ETV Bharat / bharat

ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್‌ನಲ್ಲಿ ಬಂದ ಸಹೋದರರು - ಭದ್ರಕಾಳಿಯಮ್ಮನ್ ದೇವಸ್ಥಾನದ ಉತ್ಸವ

ಬೆಂಗಳೂರಿನಲ್ಲಿ ವಾಸವಿದ್ದ ತಮಿಳುನಾಡಿನ ಕುಟುಂಬವೊಂದು ತಮ್ಮ ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಲು ತೂತುಕುಡಿಗೆ ಹೆಲಿಕಾಪ್ಟರ್‌ ಮೂಲಕ ಪ್ರಯಾಣ ಬೆಳಸಿದ್ದಾರೆ.

Man flies in Helicopter to attend Temple fest in Tamil Nadu  Bhadrakaliamman temple fest  Bengaluru news  ತಮಿಳುನಾಡು ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್‌ನಲ್ಲಿ ಹಾರಿದ ಕುಟುಂಬ  ಹೆಲಿಕಾಪ್ಟರ್‌ನಲ್ಲಿ ಚೆನ್ನೈ ಕುಟುಂಬ ಸವಾರಿ  ಭದ್ರಕಾಳಿಯಮ್ಮನ್ ದೇವಸ್ಥಾನದ ಉತ್ಸವ  ಬೆಂಗಳೂರು ಸುದ್ದಿ
ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್‌ನಲ್ಲಿ ಬಂದ ಸಹೋದರರು
author img

By

Published : Jun 14, 2022, 2:32 PM IST

ತೂತುಕುಡಿ( ತಮಿಳುನಾಡು): ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲಸಿದ್ದ ವ್ಯಾಪಾರಿ ಕುಟುಂಬಕ್ಕೆ ಹೆಲಿಕಾಪ್ಟರ್​ನಲ್ಲಿ ಓಡಾಡುವ ಆಸೆಯಿತ್ತು. ಹೀಗಾಗಿ ಅವರು ತಮ್ಮ ಊರಿನ ದೇವಸ್ಥಾನದ ಕುಂಬಾಭಿಷೇಕದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಕೋವಿಲ್‌ಪಟ್ಟಿ ಸಮೀಪದ ದಕ್ಷಿಣ ತೀಡಂಪಟ್ಟಿಗೆ ಬೆಂಗಳೂರಿನಿಂದ ಹೆಲಿಕಾಪ್ಟರ್​ನಲ್ಲಿ ಆಗಮಿಸಿ ಗಮನ ಸೆಳೆದಿದ್ದಾರೆ.

ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್‌ನಲ್ಲಿ ಬಂದ ಸಹೋದರರು

ಇಲ್ಲಿನ ನಿವಾಸಿ ಬಾಲಸುಬ್ರಮಣ್ಯಂ ಜೀವನೋಪಾಯಕ್ಕಾಗಿ ಹಲವು ವರ್ಷಗಳ ಹಿಂದೆ ಚೆನ್ನೈಗೆ ತೆರಳಿದ್ದರು. ಇವರ ಹಿರಿಯ ಮಗ ನಟರಾಜನ್ ಪ್ರಸ್ತುತ ಕಬ್ಬಿಣದ ವ್ಯಾಪಾರಿ ಮತ್ತು ಇನ್ನೊಬ್ಬ ಮಗ ರಾಜತುರೈ ಬೆಂಗಳೂರಿನಲ್ಲಿ ಜವಳಿ ಅಂಗಡಿಯನ್ನು ನಡೆಸುತ್ತಿದ್ದಾರೆ. ನಟರಾಜನ್ ಮತ್ತು ರಾಜತುರೈ ಇಬ್ಬರೂ ಯಾವಾಗಲೂ ಹೆಲಿಕಾಪ್ಟರ್‌ನಲ್ಲಿ ಹಾರುವ ಕನಸು ಕಂಡಿದ್ದರು. ಅಷ್ಟರಲ್ಲಿ ಭದ್ರಕಾಳಿಯಮ್ಮನ ದೇವಸ್ಥಾನದ ಕುಂಬಾಭಿಷೇಕದ ವಿಚಾರ ತಿಳಿದ ಸಹೋದರರು ಹೆಲಿಕಾಪ್ಟರ್ ಮೂಲಕ ಅಲ್ಲಿಗೆ ತೆರಳಲು ನಿರ್ಧರಿಸಿದರು.

ಓದಿ: ಸಿಎಂ ಧಾಮಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಆವರಿಸಿದ ಧೂಳು: ಆತಂಕಕ್ಕೊಳಗಾದ ಜನತೆ

ತಮ್ಮ ಕನಸಿನ​ ಪ್ರಯಾಣಕ್ಕಾಗಿ ಸಹೋದರರು ಬೆಂಗಳೂರಿನ ಖಾಸಗಿ ಹೆಲಿಕಾಪ್ಟರ್ ಕಂಪನಿಯನ್ನು ಸಂಪರ್ಕಿಸಿದ್ದರು. ನಂತರ ನಟರಾಜನ್ ಮತ್ತು ಅವರ ಕುಟುಂಬ ಸದಸ್ಯರು ಹೆಲಿಕಾಪ್ಟರ್‌ನಲ್ಲಿ ದಕ್ಷಿಣ ತೀಡಂಪಟ್ಟಿಯಲ್ಲಿರುವ ಭದ್ರಕಾಳಿಯಮ್ಮನ ದೇವಸ್ಥಾನಕ್ಕೆ ಬಂದರು. ಆಶ್ಚರ್ಯದಿಂದ ಹೆಲಿಕಾಪ್ಟರ್ ನೋಡಿದ ಗ್ರಾಮಸ್ಥರು ಸೆಲ್ಫಿಗೆ ಮುಗಿಬಿದ್ದರು. ನಂತರ ನಟರಾಜನ್ ಸ್ವಾಮಿ ದರ್ಶನ ಮುಗಿಸಿ ಅದೇ ಹೆಲಿಕಾಪ್ಟರ್​ನಲ್ಲಿ ಮನೆಗೆ ಮರಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.