ಮೀರತ್ (ಉತ್ತರಪ್ರದೇಶ): ಎರಡು ದಿನಗಳ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದಾಗ ಮಗುವನ್ನು ವ್ಯಕ್ತಿಯೊಬ್ಬ ಹೊತ್ತೊಯ್ದಿದ್ದರು. ಇದೀಗ ಅಂಥದ್ದೇ ಕೃತ್ಯ ಉತ್ತರಪ್ರದೇಶದ ಮೀತರ್ನ ಆಸ್ಪತ್ರೆಯಲ್ಲಿ ನಡೆದಿದೆ. ನವಜಾತ ಮಗುವಿಗೆ ಚುಚ್ಚುಮದ್ದು ಹಾಕಿಸಬೇಕು ಎಂದು ಹೇಳಿ ಯುವಕನೊಬ್ಬ ತಾಯಿಯಿಂದ ಮಗುವನ್ನು ಪಡೆದು ಕದ್ದೊಯ್ದಿದ್ದಾನೆ. ಮೀರತ್ ಆಸ್ಪತ್ರೆಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಮೀರತ್ನ ಮೆಡಿಕಲ್ ಕಾಲೇಜಿನಲ್ಲಿ ಮಹಿಳೆಯೊಬ್ಬರು ನವಜಾತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೆಲ ಸಮಯದ ಬಳಿಕ ತಾಯಿ - ಮಗುವನ್ನು ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಈ ವೇಳೆ ಯುವಕನೊಬ್ಬ ಆ ಕುಟುಂಬಸ್ಥರ ಜೊತೆ ಪರಿಚಯ ಬೆಳೆಸಿಕೊಂಡಿದ್ದಾನೆ.
ಸ್ವಲ್ಪ ಸಮಯದ ಬಳಿಕ ಆ ಯುವಕ ವೈದ್ಯರು ಮಗುವಿಗೆ ಚುಚ್ಚುಮದ್ದು ಹಾಕಿಸಲು ಕರೆದಿದ್ದಾರೆ ಎಂದು ತಾಯಿಯಿಂದ ಮಗುವನ್ನು ಪಡೆದುಕೊಂಡಿದ್ದಾರೆ. ಅಲ್ಲಿಂದ ನಿಧಾನವಾಗಿ ಯಾರಿಗೂ ಗೊತ್ತಾಗದ ಹಾಗೆ ಆಸ್ಪತ್ರೆಯಿಂದ ನವಜಾತ ಶಿಶುವನ್ನು ಕದ್ದೊಯ್ದಿದ್ದಾನೆ.
ಎಷ್ಟೊತ್ತಾದರೂ ಮಗುವನ್ನು ವಾಪಸ್ ಕರೆದುಕೊಂಡು ಬಾರದಿದ್ದಾಗ ಕುಟುಂಬಸ್ಥರು ವೈದ್ಯರನ್ನು ವಿಚಾರಿಸಿದ್ದಾರೆ. ಚುಚ್ಚುಮದ್ದು ಸುಳ್ಳಿನ ನಾಟಕ ಎಂದು ತಿಳಿದು ಆತಂಕಗೊಂಡಿದ್ದಾರೆ. ಹುಡುಕಾಡಿದರೂ ಸಿಗದಿದ್ದಾಗ ಆಸ್ಪತ್ರೆಯಲ್ಲಿನ ಸಿಸಿಟಿವಿ ತಪಾಸಣೆ ನಡೆಸಲಾಗಿದೆ. ಯುವಕ ಮತ್ತು ಆತನೊಂದಿಗೆ ಇನ್ನೊಬ್ಬ ಮಗುವನ್ನು ಕದ್ದೊಯ್ಯುತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ಕುಟುಂಬಸ್ಥರು ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಯುವಕನಿಗಾಗಿ ಶೋಧ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಿ, ನವಜಾತ ಶಿಶುವನ್ನು ಸುರಕ್ಷಿತವಾಗಿ ಕರೆತರಲಾಗುವುದು. ಇದಕ್ಕಾಗಿ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ಕೂಡ ಆಸ್ಪತ್ರೆಯಲ್ಲಿ ಮಕ್ಕಳ ಕಳ್ಳತನದ ಹಲವು ಘಟನೆಗಳು ನಡೆದಿವೆ.
ಓದಿ: ಡಿಜಿಟಲ್ ರೇಪ್ ಕೇಸ್.. 65ರ ವೃದ್ಧನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್