ETV Bharat / bharat

Jammu Encounter: ಬಾರಾಮುಲ್ಲಾದಲ್ಲಿ ಓರ್ವ ಉಗ್ರನ ಹೊಡೆದುರುಳಿಸಿದ ಸೇನೆ - terrorists in jammu kashmir

ಜಮ್ಮು ಕಾಶ್ಮೀರದಲ್ಲಿ ಇಬ್ಬರು ಬಿಹಾರಿ ಕಾರ್ಮಿಕರನ್ನು ಹತ್ಯೆ ಮಾಡಲು ಭಯೋತ್ಪಾದಕನಿಗೆ ಸಹಕರಿಸಿದ್ದ ಹಾಗೂ ಬಾರಾಮುಲ್ಲಾದಲ್ಲಿ ಓರ್ವನ ಹತ್ಯೆಗೆ ಸ್ಕೆಚ್​ ಹಾಕಿದ್ದ ಉಗ್ರನನ್ನು ಸೇನೆ ಹೊಡೆದುರುಳಿಸಿದೆ.

Militant killed in Baramulla
Jammu Encounter: ಬಾರಾಮುಲ್ಲಾದಲ್ಲಿ ಓರ್ವ ಉಗ್ರನ ಹೊಡೆದುರುಳಿಸಿದ ಸೇನೆ
author img

By

Published : Oct 28, 2021, 9:18 AM IST

ಬಾರಾಮುಲ್ಲಾ(ಜಮ್ಮು ಮತ್ತು ಕಾಶ್ಮೀರ): ಭದ್ರತಾ ಪಡೆಗಳು ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಿರುವುದಾಗಿ ಜಮ್ಮು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಸೇನೆ ಈ ಕಾರ್ಯಾಚರಣೆ ನಡೆಸಿದೆ.

ಸಾವನ್ನಪ್ಪಿದ ಭಯೋತ್ಪಾದಕನನ್ನು ಜಾವೇದ್ ಅಹ್ ವಾನಿ ಎಂದು ಗುರುತಿಸಲಾಗಿದೆ. ಅಕ್ಟೋಬರ್ 20ರಂದು ವಾನ್ಪೋಹ್​ ಎಂಬಲ್ಲಿ ಬಿಹಾರ ಮೂಲದ ಇಬ್ಬರು ಕಾರ್ಮಿಕರನ್ನು ಕೊಂದಿದ್ದ ಗುಲ್ಜಾರ್ ಎಂಬಾತನಿಗೆ ವಾನಿ ಸಹಕರಿಸಿದ್ದ. ಇಷ್ಟೇ ಅಲ್ಲದೇ, ಬಾರಾಮುಲ್ಲಾದಲ್ಲಿ ಓರ್ವ ಅಂಗಡಿ ಮಾಲೀಕನನ್ನು ಈತ ಟಾರ್ಗೆಟ್​ ಮಾಡಿದ್ದ ಎಂದು ತಿಳಿದುಬಂದಿದೆ.

ಗುಲ್ಜಾರ್​​ನನ್ನು ಅಕ್ಟೋಬರ್ 20ರಂದೇ ಕೊಲ್ಲಲಾಗಿತ್ತು. ಈಗ ಹತ್ಯೆಗೊಳಗಾದ ಭಯೋತ್ಪಾದಕ ಜಾವೇದ್ ಅಹ್ ವಾನಿ ಗುಲ್ಜಾರ್​ನ ಸಹಚರನಾಗಿದ್ದ ಎಂದು ಜಮ್ಮು ಕಾಶ್ಮೀರದ ಐಜಿಪಿ ವಿಜಯ್​ ಕುಮಾರ್ ಮಾಹಿತಿ ನೀಡಿದ್ದಾರೆ. ಭಯೋತ್ಪಾದಕನಿಂದ ಒಂದು ಪಿಸ್ತೂಲ್, ಒಂದು ಲೋಡೆಡ್ ಮ್ಯಾಗಜೀನ್ ಮತ್ತು ಒಂದು ಪಾಕ್ ಗ್ರೆನೇಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮುಂಬೈ ಕ್ರೂಸ್‌ ಶಿಪ್‌ ಡ್ರಗ್ಸ್‌ ಪ್ರಕರಣದ ಸ್ವತಂತ್ರ ಸಾಕ್ಷಿ ಕಿರಣ್‌ ಗೋಸಾವಿ ಪೊಲೀಸ್ ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.