ಶ್ರೀನಗರ(ಜಮ್ಮು ಕಾಶ್ಮೀರ್): ಕಾಶ್ಮೀರದ ಯವತಿಯೊಬ್ಬರು ಗಾಯನದಲ್ಲಿ ತಮ್ಮ ಸಂಪೂರ್ಣ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಪ್ರಶಂಸನೀಯ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಈಗ ಕಳೆದ ಕೆಲವು ವರ್ಷಗಳಿಂದ ಕಾಶ್ಮೀರದ ಯುವಕರು ಮತ್ತು ಯುವತಿಯರು ಪಾಶ್ಚಾತ್ಯ ಸಂಗೀತದತ್ತ ಮುಖ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹುಡುಗರಷ್ಟೇ ಅಲ್ಲ, ಹುಡುಗಿಯರೂ ರ್ಯಾಪರ್ಗಳಾಗಿ ಹೊರಹೊಮ್ಮುತ್ತಿದ್ದಾರೆ.
ಯುವ ರ್‍ಯಾಪರ್ 18 ವರ್ಷ ವಯಸ್ಸಿನ ಅನಮ್ ನಾಸಿರ್ ತಮ್ಮ ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ವೇದಿಕೆಯ ಹೆಸರು ಅನ್ನಿ. ಅನಮ್ ನಾಸಿರ್ ಏಳನೇ ವಯಸ್ಸಿನಿಂದಲೂ ರ್‍ಯಾಪ್ ಮಾಡುವುದನ್ನು ಕಲೆಯಲು ಪ್ರಾರಂಭಿಸಿದರು. ಇದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡರು. ರ್ಯಾಪ್ನ ಬೇಸಿಕ್ಸ್ ಕಲಿತ ನಂತರ ಈಗ ಅನಮ್ ಹಲವು ಹಾಡುಗಳು ಹಾಡಿದ್ದು, ಅವು ಬೆಳಕಿಗೆ ಬಂದಿವೆ.
ಕಳೆದ ವರ್ಷ ಅನಮ್ ನಾಸಿರ್ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ‘ಲಾಸ್ಟ್ ರೈಡ್’ ಎಂಬ ಮೊದಲ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು. ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ತನ್ನ ಸ್ನೇಹಿತನ ನೆನಪಿಗಾಗಿ ಈ ಹಾಡನ್ನು ಮಾಡಿದ್ದಾರೆ ಎಂದು ಹೇಳಿದರು. ಅನಮ್ ಅವರ ಈ ಮೊದಲ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದರು.
ಓದಿ: 'ಹೌಸ್ ಪಾರ್ಟಿ'ಯಲ್ಲಿ ರ್‍ಯಾಪರ್ ALL OK ಜೊತೆಗೆ ಸೊಂಟ ಬಳುಕಿಸಿದ ಅದ್ವಿಕಾ
ಬುದ್ಗಾಮ್ ಜಿಲ್ಲೆಯ ನಿವಾಸಿಯಾಗಿರುವ ಅನಮ್ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿಭಿನ್ನ ವಿಷಯಗಳ ಕುರಿತು ಹೊಸ ವಿಡಿಯೋಗಳಿಗಾಗಿ ಹಾಡಿ ರಚಿಸಲು ಅವರು ತಮ್ಮ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಾರೆ. ರ್‍ಯಾಪ್ ಅನ್ನಿ ಪ್ರಸ್ತುತ ತನ್ನ ಹೊಸ ವಿಡಿಯೋವೊಂದಕ್ಕೆ ಶ್ರಮ ಪಡುತ್ತಿದ್ದು, ಆ ಶೀಘ್ರದಲ್ಲೇ ಅದು ಸಂಗೀತ ಅಭಿಮಾನಿಗಳಿಗೆ ಲಭ್ಯವಾಗಲಿದೆ.
ಕಾಶ್ಮೀರದಲ್ಲಿ ಮಹಿಳಾ ಸಂಗೀತದ ಆಗಮನ ಹೊಸದೇನಲ್ಲ. ಆದರೆ ರ್‍ಯಾಪರ್ ತುಂಬಾ ಹೊಸಬರು ಮತ್ತು ಈ ಪ್ರಕಾರದಲ್ಲಿ ಕೆಲವೇ ಕೆಲವು ಪ್ರದರ್ಶಕರು, ವಿಶೇಷವಾಗಿ ಮಹಿಳೆಯರು ಇದ್ದಾರೆ. ರ್‍ಯಾಪರ್ ಅನ್ನಿ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ.
ರ್‍ಯಾಪ್ ಒಂದು ಕಪ್ಪು ಅಮೆರಿಕನ್ ಕಲಾವಿದರ ಪ್ರತಿರೋಧ ಕಲೆಯ ಉದಾಹರಣೆಯಾಗಿದೆ. ರ್‍ಯಾಪ್ ಈಗ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸುತ್ತಿದೆ. ಈ ಸಂಗೀತ ಪ್ರಕಾರದ ಕಲಾವಿದರು ತಮ್ಮ ಕೋಪವನ್ನು ಹೆಚ್ಚಾಗಿ ವ್ಯಕ್ತಪಡಿಸುತ್ತಾರೆ. ಈ ಮೂಲಕ ಇದನ್ನು ಬಂಡಾಯ ಕಲೆ ಎಂದು ಕರೆಯಲಾಗುತ್ತದೆ. ಅನಮ್ ಅವರು ಆರಂಭದಲ್ಲಿ ಸಾಮಾಜಿಕ ವಿರೋಧವನ್ನೂ ಎದುರಿಸಿದ್ದರು. ಆದರೆ ಅವರ ಕುಟುಂಬದ ಸಂಪೂರ್ಣ ಬೆಂಬಲದೊಂದಿಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಜನರ ಟೀಕೆಗಳನ್ನು ನಿರ್ಲಕ್ಷಿಸಿ ಮುನ್ನಡೆಯುತ್ತಿದ್ದಾರೆ.
ಓದಿ: ಗಲ್ಲಿ ಬಾಯ್ ಖ್ಯಾತಿಯ ರ‍್ಯಾಪರ್ ಧರ್ಮೇಶ್ ಪರ್ಮಾರ್ ನಿಧನ: ಗಣ್ಯರ ಸಂತಾಪ
ಕಾಶ್ಮೀರಿ ಮಹಿಳಾ ಪ್ರಸಿದ್ಧ ಗಾಯಕರಾದ ನಸೀಮ್ ಅಖ್ತರ್, ರಾಜ್ ಬೇಗಂ, ಶಮೀಮಾ ಆಜಾದ್, ಕೈಲಾಶ್ ಮೆಹ್ರಾ, ದೀಪಾಲಿ ವಾಟಲ್ ಮತ್ತು ಶಾಜಿಯಾ ಬಶೀರ್ ಸೇರಿದಂತೆ ಹಲವರು ಕಾಶ್ಮೀರ ಸಂಗೀತವನ್ನು ಪ್ರಪಂಚದಾದ್ಯಂತ ಪರಿಚಯಿಸಿದ್ದಾರೆ. ಆದರೆ ಈಗ ಹೊಸ ಪೀಳಿಗೆಯ ಕಾಶ್ಮೀರಿ ಕಲಾವಿದರು ಪಾಶ್ಚಿಮಾತ್ಯ ಸಂಗೀತದಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ.