ETV Bharat / bharat

ದೇವಸ್ಥಾನದ ಮಾದರಿಯಲ್ಲಿ ಸೆರಾಂಪೋರ್ ರೈಲು ನಿಲ್ದಾಣ ನಿರ್ಮಿಸುವಂತೆ ಸಚಿವೆ ಸ್ಮೃತಿ ಇರಾನಿಗೆ ಮನವಿ - etv bharat kannada

ಲೋಕಸಭಾ ಪ್ರವಾಸ ಯೋಜನೆ ಕಾರ್ಯಕ್ರಮದಡಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪಶ್ಚಿಮ ಬಂಗಾಳದ ಸೆರಾಂಪೋರ್ ಲೋಕಸಭೆ ಕ್ಷೇತ್ರದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

Mahesh Temple management urges Smriti Irani to construct Railway Station on the model of temple
ದೇವಸ್ಥಾನದ ಮಾದರಿಯಲ್ಲಿ ಸೆರಾಂಪೋರ್ ರೈಲು ನಿಲ್ದಾಣ ನಿರ್ಮಿಸುವಂತೆ ಸಚಿವೆ ಸ್ಮೃತಿ ಇರಾನಿಗೆ ಮನವಿ
author img

By

Published : Sep 20, 2022, 4:24 PM IST

ಸೆರಾಂಪೋರ್ (ಪಶ್ಚಿಮ ಬಂಗಾಳ): ಲೋಕಸಭಾ ಪ್ರವಾಸ ಯೋಜನೆ ಕಾರ್ಯಕ್ರಮದಡಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದಾರೆ. ಅವರು ಸೆರಾಂಪೋರ್ ಲೋಕಸಭೆ ಕ್ಷೇತ್ರದ ಮೂರು ದಿನಗಳ ಪ್ರವಾಸ ಕೈಗೊಂಡಿದ್ದು, ಇಲ್ಲಿನ ರೈಲು ನಿಲ್ದಾಣವನ್ನು ಮಹೇಶ್​ ಜಗನ್ನಾಥ ದೇವಾಲಯದ ಮಾದರಿಯಲ್ಲಿ ನಿರ್ಮಾಣ ಮಾಡಬೇಕು ಎಂದು ಆಡಳಿತ ಮಂಡಳಿಯು ಮನವಿ ಮಾಡಿದೆ.

ಸೋಮವಾರದಿಂದ ಸೆರಾಂಪೋರ್‌ ಪ್ರವಾಸದಲ್ಲಿರುವ ಸಚಿವ ಸ್ಮೃತಿ ಇರಾನಿ ಅವರನ್ನು ಮಹೇಶ್ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಭೇಟಿ ಮಾಡಿ, ರೈಲ್ವೆ ನಿಲ್ದಾಣ ಬಗ್ಗೆ ಮಾತುಕತೆ ನಡೆಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಹೀಗಾಗಿ ರೈಲ್ವೆ ಇಲಾಖೆಯೊಂದಿಗೆ ಮಾತುಕತೆ ನಡೆಸುವಂತೆ ಎಂದು ಸಚಿವರ ಗಮನ ಸೆಳೆದರು.

ಸ್ಮೃತಿ ಇರಾನಿ ತಮ್ಮ ಮೂರು ದಿನಗಳ ಪ್ರವಾಸದಲ್ಲಿ ಬಂಗಾಳದ 21 ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಮಹೇಶ್ ಜಗನ್ನಾಥ ದೇವಸ್ಥಾನ ಮತ್ತು ಉತ್ತರಪಾರದ ಸಾಂಪ್ರದಾಯಿಕ ಜೈಕೃಷ್ಣ ಗ್ರಂಥಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ, ಸೆರಾಂಪೋರ್ ಲೋಕಸಭಾ ವ್ಯಾಪ್ತಿಯ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಪ್ರಚಾರ ಕಾರ್ಯಕ್ರಮಗಳು ಮತ್ತು ಪಕ್ಷದ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾಹಿತಿಗಳ ಪ್ರತಿಮೆಗಳಿಗೆ ನಮನ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕೇಂದ್ರ ಸಚಿವ ನಾರಾಯಣ ರಾಣೆ ಬಂಗಲೆ ಕೆಡವಲು ಬಾಂಬೆ ಹೈಕೋರ್ಟ್​ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.