ಜೈಪುರ(ರಾಜಸ್ಥಾನ): ನಮ್ಮ ನಡುವೆ ಇರುವ ಕೆಲವರು ವಿಶೇಷ ಪ್ರತಿಭೆಯನ್ನು ಅಡಗಿಸಿಟ್ಟುಕೊಂಡಿರುತ್ತಾರೆ. ಇಲ್ಲೋರ್ವ ಆ ಪ್ರತಿಭೆಗೂ ಚಾಲೆಂಜ್ ಮಾಡುವ ಹಾಗೆ ತನ್ನ ಶಕ್ತಿ ಏನೆಂದು ತೋರಿಸಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಹೀಗೂ ಉಂಟಾ ಎಂದು ಜನರು ಹುಬ್ಬೇರಿಸುತ್ತಿದ್ದಾರೆ.
ಸ್ಟ್ರೀಟ್ ಫುಡ್ ವ್ಯಾಪಾರಿ ಶೈಲೇಶ್ ಕುದಿಯುವ ಎಣ್ಣೆಯಲ್ಲಿ ಹಾಕಿದ್ದ ಚಿಕನ್ ತುಂಡುಗಳನ್ನು ಬರೀ ಕೈನಲ್ಲೇ ಆಚೆ ತೆಗೆಯುತ್ತಾರೆ. ಕುದಿಯುವ ಎಣ್ಣೆಯಲ್ಲಿ ಸಲೀಸಾಗಿ ತನ್ನ ಕೈಗಳನ್ನು ಹಾಕುತ್ತಿರುವುದು ನೋಡುಗರಲ್ಲಿ ಅಚ್ಚರಿ ಮೂಡಿಸುತ್ತಿದೆ.
- " class="align-text-top noRightClick twitterSection" data="
">
ಈ ಸಂಬಂಧ ನೆಟ್ಟಿಗರು ಭಾರೀ ಪ್ರತಿಕ್ರಿಯೆಗಳನ್ನು ಮಾಡುತ್ತಿದ್ದಾರೆ. ಅವನಿಗೆ ಇದು ಹೇಗೆ ಸಾಧ್ಯ?, ಇದು 'ಫಿಂಗರ್ ಫ್ರೈಡ್ ಚಿಕನ್' ಅಂತೆಲ್ಲಾ ಪ್ರತಿಕ್ರಿಯೆ ಕೊಡುತ್ತಿದ್ದಾರೆ.
ಎರಡೂ ಕೈಗಳನ್ನೂ ಕುದಿಯುವ ಎಣ್ಣೆಯಲ್ಲಿ ಹಾಕಿ ಅಲ್ಲಿಂದ ಚಿಕನ್ ತುಂಡನ್ನು ಹೊರ ತೆಗೆದರೂ ಅವರ ಕೈಗೆ ಏನೂ ಆಗಿಲ್ಲ. ಜೈಪುರ ರಸ್ತೆ ಪಕ್ಕದಲ್ಲಿರುವ ಫುಡ್ ಸ್ಟಾಲ್ ಹೆಸರು ಅಲಿ ಚಿಕನ್ ಸೆಂಟರ್.