಂತದಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಲೋವಿ ಸಂಸ್ಥೆ ಆಯೋಜಿಸಿದ್ದ ವೆಬ್‌ನಾರ್‌ನಲ್ಲಿ ಮಾತನಾಡಿದ ಅವರು, ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಈ ವರ್ಷ ಹೆಚ್ಚು ಹಾನಿಯಾಗಿದೆ.

ಪೂರ್ವ ಲಡಾಖ್‌​​ನ ಎಲ್‌ಎಸಿಯಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಉಲ್ಲೇಖಿಸಿದ ಸಚಿವರು, ಚೀನಾ ದೇಶ ಸಾವಿರ ಸೈನಿಕರನ್ನು ಪೂರ್ಣ ಮಿಲಿಟರಿ ಸಿದ್ಧತೆಯೊಂದಿಗೆ ವಾಸ್ತವಿಕ ಗಡಿಗೆ ಕರೆತಂದಿದೆ ಎಂದು ಹೇಳಿದ್ದಾರೆ.

1975ರ ನಂತರ ಮೊದಲ ಬಾರಿಗೆ ಗಡಿಯಲ್ಲಿ ಸಾವುನೋವುಗಳು ಸಂಭವಿಸಿವೆ. ಭಾರತ ತನ್ನ 20 ಸೈನಿಕರನ್ನು ಕಳೆದುಕೊಂಡಿದೆ. ಇದು ರಾಷ್ಟ್ರೀಯ ಭಾವನೆಯನ್ನು ಬದಲಾಯಿಸಿತು ಎಂದು ಮಾಹಿತಿ ನೀಡಿದ್ರು.

ಭಿನ್ನಾಭಿಪ್ರಾಯಗಳ ನಡುವೆಯೂ ಉಭಯ ದೇಶಗಳು ಗಡಿಯಲ್ಲಿ ಶಾಂತಿ ಕಾಪಾಡಿಕೊಂಡಿವೆ. ಈ ವರ್ಷದ ಮೇ ತಿಂಗಳಿನಿಂದ ಗಡಿಯಲ್ಲಿ ನಿಯಮಗಳ ಉಲ್ಲಂಘನೆ ಕಂಡು ಬಂದಿಲ್ಲ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.