ಮುಂಬೈ (ಮಹಾರಾಷ್ಟ್ರ): ಮುಂಬೈನಲ್ಲಿ 15 ವರ್ಷದ ಬಾಲಕಿಯೊಂದಿಗೆ ಅಶ್ಲೀಲವಾಗಿ ವರ್ತಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಓಲಾ ಟ್ಯಾಕ್ಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಮುರಾರಿ ಕುಮಾರ್ ಸಿಂಗ್ ಎಂಬಾತನೇ ಬಂಧಿತ ಆರೋಪಿ.
ಮೇ 25ರಂದು ಭೋಪಾಲ್‌ನಿಂದ ಬಂದಿದ್ದ ಬಾಲಕಿ ತನ್ನ ಮನೆಗೆ ಹೋಗಲೆಂದು ಓಲಾ ಟ್ಯಾಕ್ಸಿ ಬುಕ್ ಮಾಡಿದ್ದಳು. ಸ್ಥಳಕ್ಕೆ ಬಂದ ಟ್ಯಾಕ್ಸಿ ಹತ್ತಿದ ನಂತರ ಆರೋಪಿ ಚಾಲಕ, ನಿನಗೆ ಸ್ನೇಹಿತರಿಲ್ಲದಿದ್ದರೆ ನಾನು ನಿನ್ನ ಸ್ನೇಹಿತನಾಗುತ್ತೇನೆ ಎಂದು ಹೇಳಿದ್ದಾನೆ. ಅಲ್ಲದೇ, ಮನೆ ಬಳಿ ಬಿಟ್ಟ ಬಳಿಕ ಆಕೆಗೆ ಅಶ್ಲೀಲ ಸನ್ನೆ ಮಾಡುವ ಮೂಲಕ ಕಿರುಕುಳ ನೀಡಿದ್ದಾನೆ. ಈ ವಿಷಯವನ್ನು ಬಾಲಕಿಯು ಪೋಷಕರಿಗೆ ತಿಳಿಸಿದ್ದರು.
ಅಂತೆಯೇ, ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಆರೋಪಿಯನ್ನು ಮೇ 30ರವರೆಗೆ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿದೆ.
ಇದನ್ನೂ ಓದಿ: 1 ಕೋಟಿ ರೂ.ಗಳ ಗಿಫ್ಟ್ ಆಸೆಗೆ 15 ಲಕ್ಷ ಕಳೆದುಕೊಂಡ ಮಹಿಳೆ: ಇನ್ಸ್ಟಾ ಗೆಳೆಯನಿಂದ ಮಹಾ ಮೋಸ!