ಹೈದರಾಬಾದ್: ಕಳೆದ ವರ್ಷ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ 74 ವರ್ಷದ ಅಜ್ಜಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಈಗ ಆ ಅಜ್ಜಿ ಮತ್ತೆ ಸುದ್ದಿಯಲ್ಲಿದ್ದಾರೆ.
ಗುಂಟುರು ಎರ್ರಮಟ್ಟಿ ಮಂಗಮ್ಮ ಮತ್ತು ಆಕೆಯ ಪತಿ ಎರ್ರಮಟ್ಟಿ ರಾಜಾ ರಾವ್ ದಂಪತಿ 1962ರ ಮಾರ್ಚ್ 22ರಂದು ವಿವಾಹವಾಗಿದ್ದರು. ಮಕ್ಕಳಿಲ್ಲ ಎಂಬ ಚಿಂತೆಯಲ್ಲಿದ್ದ ದಂಪತಿ ಚಿಕಿತ್ಸೆಗಾಗಿ ಹಲವಾರು ವೈದ್ಯರನ್ನು ಸಂಪರ್ಕಿಸಿದ್ದರು. ಆದರೆ, ಯಾವ ಚಿಕಿತ್ಸೆಯೂ ಇವರಿಗೆ ಫಲಕಾರಿಯಾಗಿರಲಿಲ್ಲ.
2018ರ ನವೆಂಬರ್ನಲ್ಲಿ ದಂಪತಿ ಗುಂಟೂರು ಸಮೀಪದ ಅಹಲ್ಯಾ ನರ್ಸಿಂಗ್ ಹೋಮ್ನಲ್ಲಿರುವ ವೈದ್ಯರನ್ನು ಭೇಟಿಯಾಗಿದ್ದರು. ಅಲ್ಲಿ ಡಾ.ಶಾನಾಕ್ಕಾಯಾಲಾ ಉಮಾಶಂಕರ್ ಈ ವೈದ್ಯಕೀಯ ಕೇಸ್ ಸವಾಲಾಗಿ ಸ್ವೀಕರಿಸಿದ್ದರು. ಮಂಗಮ್ಮಗೆ ಬಿಪಿ, ಶುಗರ್ ಹಾಗೂ ವಂಶವಾಹಿ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ. ಬಳಿಕ ತಜ್ಞ ವೈದ್ಯರು ತಪಾಸಣೆ ನಡೆಸಿ, ಸಂತಾನ ಪಡೆಯುವ ಪ್ರಕ್ರಿಯೆಗೆ ಮುಂದಾಗಿದ್ದರು. ತದನಂತರ ಐವಿಎಫ್ ಮೂಲಕ ಮಗುವನ್ನು ಪಡೆಯಲು ಸಲಹೆ ನೀಡಿದ್ದು, ಅದು ಫಲಕಾರಿಯಾಗಿತ್ತು.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ 74 ವರ್ಷದ ಅಜ್ಜಿ 2019, ಸೆಪ್ಟಂಬರ್ 5ರಂದು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು. 2020 ಸೆಪ್ಟಂಬರ್ 5ರಂದು ಅವಳಿ ಹೆಣ್ಣುಮಕ್ಕಳ ಬರ್ತ್ಡೇ ಕೊರೊನಾ ಹಿನ್ನೆಲೆ ಸಾಧರಣವಾಗಿ ಆಚರಿಸಿದ್ದರು. ಇದಾದ ಮೂರು ದಿನಗಳ ಬಳಿಕ ಮಂಗಮ್ಮಳ ಪತಿ ರಾಜಾ ರಾವ್ ನಿಧರಾಗಿದ್ದರು. ಈಗ ಆ ಮಕ್ಕಳಿಗೆ 16 ತಿಂಗಳು. ತಂದೆ ಇಲ್ಲದ ಅವಳಿ ಮಕ್ಕಳು ತನ್ನ ತಾಯಿಯೊಂದಿಗೆ ಆರೋಗ್ಯವಾಗಿಯೇ ಬೆಳೆಯುತ್ತಿದ್ದಾವೆ. ಇನ್ನು ಈ ಮಕ್ಕಳ ಯೋಗಕ್ಷೇಮಕ್ಕಾಗಿ ಮಂಗಮ್ಮ ಕೆಲಸದವರನ್ನು ಉಪಯೋಗಿಸುತ್ತಿದ್ದಾರೆ.