ETV Bharat / bharat

ದೆಹಲಿ ಮದ್ಯ ಹಗರಣ: ಇಡಿ ಚಾರ್ಜ್ ಶೀಟ್​ನಲ್ಲಿ ಕೆಸಿಆರ್​ ಪುತ್ರಿ ಕವಿತಾ ಸೇರಿ ಹಲವರ ಹೆಸರು ಉಲ್ಲೇಖ - ಇಡಿ ಚಾರ್ಜ್ ಶೀಟ್​

ದೆಹಲಿ ಮದ್ಯ ಹಗರಣದಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ ಪುತ್ರಿ, ವಿಧಾನ ಪರಿಷತ್​ ಸದಸ್ಯೆ ಕವಿತಾ, ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ಪುತ್ರ ರಾಘವ ರೆಡ್ಡಿ ಸೇರಿ ಹಲವರ ಹೆಸರನ್ನು ಇಡಿ ಚಾರ್ಜ್ ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

mla-kavitha-mp-magunta-and-sharat-chandra-reddy-names-in-ed-charge-sheet
ದೆಹಲಿ ಮದ್ಯ ಹಗರಣ: ಇಡಿ ಚಾರ್ಜ್ ಶೀಟ್​ನಲ್ಲಿ ಕೆಸಿಆರ್​ ಪುತ್ರಿ ಕವಿತಾ ಸೇರಿ ಹಲವರ ಹೆಸರು ಉಲ್ಲೇಖ
author img

By

Published : Dec 21, 2022, 11:06 PM IST

ಹೈದರಾಬಾದ್ (ತೆಲಂಗಾಣ): ದೆಹಲಿ ಮದ್ಯ ಹಗರಣದಲ್ಲಿ ಬಂಧಿತ ಉದ್ಯಮಿ ಸಮೀರ್ ಮಹೇಂದ್ರು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಚಾರ್ಜ್ ಶೀಟ್‌ ಸಲ್ಲಿಸಿದ್ದು, ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ ಪುತ್ರಿ, ವಿಧಾನ ಪರಿಷತ್​ ಸದಸ್ಯೆ ಕವಿತಾ, ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ಪುತ್ರ ರಾಘವ ರೆಡ್ಡಿ ಸೇರಿ ಹಲವು ಹೆಸರನ್ನು ಉಲ್ಲೇಖಿಸಲಾಗಿದೆ.

ಅಲ್ಲದೇ, ಅರಬಿಂದೋ ಫಾರ್ಮಾ ನಿರ್ದೇಶಕ ಶರತ್‌ಚಂದ್ರ ರೆಡ್ಡಿ, ಬೋಯಿನಪಲ್ಲಿ ಅಭಿಷೇಕ್, ಬುಚ್ಚಿ ಬಾಬು ಮತ್ತು ಅರುಣ್ ಪಿಳ್ಳೈ ಎಂಬುವವರ ಹೆಸರನ್ನೂ ಇಡಿ ತನ್ನ ಚಾರ್ಜ್​​ಶೀಟ್​ನಲ್ಲಿ ಉಲ್ಲೇಖಿಸಿದೆ. ಸಮೀರ್ ಮಹೇಂದ್ರು, ಪಿ.ಶರತ್ಚಂದ್ರ ರೆಡ್ಡಿ, ಬಿನಯ್ ಬಾಬು, ವಿಜಯ್ ನಾಯರ್ ಮತ್ತು ಬೋಯಿನಪಲ್ಲಿ ಅಭಿಷೇಕ್ ಹೇಳಿಕೆ ಆಧರಿಸಿ ಚಾರ್ಜ್​​ಶೀಟ್​ನಲ್ಲಿ ಹೆಸರಿಸಲಾಗಿದೆ.

ಮಾಗುಂಟ ರಾಘವ ರೆಡ್ಡಿ ಮತ್ತು ಕವಿತಾ ಮೂಲ ಪಾಲುದಾರರಾಗಿರುವ ಇಂಡೋಸ್ಪಿರಿಟ್ಸ್ ಕಂಪನಿಯು 14.05 ಲಕ್ಷ ಮದ್ಯದ ಬಾಟಲಿಗಳನ್ನು ಮಾರಾಟ ಮಾಡಿ 192.8 ಕೋಟಿ ರೂಪಾಯಿ ಗಳಿಸಿದೆ ಎಂದು ಎಂದೂ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ. ಮಾಗುಂಟ ಶ್ರೀನಿವಾಸುಲು ರೆಡ್ಡಿ, ರಾಘವ ರೆಡ್ಡಿ, ಶರತ್ ರೆಡ್ಡಿ ಮತ್ತು ಕವಿತಾ ಅವರ ನಿಯಂತ್ರಣದಲ್ಲಿರುವ ಸೌತ್ ಗ್ರೂಪ್​​ ವಿಜಯ್ ನಾಯರ್‌ಗೆ 100 ಕೋಟಿ ರೂ. ನೀಡಿದ್ದಾರೆ ಎಂದೂ ಆರೋಪಿಸಲಾಗಿದೆ.

ಸೌತ್ ಗ್ರೂಪ್ ಮತ್ತು ಆಮ್ ಆದ್ಮಿ ಪಾರ್ಟಿ ನಾಯಕರ ನಡುವಿನ ಒಪ್ಪಂದದ ಪ್ರಕಾರ ಸೌತ್ ಗ್ರೂಪ್ ಈ ಕೊಡುಗೆಗಳನ್ನು ಮುಂಗಡವಾಗಿ ಪಾವತಿಸಿದೆ. ಸೌತ್ ಗ್ರೂಪ್​ ಅನಗತ್ಯ ಪ್ರಯೋಜನಗಳನ್ನು ಪಡೆದುಕೊಂಡಿದೆ. ದೇಣಿಗೆ ರೂಪದಲ್ಲಿ ನೀಡಲಾದ 100 ಕೋಟಿ ರೂ. ಬದಲಿಗೆ ಇಂಡೋಸ್ಪಿರಿಟ್‌ನಲ್ಲಿ ಶೇ.65ರಷ್ಟು ಸೌತ್ ಗ್ರೂಪ್‌ ಪಡೆದಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ 36 ಮಂದಿ 170 ಫೋನ್‌ಗಳನ್ನು ನಾಶಪಡಿಸಿದ್ದಾರೆ. ಅಲ್ಲದೇ, ಇದೇ ವರ್ಷದ ಜನವರಿಯಲ್ಲಿ ಹೈದರಾಬಾದ್‌ನಲ್ಲಿ ಕವಿತಾ ಅವರನ್ನು ಸಮೀರ್ ಭೇಟಿಯಾಗಿದ್ದರು ಎಂದೂ ಇಡಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಮದ್ಯ ನೀತಿ ಹಗರಣ: ಎಫ್​ಐಆರ್ ಪ್ರತಿ ಒದಗಿಸುವಂತೆ ಸಿಬಿಐಗೆ ಕೆಸಿಆರ್ ಪುತ್ರಿ ಕವಿತಾ ಪತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.