ETV Bharat / bharat

ದೆಹಲಿಯಲ್ಲಿ ಒಂದು ವಾರ ಲಾಕ್​ಡೌನ್​ ಮುಂದುವರಿಕೆ

Lockdown extended in Newdelhi
ದೆಹಲಿಯಲ್ಲಿ ಒಂದು ವಾರ ಲಾಕ್​ಡೌನ್​ ಮುಂದುವರಿಕೆ
author img

By

Published : Apr 25, 2021, 12:08 PM IST

Updated : Apr 25, 2021, 1:20 PM IST

12:05 April 25

ದೆಹಲಿಯಲ್ಲಿ ಒಂದು ವಾರ ಲಾಕ್​ಡೌನ್​ ಮುಂದುವರಿಕೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ನವದೆಹಲಿ: ದೆಹಲಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುತ್ತಲೇ ಸಾಗಿದೆ. ಮತ್ತೊಂದೆಡೆ ಇಲ್ಲಿನ ಆಸ್ಪತ್ರೆಗಳನ್ನು ಆಮ್ಲಜನಕದ ಕೊರತೆೆ ಅತಿಯಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮೇ 3ರ ವರೆಗೂ ಲಾಕ್‌ಡೌನ್‌ ವಿಸ್ತರಿಸಿ ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿದ ಅವರು, "ಆಮ್ಲಜನಕ ಪೂರೈಕೆಗೆ ಅನುವಾಗುವ ನಿಟ್ಟಿನಲ್ಲಿ ಪೋರ್ಟಲ್‌ ಆರಂಭಿಸಲಾಗಿದೆ. ಉತ್ಪಾದಕರು, ವಿತರಕರು ಹಾಗೂ ಆಸ್ಪತ್ರೆಗಳಿಂದ ಪ್ರಸ್ತುತ ಆಮ್ಲಜನಕ ಪೂರೈಕೆ ಮತ್ತು ಸಂಗ್ರಹದ ಮಾಹಿತಿ ಅಪ್‌ಡೇಟ್‌ ಆಗಲಿದೆ. ಪ್ರತಿ 2 ಗಂಟೆಗಳಿಗೊಮ್ಮೆ ಅಪ್‌ಡೇಟ್‌ ಮಾಡಲಾಗುತ್ತದೆ. ಕೇಂದ್ರ ಮತ್ತು ರಾಜ್ಯಗಳ ತಂಡಗಳು ಜೊತೆಯಾಗಿ ಕಾರ್ಯನಿರ್ವಹಿಸುತ್ತಿವೆ" ಎಂದು ತಿಳಿಸಿದರು.

"ಕಳೆದ ವಾರದ ಲಾಕ್‌ಡೌನ್‌ನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಶೇ.36 ರಿಂದ 37ರಷ್ಟಿತ್ತು. ಲಾಕ್​ಡೌನ್​ ಬಳಿಕ ಇದೀಗ ಒಂದೆರಡು ದಿನಗಳಿಂದ ಕೊರೊನಾ ಪಾಸಿಟಿವ್​ ಪ್ರಮಾಣ ಇಳಿಮುಖವಾಗಿದೆ. ಇಂದು ಶೇ. 30ಕ್ಕಿಂತ ಕಡಿಮೆಯಾಗಿದೆ. ದೆಹಲಿಯಲ್ಲಿ ಆರು ದಿನಗಳ ಲಾಕ್‌ಡೌನ್‌ ಜಾರಿ ಮಾಡಲಾಗುತ್ತಿದೆ. ಮೇ 3 ರ ಬೆಳಿಗ್ಗೆ 5 ಗಂಟೆಯ ವರೆಗೂ ಲಾಕ್‌ಡೌನ್‌ ವಿಸ್ತರಿಸಲಾಗಿದೆ" ಎಂದು ಘೋಷಿಸಿದರು.

ಇದನ್ನೂ ಓದಿ: ರಾಜಕೀಯ ಕೆಲಸ ಬದಿಗಿಟ್ಟು ಜನರ ಸಂಕಷ್ಟಕ್ಕೆ ನೆರವಾಗಿ: ಕೈ ನಾಯಕರಿಗೆ ರಾಹುಲ್ ಕರೆ

ಈ ಹಿಂದೆ ನಗರದಲ್ಲಿ ಕೋವಿಡ್​-19 ಸೋಂಕು ಹರಡುವುದನ್ನು ತಡೆಯುವ ಪ್ರಯತ್ನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಏಪ್ರಿಲ್ 26 ರವರೆಗೆ ಆರು ದಿನಗಳ ಲಾಕ್​ಡೌನ್ ಘೋಷಿಸಿದ್ದರು.

ದೆಹಲಿಯ ಕೋವಿಡ್‌ ರಿಪೋರ್ಟ್

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 357 ಸೋಂಕಿತರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಾವಿನ ಪ್ರಮಾಣ ಶೇ 32.27 ರಷ್ಟಿದೆ. ಹೊಸದಾಗಿ 24,103 ಜನಕ್ಕೆ ಕೊರೊನಾ ಸೋಂಕು ತಗುಲಿದೆ. ಇದೇ ವೇಳೆ 22,695 ಜನ ಗುಣಮುಖರಾಗಿ ಮನೆಗೆ ಮರಳಿದ್ದು, ಪ್ರಸ್ತುತ 93,080 ಸಕ್ರಿಯ ಪ್ರಕರಣಗಳಿವೆ.

Last Updated : Apr 25, 2021, 1:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.