ETV Bharat / bharat

ಐಪಿ ವಿಳಾಸ ಬಳಸಿ ಲೋಕಸೇವಾ ಆಯೋಗದ ಪ್ರಶ್ನೆಪತ್ರಿಕೆ ಕಳವು: ತಮ್ಮನ ನೌಕರಿಗಾಗಿ ಅಖಾಡಕ್ಕೆ ಇಳಿದಿದ್ದ ಟೀಚರ್​! - ಸಹಾಯಕ ಎಂಜಿನಿಯರ್​ ಪ್ರಶ್ನೆ ಪತ್ರಿಕೆ ಸೋರಿಕೆ

ತೆಲಂಗಾಣ ಲೋಕಸೇವಾ ಆಯೋಗ (ಟಿಎಸ್‌ಪಿಎಸ್‌ಸಿ)ದ ​ಸಹಾಯಕ ಎಂಜಿನಿಯರ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಬಯಲಾಗಿದೆ. ತಮ್ಮ ನೌಕರಿಗಾಗಿ ಶಿಕ್ಷಕಿ ಅಕ್ಕ ಅಖಾಡಕ್ಕೆ ಇಳಿದಿದ್ದಳು ಎಂದು ತನಿಖೆಯಲ್ಲಿ ಗೊತ್ತಾಗಿದೆ.

leakage-of-tspsc-ae-question-papers-dot-dot-dot-nine-people-arrested
ಐಪಿ ವಿಳಾಸ ಬಳಸಿ ಲೋಕಸೇವಾ ಆಯೋಗದ ಪ್ರಶ್ನೆಪತ್ರಿಕೆ ಕಳವು: ತಮ್ಮನ ನೌಕರಿಗಾಗಿ ಅಖಾಡಕ್ಕೆ ಇಳಿದಿದ್ದ ಟೀಚರ್​!
author img

By

Published : Mar 14, 2023, 8:44 PM IST

ಹೈದರಾಬಾದ್ (ತೆಲಂಗಾಣ): ನೆರೆಯ ತೆಲಂಗಾಣದಲ್ಲೂ ನೇಮಕಾತಿ ಹರಗಣ ಬೆಳಕಿಗೆ ಬಂದಿದ್ದು, ತೆಲಂಗಾಣ ಲೋಕಸೇವಾ ಆಯೋಗ (ಟಿಎಸ್‌ಪಿಎಸ್‌ಸಿ) ನಡೆಸಿದ್ದ ​ಸಹಾಯಕ ಎಂಜಿನಿಯರ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪ್ರವೀಣ್​ ಕುಮಾರ್, ರಾಜಶೇಖರ್, ರೇಣುಕಾ, ಢಾಕ್ಯಾ ನಾಯ್ಕ್, ಕೆ.ರಾಜೇಶ್ವರ ನಾಯ್ಕ್, ಕೆ.ನೀಲೇಶ್​ ನಾಯ್ಕ್, ಪಿ.ಗೋಪಾಲನಾಯ್ಕ್, ಕೆ.ಶ್ರೀನಿವಾಸ್, ಕೆ.ರಾಜೇಂದ್ರನಾಯಕ್ ಎಂದು ಗುರುತಿಸಲಾಗಿದೆ.

ಮಾರ್ಚ್​ 5ರಂದು ಟಿಎಸ್‌ಪಿಎಸ್‌ಸಿ ಸಹಾಯಕ ಎಂಜಿನಿಯರ್ (ಎಇ) ನೇಮಕಾತಿ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಗೆ ಅಂದಾಜು 25 ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದರು. ಆದರೆ, ಪರೀಕ್ಷೆಗೂ ಮುನ್ನವೇ ​ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಟಿಎಸ್‌ಪಿಎಸ್‌ಸಿಯ ಆಡಳಿತದ ವಿಭಾಗದ ಸಹಾಯಕ ಕಾರ್ಯದರ್ಶಿ ಹೈದರಾಬಾದ್​ನ ಬೇಗಂಬಜಾರ್ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಬೇಗಂ ಬಜಾರ್ ಪೊಲೀಸರು ಮತ್ತು ಕೇಂದ್ರ ವಲಯ ಟಾಸ್ಕ್ ಫೋರ್ಸ್ ತಂಡ ಜಂಟಿ ಕಾರ್ಯಾಚರಣೆ ನಡೆಸಿ, ಪ್ರಮುಖ ಆರೋಪಿಗಳು ಸೇರಿ ಒಂಬತ್ತು ಜನರನ್ನು ಬಂಧಿಸಲಾಗಿದೆ. ಈ ಗ್ಯಾಂಗ್‌ನಲ್ಲಿ ಟಿಎಸ್‌ಪಿಎಸ್‌ಸಿಯ ನೆಟ್‌ವರ್ಕ್​ ಅಡ್ಮಿನ್ ಮತ್ತು ಸೈಬರಾಬಾದ್ ಕಮಿಷನರೇಟ್‌ನ ಮೇಡ್ಚಲ್ ಠಾಣೆ ಪೊಲೀಸ್ ಕಾನ್ಸ್​ಟೇಬಲ್​​ ಸೇರಿದ್ದಾರೆ. ಅಲ್ಲದೇ, ನಾಲ್ಕು ಪೆನ್​ ಡ್ರೈವ್​​, ಮೂರು ಲ್ಯಾಪ್​ ಟಾಪ್​, ಕಂಪ್ಯೂಟರ್​, ಐದು ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ವಿಧಿವಿಜ್ಞಾನ ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಹಿನ್ನೆಲೆ: ಸದ್ಯ ಬಂಧಿತ ಆರೋಪಿಗಳ ಪೈಕಿ ಐವರು ಸರ್ಕಾರಿ ನೌಕರರು, ಇಬ್ಬರು ಅಭ್ಯರ್ಥಿಗಳು ಕೂಡ ಸೇರಿದ್ದಾರೆ. 32 ವರ್ಷದ ಪ್ರವೀಣ್​ ಕುಮಾರ್ ಪ್ರಮುಖ ಆರೋಪಿ ಎನ್ನಲಾಗುತ್ತಿದ್ದು, ಈತ ಆಯೋಗದ ಸಹಾಯಕ ವಿಭಾಗ ಅಧಿಕಾರಿ. ಮತ್ತೊಬ್ಬ ಆಯೋಗದಲ್ಲಿ ನೆಟ್‌ವರ್ಕ್ ಅಡ್ಮಿನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 35 ವರ್ಷದ ಅಟ್ಲಾ ರಾಜಶೇಖರ್ ರೆಡ್ಡಿ ಕೂಡ ಪ್ರಮುಖ ಆರೋಪಿಯಾಗಿದ್ದಾನೆ. 35 ವರ್ಷದ ಶಿಕ್ಷಕಿ ರೇಣುಕಾ ಮತ್ತು ವಿಕಾರಾಬಾದ್ ಜಿಲ್ಲಾ ಕಂದಾಯ ಇಲಾಖೆಯಲ್ಲಿ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಆಕೆಯ 38 ವರ್ಷದ ಪತಿ ಢಾಕ್ಯಾ ನಾಯ್ಕ್, ಮೇಡ್ಚಲ್​ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಕೆ.ಶ್ರೀನಿವಾಸ್ (30) ಸಹ ಸೇರಿದ್ದಾರೆ.

ಐಪಿ ವಿಳಾಸ ಬಳಸಿ ಪ್ರಶ್ನೆಪತ್ರಿಕೆ ಕಳವು: ಅನುಕಂಪದ ಆಧಾರದಡಿ ಪ್ರವೀಣ್​ ಕುಮಾರ್ ಟಿಎಸ್‌ಪಿಎಸ್‌ಸಿಯಲ್ಲಿ ಕಿರಿಯ ಸಹಾಯಕರಾಗಿ ಸೇರಿಕೊಂಡಿದ್ದರು. 2017ರಿಂದ ಸಹಾಯಕ ವಿಭಾಗ ಅಧಿಕಾರಿ (ಎಎಸ್​ಒ) ಕಾರ್ಯನಿರ್ವಹಿಸುತ್ತಿದ್ದರು. ಮತ್ತೊಬ್ಬ ರಾಜಶೇಖರ್ ರೆಡ್ಡಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದರು. ನೆಟ್‌ವರ್ಕ್ ಪರಿಣಿತರಾಗಿರುವ ರಾಜಶೇಖರ್, ಆರೋಗದ ಎಲ್ಲ ಕಂಪ್ಯೂಟರ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಐಪಿ (Internet Protocol) ವಿಳಾಸಗಳನ್ನು ಹೊಂದಿದ್ದರು. ಅಂತೆಯೇ, ಇಬ್ಬರೂ ಗೌಪ್ಯ ವಿಭಾಗದ ಕಂಪ್ಯೂಟರ್‌ನಿಂದ ಡೇಟಾ ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಡೇಟಾವನ್ನು ಪ್ರವೀಣ್​ ಪೆನ್‌ಡ್ರೈವ್‌ಗೆ ವರ್ಗಾಯಿಸಿ, ​ಪರೀಕ್ಷೆಯ ಮುಖ್ಯ ಪತ್ರಿಕೆ ಮತ್ತು ಸಾಮಾನ್ಯ ಅಧ್ಯಯನದ ಪತ್ರಿಕೆಯ ಪ್ರಿಂಟ್​ಔಟ್ ತೆಗೆದುಕೊಂಡಿದ್ದಾರೆ.

ತಮ್ಮನಿಗಾಗಿ ಅಖಾಡಕ್ಕೆ ಇಳಿದಿದ್ದ ಅಕ್ಕ: ಮತ್ತೊಂದೆಡೆ, ಶಿಕ್ಷಕಿಯಾಗಿದ್ದ ರೇಣುಕಾ ಈ ಹಿಂದೆ ಕೆಲಸದ ನಿಮಿತ್ತ ಆಯೋಗದ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಪ್ರವೀಣ್‌ಕುಮಾರ್​ನ ಪರಿಚಯವಾಗಿತ್ತು. ಅಲ್ಲಿಂದ ಆಗಾಗ್ಗೆ ಇಬ್ಬರು ಫೋನ್​ ಮೂಲಕ ಸಂಪರ್ಕದಲ್ಲಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ತನ್ನ ಸಹೋದರ ಕೆ.ರಾಜೇಶ್ವರ್​ ನಾಯ್ಕ್​ಗಾಗಿ ಅಖಾಡಕ್ಕೆ ಇಳಿದಿದ್ದಳು.

ಇದಕ್ಕಾಗಿ ಕಂದಾಯ ಇಲಾಖೆಯಲ್ಲಿ ತಾಂತ್ರಿಕ ಸಹಾಯಕರಾಗಿದ್ದ ಪತಿ ಢಾಕ್ಯಾ ನಾಯ್ಕ್​ನೊಂದಿಗೆ ಸೇರಿಕೊಂಡು ರೇಣುಕಾ, ಪ್ರವೀಣ್​ನನ್ನು ಸಂಪರ್ಕಿಸಿದ್ದರು. ಇದೇ ಕಚೇರಿಯಲ್ಲಿ ನೆಟ್ ವರ್ಕ್ ಅಡ್ಮಿನ್​ ಆಗಿದ್ದ ರಾಜಶೇಖರ್ ರೆಡ್ಡಿ ಕೂಡ ಈ ಗ್ಯಾಂಗ್​ನಲ್ಲಿ ಸೇರಿಕೊಂಡಿದ್ದು, ಎಲ್ಲರೂ ಸೇರಿ ಪ್ರಶ್ನೆ ಪತ್ರಿಕೆಗಳನ್ನು ಕದಿಯಲು ಯೋಜನೆ ರೂಪಿಸಿದ್ದರು ಎಂಬುವುದಾಗಿ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇಷ್ಟೇ ಅಲ್ಲ, ಈ ಪ್ರಶ್ನೆ ಪತ್ರಿಕೆ ಪಡೆಯಲು ಪರೀಕ್ಷೆಗೆ ಮೂರು ದಿನಗಳು ಬಾಕಿರುವಾಗ ಎಂದರೆ ಮಾರ್ಚ್ 2ರಂದು ಮತ್ತು ಪರೀಕ್ಷೆ ನಂತರ 6ರಂದು ಮತ್ತೊಮ್ಮೆ ಐದು ಲಕ್ಷ ರೂಪಾಯಿಗಳನ್ನು ರೇಣುಕಾ ದಂಪತಿ ಪ್ರವೀಣ್‌ಗೆ ಹಸ್ತಾಂತರಿಸಲಾಗಿದೆ. ಒಟ್ಟಾರೆ ಎರಡು ಪತ್ರಿಕೆಗಳನ್ನು 13.5 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ. ಈಗಾಗಲೇ ಬಂಧಿತ ಒಂಬತ್ತು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಬಂಧಿತರಿಗೆ ಭವಿಷ್ಯದ ನೇಮಕಾತಿ ಬಾಗಿಲು ಬಂದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.