ನವದೆಹಲಿ: ಬಾಲಿವುಡ್ ನೈಟಿಂಗೇಲ್ ಲತಾ ಮಂಗೇಶ್ಕರ್ ಇಂದು ಇಹಲೋಕ ತ್ಯಜಿಸಿದ್ದಾರೆ. ಇವರ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.
ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲತಾಜೀ ಅವರು ನಿಧನರಾದರು ಎಂಬ ನೋವಿನ ಸುದ್ದಿ ಕೇಳಿದೆ. ಹಲವು ದಶಕಗಳಿಂದ ಅವರು ಭಾರತದ ಅತ್ಯಂತ ಪ್ರೀತಿಯ ಧ್ವನಿಯಾಗಿಯಾಗಿದ್ದರು. ಲತಾ ಮಂಗೇಶ್ಕರ್ ಅವರ ಬಂಗಾರದಂಥ ಧ್ವನಿ ಸದಾ ಅಮರ. ಅವರು ಅಭಿಮಾನಿಗಳ ಹೃದಯದಲ್ಲಿ ಯಾವಾಗಲೂ ಪ್ರತಿಧ್ವನಿಸುತ್ತಿರುತ್ತಾರೆ. ಲತಾ ಮಂಗೇಶ್ಕರ್ ಅವರ ಕುಟುಂಬಕ್ಕೆ, ಸ್ನೇಹಿತರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.
-
भारतीय संगीत की बगिया में सुरों को चुन-चुन कर सजाने वाली सुर साम्राज्ञी सुश्री लता मंगेशकर जी के निधन का दुखद समाचार मिला।
— Priyanka Gandhi Vadra (@priyankagandhi) February 6, 2022 " class="align-text-top noRightClick twitterSection" data="
उनके निधन से भारतीय कला जगत को एक अपूर्णीय क्षति हुई है।
ईश्वर लता जी को श्री चरणों में स्थान दें और इस दुःख की घड़ी में परिजनों को कष्ट सहने का साहस दें। pic.twitter.com/feYZ3hTUuY
">भारतीय संगीत की बगिया में सुरों को चुन-चुन कर सजाने वाली सुर साम्राज्ञी सुश्री लता मंगेशकर जी के निधन का दुखद समाचार मिला।
— Priyanka Gandhi Vadra (@priyankagandhi) February 6, 2022
उनके निधन से भारतीय कला जगत को एक अपूर्णीय क्षति हुई है।
ईश्वर लता जी को श्री चरणों में स्थान दें और इस दुःख की घड़ी में परिजनों को कष्ट सहने का साहस दें। pic.twitter.com/feYZ3hTUuYभारतीय संगीत की बगिया में सुरों को चुन-चुन कर सजाने वाली सुर साम्राज्ञी सुश्री लता मंगेशकर जी के निधन का दुखद समाचार मिला।
— Priyanka Gandhi Vadra (@priyankagandhi) February 6, 2022
उनके निधन से भारतीय कला जगत को एक अपूर्णीय क्षति हुई है।
ईश्वर लता जी को श्री चरणों में स्थान दें और इस दुःख की घड़ी में परिजनों को कष्ट सहने का साहस दें। pic.twitter.com/feYZ3hTUuY
ಭಾರತದ ಸಂಗೀತ ಉದ್ಯಾನವನ್ನು ಸ್ವರಗಳಿಂದ ಅಲಂಕರಿಸಿದ್ದ ಲತಾ ಮಂಗೇಶ್ಕರ್ಜೀ ಇನ್ನಿಲ್ಲವೆಂಬ ಸುದ್ದಿ ದುಃಖ ಉಂಟುಮಾಡಿದೆ. ದೇಶದ ಕಲಾ ಜಗತ್ತಿಗೆ ಇದೊಂದು ಬಹು ದೊಡ್ಡ, ತುಂಬಲಾರದ ನಷ್ಟ. ಅವರ ಆತ್ಮ ದೇವರಲ್ಲಿ ಲೀನವಾಗಲಿ. ಹಾಗೆಯೇ, ಲತಾಜೀ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಭಗವಂತ ನೀಡಲಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.
ಓದಿ:ಮೌನವಾಯ್ತು ಹಾಡುಹಕ್ಕಿ: ಗಾನಕೋಗಿಲೆ ಲತಾ ಮಂಗೇಶ್ಕರ್ ಇನ್ನಿಲ್ಲ..!