ETV Bharat / bharat

7 ವರ್ಷಗಳ ಹಿಂದೆ ಕಾಣೆಯಾಗಿದ್ದ ಇಬ್ಬರು ಮಕ್ಕಳು ಆಧಾರ್ ಕಾರ್ಡ್ ಸಹಾಯದಿಂದ ಪತ್ತೆ... - ಆಧಾರ್ ಕಾರ್ಡ್ ಸಹಾಯದಿಂದ ಪತ್ತೆ

Missing case: ಏಳು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ಮಕ್ಕಳು, ಆಧಾರ್ ಕಾರ್ಡ್ ಸಹಾಯದಿಂದ ತಮ್ಮ ಕುಂಟುಂಬವನ್ನು ಸೇರಿದ್ದಾರೆ. ನೆರೆಹೊರೆಯವರೊಂದಿಗೆ ಆಟವಾಡುವ ಸಮಯದಲ್ಲಿ ಈ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದರು.

Missing case
7 ವರ್ಷಗಳ ಹಿಂದೆ ಕಾಣೆಯಾಗಿದ್ದ ಇಬ್ಬರು ಮಕ್ಕಳು ಆಧಾರ್ ಕಾರ್ಡ್ ಸಹಾಯದಿಂದ ಪತ್ತೆ...
author img

By ETV Bharat Karnataka Team

Published : Sep 30, 2023, 1:44 PM IST

ಬೆಟ್ಟಿಯಾ (ಬಿಹಾರ): ಬಿಹಾರದ ಬೆಟ್ಟಿಯ ಪ್ರಕಾಶ್‌ ನಗರದ ನರ್ಕಟಿಯಾಗಂಜ್‌ನಲ್ಲಿ ನಾಪತ್ತೆಯಾಗಿದ್ದ ಇಬ್ಬರು ಅಪ್ರಾಪ್ತರ ಪತ್ತೆಗಾಗಿ ಏಳು ವರ್ಷಗಳ ಕಾಲ ಶೋಧ ಕಾರ್ಯ ನಡೆಯಿತು. ಕಳೆದಹೋಗಿದ್ದ ಮಕ್ಕಳು ಪತ್ತೆಯಾಗಿ ಪೋಷಕರ ಮಡಿಲನ್ನು ಸೇರಿರುವ ಈ ಘಟನೆ ಹೃದಯಸ್ಪರ್ಶಿಯಾಗಿದೆ. 12 ವರ್ಷದವಳಿದ್ದಾಗ ಕೌಶಿಕಿ ಮತ್ತು ಅವಳ ಕಿರಿಯ ಸಹೋದರ ರಾಜೀವ್ 2016 ರಲ್ಲಿ ನಾಪತ್ತೆಯಾಗಿದ್ದರು. ಅವರು ತಮ್ಮ ನೆರೆಹೊರೆಯ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ನಿಗೂಢವಾಗಿ ನಾಪತ್ತೆಯಾಗಿದ್ದರು.

"ನಾಪತ್ತೆಯಾದ ಕೌಶಿಕಿಯನ್ನು ನರ್ಕಟಿಯಾಗಂಜ್‌ನಲ್ಲಿರುವ ಬಾಲ ಗೃಹದಿಂದ ಕರೆತರಲಾಗಿದೆ. ಆದರೆ, ರಾಜೀವ್​ಗೆ ತರಗತಿಯ ಪರೀಕ್ಷೆಗಳು ಇರುವ ಕಾರಣಕ್ಕೆ, ಅವರು ಸ್ವಲ್ಪ ತಡವಾಗಿ ಪೋಷಕರನ್ನು ತಲುಪಲಿದ್ದಾರೆ" ಎಂದು ಶಿಕಾರ್‌ಪುರ ಪೊಲೀಸ್ ಠಾಣೆಯ ಮುಖ್ಯಸ್ಥ ರಾಮಾಶ್ರಯ್ ಯಾದವ್ ಹೇಳಿದ್ದಾರೆ.

ಏಳು ವರ್ಷಗಳವರೆಗೆ ಸತತ ಹುಡುಕಾಟ: ಏಳು ವರ್ಷಗಳ ಕಾಲ ಇಬ್ಬರು ಮಕ್ಕಳನ್ನು ಹುಡುಕಲು ಕುಟುಂಬವು ದಣಿವಿಲ್ಲದೇ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಕಾಣೆಯಾದ ಮಕ್ಕಳನ್ನು ಹುಡುಕುವ ಅವರ ಪ್ರಯತ್ನಗಳು ನಿರಂತರವಾಗಿ ಸಾಗಿತ್ತು. ಪೋಷಕರ ಸತತ ಪ್ರಯತ್ನಗಳ ಫಲವಾಗಿ ಮಕ್ಕಳ ಬಗ್ಗೆ ಸುಳಿವುಗಳು ಲಭಿಸಿದವು. ಈಗ 19 ವರ್ಷ ವಯಸ್ಸಿನ ಕೌಶಿಕಿಗೆ ತನ್ನ IX ದರ್ಜೆಯ ಪರೀಕ್ಷೆಗಳಿಗೆ ನೋಂದಾಯಿಸಲು ಆಧಾರ್ ಕಾರ್ಡ್ ಬೇಕಾಗಿತ್ತು. ಆಧಾರ್ ನೋಂದಣಿ ಪ್ರಕ್ರಿಯೆ ನಂತರ, ಕೌಶಿಕಿ ಮತ್ತು ರಾಜೀವ್ ಇಬ್ಬರಿಗೂ ಈಗಾಗಲೇ ಕಾರ್ಡ್‌ಗಳನ್ನು ನೀಡಲಾಗಿದೆ. ಆಕೆಯ ಹಾಗೂ ಪೋಷಕರ ರುಜುವಾತುಗಳು ಆಧಾರ್‌ನೊಂದಿಗೆ ಹೊಲಿಕೆಯಾಗಿವೆ ಎಂದು ತಿಳಿದುಬಂದಿದೆ.

ಇನ್ನು ಕೌಶಿಕಿ ತನ್ನ ಕುಟುಂಬಕ್ಕೆ ಸೇರಲು ಶಿಕಾರ್‌ಪುರ ಪೊಲೀಸರು ನೆರವು ನೀಡಿದರು. ಆದರೆ, ರಾಜೀವ್ ಇನ್ನೂ ತರಗತಿಗಳ ಪರೀಕ್ಷೆ ಬರೆಯುತ್ತಿರುವುದರಿಂದ ಲಕ್ನೋದ ಬಾಲ ಗೃಹದಲ್ಲಿದ್ದಾನೆ. ಪರೀಕ್ಷೆ ಮುಗಿದ ಬಳಿಕ ಆತ ಮನೆಗೆ ಹಿಂತಿರುಗಲಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಇಡೀ ಘಟನೆಯ ಬಗ್ಗೆ ಕೌಶಿಕಿಗೆ ಕೇಳಿದರೆ, ''ತನ್ನ ಬಾಲ್ಯ, ನಾಪತ್ತೆ ಹಾಗೂ ನಂತರ ಲಕ್ನೋಗೆ ಸ್ಥಳಾಂತರಗೊಂಡ ಸಂದರ್ಭಗಳನ್ನು ನೆನಪಿಸಿಕೊಳ್ಳಲು ಆಗಲಿಲ್ಲ'' ಎಂದು ಆಕೆ ಹೇಳಿದ್ದಾಳೆ. ನಾಪತ್ತೆಯಾದ ಮಕ್ಕಳ ತಾಯಿ ಸುನೀತಾದೇವಿ ತಮ್ಮ ಪ್ರೀತಿಯ ಮಕ್ಕಳ ಹುಡುಕಾಟದ ಪಯಣದ ಕುರಿತು ವಿವರಿಸಿದರು. "2016 ರಲ್ಲಿ ನೆರೆಹೊರೆಯ ಮಕ್ಕಳೊಂದಿಗೆ ಆಟವಾಡುವಾಗ ನನ್ನ ಮಕ್ಕಳು ಕಣ್ಮರೆಯಾದ ದಿನ ನನಗೆ ಇನ್ನೂ ನೆನಪಿದೆ'' ಎಂದಿದ್ದಾರೆ.

ಮಕ್ಕಳ ಸುಧಾರಣಾ ಗೃಹದ ಅಧಿಕಾರಿಗಳು, ನರ್ಕಟಿಯಾಗಂಜ್‌ನ ಸಮಾಜ ಸೇವಕ ವರ್ಮಾ ಪ್ರಸಾದ್ ಅವರ ಸಹಕಾರದಿಂದ, ಛಾಯಾಚಿತ್ರಗಳ ಮೂಲಕ ಮಕ್ಕಳನ್ನು ಗುರುತಿಸಲು ಅನುಕೂಲವಾಯಿತು. ಈ ಚಿತ್ರಗಳನ್ನು ಸುನೀತಾ ದೇವಿಯೊಂದಿಗೆ ಹಂಚಿಕೊಳ್ಳಲಾಯಿತು. ನಂತರ ಸುನೀತಾ ದೇವಿ ತಮ್ಮ ಮಕ್ಕಳ ಫೋಟೋಗಳನ್ನು ವೀಕ್ಷಿಸಿದ ತಕ್ಷಣವೇ ಗುರುತಿಸಿದ್ದಾರೆ.

ಇದನ್ನೂ ಓದಿ: ರಸ್ತೆ ಅಪಘಾತ ಪ್ರಕರಣ : ಮೃತಳ ಕುಟುಂಬಕ್ಕೆ 1.75 ಕೋಟಿ ಪರಿಹಾರ ನೀಡಲು ವಿಮಾ ಕಂಪನಿ ಒಪ್ಪಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.