ನವದೆಹಲಿ: ತಮಿಳುನಾಡಿನ ಕುನೂರು ಬಳಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಸೇನಾ ಮುಖಂಡ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಅಂತ್ಯಕ್ರಿಯೆಯು ಇಂದು ನವದೆಹಲಿಯ ಕಂಟೋನ್ಮೆಂಟ್ ಪ್ರದೇಶದ ಬ್ರಾರ್ ಸ್ಕ್ವೇರ್ ರುದ್ರಭೂಮಿಯಲ್ಲಿ ನಡೆಯಲಿದೆ.
ಇದಕ್ಕೂ ಮುನ್ನ ಜನರಲ್ ರಾವತ್ ಅವರ ಪಾರ್ಥಿವ ಶರೀರವನ್ನು ನವದೆಹಲಿಯ ಕಾಮರಾಜ್ ಮಾರ್ಗದ ನಂ. 3ರಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ನಮನಕ್ಕೆ ಇಡಲಾಗುವುದು. ಬೆಳಗ್ಗೆ 11 ಗಂಟೆಯಿಂದ 12.30ರವರೆಗೆ ಗಣ್ಯರು ಮತ್ತು ನಾಗರಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶವಿರಲಿದೆ. ಬಳಿಕ ಸೇನಾ ಸಿಬ್ಬಂದಿ ಅಂತಿಮ ಗೌರವ ಸಲ್ಲಿಸಲಿದ್ದಾರೆ.
ತದನಂತರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಜನರಲ್ ಬಿಪಿನ್ ರಾವತ್ ಅವರ ನಿವಾಸದಿಂದ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯು ಬ್ರಾರ್ ಸ್ಕ್ವೇರ್ ರುದ್ರಭೂಮಿಯತ್ತ ತೆರಳಲಿದೆ.
ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ 13 ಮಂದಿಯ ಪಾರ್ಥಿವ ಶರೀರಗಳನ್ನು ನಿನ್ನೆ ದೆಹಲಿಯ ಪಾಲಂ ಏರ್ಬೇಸ್ಗೆ ತರಲಾಗಿತ್ತು. ಪಾಲಂ ಏರ್ಬೇಸ್ನಲ್ಲಿ ಪಾರ್ಥಿವ ಶರೀರಗಳಿಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿ, ಅಂತಿಮ ದರ್ಶನ ಪಡೆದಿದ್ದರು. ಇದೇ ವೇಳೆ ವೀರ ಪುತ್ರರ ಕುಟುಂಬಸ್ಥರಿಗೆ ಮೋದಿ ಸಾಂತ್ವನ ಹೇಳಿದ್ದರು.
-
#TamilNaduChopperCrash | The mortal remains of Brig LS Lidder being placed at Palam airbase. pic.twitter.com/1pe4peOyPn
— ANI (@ANI) December 9, 2021 " class="align-text-top noRightClick twitterSection" data="
">#TamilNaduChopperCrash | The mortal remains of Brig LS Lidder being placed at Palam airbase. pic.twitter.com/1pe4peOyPn
— ANI (@ANI) December 9, 2021#TamilNaduChopperCrash | The mortal remains of Brig LS Lidder being placed at Palam airbase. pic.twitter.com/1pe4peOyPn
— ANI (@ANI) December 9, 2021
ಇದಾದ ಬಳಿಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಮುಖ್ಯಸ್ಥ ಅಜಿತ್ ದೋವಲ್, ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅಂತಿಮ ನಮನ ಸಲ್ಲಿಸಿದ್ದರು.
ದುರಂತದಲ್ಲಿ ಬಿಪಿನ್ ರಾವತ್ ದಂಪತಿ ಜೊತೆಗಿದ್ದ ಹೆಲಿಕಾಪ್ಟರ್‌ನ ಪೈಲಟ್ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್, ಜೂನಿಯರ್ ವಾರಂಟ್ ಅಧಿಕಾರಿ ರಾಣಾ ಪ್ರತಾಪ್ ದಾಸ್, ಜೂನಿಯರ್ ವಾರಂಟ್ ಅಧಿಕಾರಿ ಅರಕ್ಕಲ್ ಪ್ರದೀಪ್, ಹವಾಲ್ದಾರ್ ಸತ್ಪಾಲ್ ರೈ, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಮತ್ತು ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜ ಅವರು ಮರಣ ಹೊಂದಿದ್ದಾರೆ.
ಅಪಘಾತದಲ್ಲಿ ಬದುಕುಳಿದ ಏಕೈಕ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಮೈಸೂರು: ಕಲ್ಲಿನ ವಿಗ್ರಹ ಪೂಜಿಸಿ ಜನ ಮೋಸ ಹೋಗುತ್ತಾರೆಂದು ಭಗ್ನಗೊಳಿಸಿದ್ದ ಆರೋಪಿ ಬಂಧನ