ETV Bharat / bharat

ಟ್ರ್ಯಾಕ್ಟರ್​ನಿಂದ ಗುದ್ದಿ, ಕೊಡಲಿಯಿಂದ ಕೊಚ್ಚಿ ಕೌನ್ಸಿಲರ್​ ಬರ್ಬರ ಹತ್ಯೆ - councilor brutally murdered with an ax

ನಗರಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ರವಿ ನಂತರ ಟಿಆರ್​ಎಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಗುರುವಾರ ನಗರಸಭೆಯ ಕಚೇರಿಗೆ ಹೋಗಿ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಅಲ್ಲಿಂದ ತನ್ನ ಬೈಕ್​ನಲ್ಲಿ ಸ್ನೇಹಿತನ ಮನೆ ಕಡೆ ಹೊರಟಿದ್ದರು. ಈ ವೇಳೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.

ಮಹೆಬೂಬ್​ಬಾದ್​ ಕೌನ್ಸಿಲರ್​ ಕೊಲೆ
ಮಹೆಬೂಬ್​ಬಾದ್​ ಕೌನ್ಸಿಲರ್​ ಕೊಲೆ
author img

By

Published : Apr 21, 2022, 5:27 PM IST

ಮಹೆಬೂಬ್​ಬಾದ್​ (ತೆಲಂಗಾಣ): ನಡುರಸ್ತೆಯಲ್ಲೇ ಕೌನ್ಸಿಲರ್​ವೊಬ್ಬರನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮಹೆಬೂಬ್​ಬಾದ್​ನಲ್ಲಿ ಗುರುವಾರ ನಡೆದಿದೆ. ಇಲ್ಲಿನ 8ನೇ ವಾರ್ಡ್​ನ 32 ವರ್ಷದ ಬಿ.ರವಿ ಎಂಬಾತನೇ ಕೊಲೆಯಾದ ಕೌನ್ಸಿಲರ್​. ಬೈಕ್​ನಲ್ಲಿ ಹೋಗುತ್ತಿದ್ದಾಗ ಆರಂಭದಲ್ಲಿ ಟ್ರ್ಯಾಕ್ಟರ್​ನಿಂದ ಡಿಕ್ಕಿ ಹೊಡೆದು ದುಷ್ಕರ್ಮಿಗಳು ರವಿಯನ್ನು ಕೆಳಗಡೆ ಕೆಡವಿದ್ದಾರೆ. ನಂತರ ಕಾರಿನಲ್ಲಿ ಮತ್ತಿಬ್ಬರು ಬಂದು ನಡುರಸ್ತೆಯಲ್ಲೇ ಕೊಡಲಿಯಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ರವಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಇತ್ತ, ಸ್ಥಳದಲ್ಲೇ ಹತ್ಯೆಗೆ ಬಳಸಿ ಕೊಡಲಿ ಮತ್ತು ರವಿಯ ಬೈಕ್​ ಬಿದ್ದಿದ್ದು ಜನತೆಯನ್ನು ಬೆಚ್ಚಿ ಬೀಳಿಸಿದೆ.

ನಗರಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ರವಿ ನಂತರ ಟಿಆರ್​ಎಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಗುರುವಾರ ನಗರಸಭೆಯ ಕಚೇರಿಗೆ ಹೋಗಿ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಅಲ್ಲಿಂದ ತನ್ನ ಬೈಕ್​ನಲ್ಲಿ ಸ್ನೇಹಿತನ ಮನೆ ಕಡೆ ಹೊರಟಿದ್ದರು. ಈ ವೇಳೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಇದಕ್ಕೆ ಹಳೆಯ ದ್ವೇಷವೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಸಿಎಂ ಬರ್ತಾರೆ ಎಂದು ಪ್ರಯಾಣಿಕರ ಕಾರನ್ನೇ ಒಯ್ದರು.. ಮಕ್ಕಳ ಸಮೇತ ಬಸ್​ ಸ್ಟಾಪ್​ಲ್ಲೇ ರಾತ್ರಿ ಕಳೆದ ಕುಟುಂಬ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.