ಬಕ್ಸಾರ್: 50ಕ್ಕೂ ಹೆಚ್ಚು ಮೃತದೇಹಗಳು ಗಂಗಾ ನದಿಯಲ್ಲಿ ತೇಲಿ ಬಂದಿದ್ದು, ನಗರದ ಜನ ಆತಂಕ ಪಡುತ್ತಿದ್ದಾರೆ.
ಓದಿ: ಕ್ರಿಕೆಟಿಗ ಚಾವ್ಲಾ ತಂದೆ ಕೋವಿಡ್ಗೆ ಬಲಿ.. ಭಾವುಕರಾಗಿ ಪೋಸ್ಟ್ ಮಾಡಿದ ಪಿಯೂಷ್
ಬಕ್ಸರ್ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಗಂಗಾ ನದಿಯ ದಡದ ಬಳಿಯಿರುವ ಮಹಾದೇವ್ ಘಾಟ್ನಲ್ಲಿ ಸುಮಾರು 50ಕ್ಕೂ ಹೆಚ್ಚು ಮೃತದೇಹಗಳು ತೇಲಿ ಬಂದಿದ್ದು, ಮೃತದೇಹಗಳನ್ನು ನಾಯಿಗಳು ತಿನ್ನುತ್ತಿರುವುದು ಕಂಡು ಬಂದಿದೆ.
ಮೃತ ದೇಹಗಳು ಇಲ್ಲಿನ ಮಹಾದೇವ್ ಘಾಟ್ನಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿ ಕಂಡು ಬಂದಿವೆ. ಕೊರೊನಾ ಸಮಯದಲ್ಲಿ ಮನೆಯಲ್ಲೇ ಮೃತಪಟ್ಟವರ ದೇಹಗಳನ್ನು ಆಯಾ ಕುಟುಂಬಸ್ಥರು ಗಂಗಾ ನದಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ.
ಮೃತ ದೇಹಗಳು ತೇಲಿ ಬಂದಿರುವುದರ ಬಗ್ಗೆ ‘ಈಟಿವಿ ಭಾರತ’ ಜಿಲ್ಲಾಡಳಿತದ ಗಮನಕ್ಕೆ ತಂದಿದೆ. ಸುದ್ದಿ ತಿಳಿದ ಕೂಡಲೇ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.