ಕೋಲ್ಕತ್ತಾ(ಪಶ್ಚಿಮ ಬಂಗಾಳ): ಜುಲೈ 27ರಿಂದ ಮೂರು ದಿನಗಳ ದೆಹಲಿ ಪ್ರವಾಸ ಕೈಗೊಳ್ಳಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದೇ ಮೊದಲ ಸಲ ಪ್ರಧಾನಿ ಮೋದಿ ಭೇಟಿ ಮಾಡ್ತಿದ್ದು, ಹೆಚ್ಚು ಕುತೂಹಲ ಮೂಡಿಸಿದೆ.
ಪಶ್ಚಿಮ ಬಂಗಾಳ ವಿಧಾನಸಭೆ, ಕೋವಿಡ್ ಹಾಗೂ ಯಾಸ್ ಚಂಡಮಾರುತದ ಸಂದರ್ಭದಲ್ಲಿ ನಮೋ ವಿರುದ್ಧ ವಾಗ್ದಾಳಿ ನಡೆಸಿದ್ದ ಮಮತಾ ಬ್ಯಾನರ್ಜಿ, ಪ್ರಧಾನಿ ಜೊತೆಗಿನ ವಿಡಿಯೋ ಕಾನ್ಪರೆನ್ಸ್ ಸಭೆಗಳಿಂದಲೂ ಹೊರಗುಳಿದಿದ್ದರು. ಆದರೆ ಇದೇ ಮೊದಲ ಸಲ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ದೀದಿ, 2-3 ಮೂರು ದಿನಗಳ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಅವರನ್ನ ಭೇಟಿ ಮಾಡಲು ಸಮಯಾವಕಾಶ ಸಿಕ್ಕಿದೆ. ಈ ವೇಳೆ ಬೇರೆ ಬೇರೆ ಪಕ್ಷದ ಮುಖಂಡರನ್ನು ಭೇಟಿ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.
-
I will go for 2-3 days (to Delhi). I have been given time to meet with President, Prime Minister, I will meet them. I have also got requests from political leaders. I will try to accommodate. Centre has had no discussions on third COVID wave: West Bengal CM Mamata Banerjee pic.twitter.com/Nd3YVzXvIw
— ANI (@ANI) July 22, 2021 " class="align-text-top noRightClick twitterSection" data="
">I will go for 2-3 days (to Delhi). I have been given time to meet with President, Prime Minister, I will meet them. I have also got requests from political leaders. I will try to accommodate. Centre has had no discussions on third COVID wave: West Bengal CM Mamata Banerjee pic.twitter.com/Nd3YVzXvIw
— ANI (@ANI) July 22, 2021I will go for 2-3 days (to Delhi). I have been given time to meet with President, Prime Minister, I will meet them. I have also got requests from political leaders. I will try to accommodate. Centre has had no discussions on third COVID wave: West Bengal CM Mamata Banerjee pic.twitter.com/Nd3YVzXvIw
— ANI (@ANI) July 22, 2021
ಇದನ್ನೂ ಓದಿ: ಮಹಾಮಳೆಗೆ ರೈಲ್ವೆ ಸಂಚಾರ ಅಸ್ತವ್ಯಸ್ತ: ರೈಲುಗಳಲ್ಲೇ ಸಿಲುಕಿಕೊಂಡಿರುವ 6 ಸಾವಿರ ಪ್ರಯಾಣಿಕರು
ನಿನ್ನೆಯಷ್ಟೇ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಬಿಜೆಪಿಯಿಂದ ದೇಶವನ್ನು ರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ. ಕೇಂದ್ರ ಸರ್ಕಾರ ಪೆಗಾಸಸ್ ಮೂಲಕ ಗೂಢಚರ್ಯೆ ನಡೆಸಿದ್ದು, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣವಾಗಿ ಹಾಳು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ 2024ರ ಲೋಕಸಭೆ ಚುನಾವಣೆ ವೇಳೆ ಎಲ್ಲ ವಿಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದಿದ್ದರು.