ETV Bharat / bharat

ಟ್ರ್ಯಾಕ್ಟರ್​ ಮತ್ತು ಜೆಸಿಬಿಗಳಿಗೆ ಬೆಂಕಿ ಹಚ್ಚಿದ ಮಾವೋವಾದಿಗಳು

author img

By

Published : Feb 8, 2022, 12:43 PM IST

ಗ್ರಾಮದಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚಬೇಕು. ಮಾವೋವಾದಿಗಳ ಹೆಸರಿನಲ್ಲಿ ಹಣ ಸಂಗ್ರಹಿಸುವವರನ್ನು ಬಂಧಿಸಬೇಕು ಎಂದು ಮಾವೋವಾದಿಗಳ ಪೋಸ್ಟರ್‌ನಲ್ಲಿ ಒತ್ತಾಯಿಸಲಾಗಿದೆ.

Maoists set fire on JCB machines and tractor in Kandhamal to boycott election
ಟ್ರ್ಯಾಕ್ಟರ್​ ಮತ್ತು ಜೆಸಿಬಿಗಳಿಗೆ ಬೆಂಕಿ ಹಚ್ಚಿದ ಮಾವೋವಾದಿಗಳು

ಕಂಧಮಲ್(ಒಡಿಶಾ): ಕಂಧಮಾಲ್ ಜಿಲ್ಲೆಯ ಫಿರಿಂಗಿಯಾ ಪೊಲೀಸ್ ವ್ಯಾಪ್ತಿಯ ಬರುವ ಕಿಯಾಮುಂಡಾದಲ್ಲಿ ಮಾವೋವಾದಿಗಳು ಜೆಸಿಬಿ ಯಂತ್ರಗಳು ಮತ್ತು ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ್ದಾರೆ. ಮತದಾನ ಬಹಿಷ್ಕರಿಸುವ ಬೆದರಿಕೆಯ ಪತ್ರ ಮತ್ತು ಪೋಸ್ಟರ್ ಸ್ಥಳದಲ್ಲಿ ಪತ್ತೆಯಾಗಿದೆ.

ಸೋಮವಾರ ಮಧ್ಯರಾತ್ರಿ ನಕ್ಸಲರು ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ್ದಾರೆ. ಗ್ರಾಮದಲ್ಲಿರುವ ಸ್ಥಳೀಯ ಮದ್ಯದಂಗಡಿಗಳನ್ನು ಮುಚ್ಚಬೇಕು. ಮಾವೋವಾದಿಗಳ ಹೆಸರಿನಲ್ಲಿ ಹಣ ಸಂಗ್ರಹಿಸುವವರನ್ನು ಬಂಧಿಸಬೇಕು ಎಂದು ಪೋಸ್ಟರ್‌ನಲ್ಲಿ ಒತ್ತಾಯಿಸಲಾಗಿದೆ.

ಒಡಿಶಾದಲ್ಲಿ ಪಂಚಾಯತ್ ಚುನಾವಣೆಗಳು ನಡೆಯುತ್ತಿದ್ದು, ಈ ಕ್ರಮಗಳನ್ನು ಕೈಗೊಳ್ಳದಿದ್ದರೆ, ಮತದಾನ ಬಹಿಷ್ಕರಿಸಲು ಕ್ರಮ ಕೈಗೊಳ್ಳುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮಶ್ರೀಪಾದದಿಂದ ಕಂಧಮಲ್‌ವರೆಗೆ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯ ಸ್ಥಳದಲ್ಲಿದ್ದ ಜೆಸಿಬಿ ಯಂತ್ರಗಳು ಮತ್ತು ಟ್ರ್ಯಾಕ್ಟರ್​ಗಳಿಗೆ ಬೆಂಕಿ ಹಚ್ಚಲಾಗಿದೆ.

ಇದನ್ನೂ ಓದಿ:2008ರ ಅಹಮದಾಬಾದ್ ಬಾಂಬ್ ಸ್ಫೋಟ ಕೇಸ್​: 28 ಆರೋಪಿಗಳನ್ನು ಖುಲಾಸೆಗೊಳಿಸಿದ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.