ETV Bharat / bharat

ಗುಜರಾತ್​ನಲ್ಲಿ ಮತ್ತೊಂದು ಗುಂಪು ದಾಳಿ : ಯುವಕರಿಬ್ಬರಿಗೆ ಚಾಕುವಿನಿಂದ ಇರಿದ 6 ಜನರ ಗುಂಪು - ಅಹ್ಮದಾಬಾದ್​ನಲ್ಲಿ ಗುಂಪು ದಾಳಿ

6 ಜನರಿದ್ದ ಗುಂಪೊಂದು(Mob lynching)ಅನ್ಯಕೋಮಿನ ಇಬ್ಬರು ಯುವಕರನ್ನು ನಿಂದಿಸಿದ್ದಲ್ಲದೇ, ಅವರ ಮೇಲೆ ಚಾಕುವಿನಿಂದ ದಾಳಿ(attacked with knives)ಮಾಡಿದ್ದಾರೆ. ಘಟನೆಯಲ್ಲಿ ಓರ್ವ ಯುವಕ ಗಂಭೀರವಾಗಿ ಗಾಯಗೊಂಡರೆ, ಇನ್ನೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿವೆ..

author img

By

Published : Nov 21, 2021, 3:39 PM IST

ಅಹ್ಮದಾಬಾದ್​(ಗುಜರಾತ್) : ಗುಜರಾತ್​ನಲ್ಲಿ ಗುಂಪು ದಾಳಿ, ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಅಹ್ಮದಾಬಾದ್​ನಲ್ಲಿ ಇತ್ತೀಚೆಗೆ ನಡೆದಿದೆ.

6 ಜನರಿದ್ದ ಗುಂಪೊಂದು(Mob lynching)ಅನ್ಯಕೋಮಿನ ಇಬ್ಬರು ಯುವಕರನ್ನು ನಿಂದಿಸಿದ್ದಲ್ಲದೇ, ಅವರ ಮೇಲೆ ಚಾಕುವಿನಿಂದ ದಾಳಿ(attacked with knives in Ahmedabad) ಮಾಡಿದ್ದಾರೆ.

ಘಟನೆಯಲ್ಲಿ ಓರ್ವ ಯುವಕ ಗಂಭೀರವಾಗಿ ಗಾಯಗೊಂಡರೆ, ಇನ್ನೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಲ್ಲಿನ ಸಿಯೋಲ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗೊತ್ತಾಗಿದೆ.

ಅಹ್ಮದಾಬಾದ್​ನ ಉಸ್ಮಾನ್​ಪುರ ಉದ್ಯಾನದ ಮುಂದೆ ಇಬ್ಬರು ಯುವಕರು ಕುಳಿತಾಗ, ಅದೇ ಸ್ಥಳಕ್ಕೆ ಬಂದ 6 ಜನರ ಗುಂಪು ಇವರ ಹೆಸರನ್ನು ಕೇಳಿದ್ದಾರೆ. ಬಳಿಕ ನಿಂದಿಸಲು ಪ್ರಾರಂಭಿಸಿದ್ದಾರೆ.

ಇದನ್ನು ವಿರೋಧಿಸಿದ ಯುವಕರ ಮೇಲೆ ಗುಂಪು ದಾಳಿ ಮಾಡಿ ಇಬ್ಬರನ್ನೂ ಚಾಕುವಿನಿಂದ ಇರಿದಿದ್ದಾರೆ. ಇದರಲ್ಲಿ ನೌಶಾದ್​ ಎಂಬುವ ಗಂಭೀರವಾಗಿ ಗಾಯಗೊಂಡರೆ, ರೋಹನ್​ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗುಂಪು ದಾಳಿಕೋರರಿಂದ ತಪ್ಪಿಸಿಕೊಳ್ಳಲು ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ನೌಶಾದ್​ನನ್ನು ಸ್ಥಳೀಯರು ಕಂಡು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಮಧ್ಯೆ ಘಟನೆಯನ್ನು ಖಂಡಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಸಂತ್ರಸ್ತ ಯುವಕರಿಗೆ ನ್ಯಾಯ ಒದಗಿಸಲು ಹೋರಾಡುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.