ETV Bharat / bharat

ನ. 27ರಿಂದ ಲಕ್ಷ್ಮಿ ವಿಲಾಸ್ ಬ್ಯಾಂಕ್-ಡಿಬಿಐಎಲ್ ವಿಲೀನ ಜಾರಿಗೆ ; ಆರ್‌ಬಿಐ - ಕೇಂದ್ರ ಸಚಿವ ಸಂಪುಟ ಅನುಮೋದನೆ

ನವೆಂಬರ್ 27, 2020ರಂದು ಇದು ಜಾರಿಗೆ ಬರಲಿದೆ. ಲಕ್ಷ್ಮಿ ವಿಲಾಸ್ ಬ್ಯಾಂಕ್ ಲಿಮಿಟೆಡ್‌ನ ಎಲ್ಲಾ ಶಾಖೆಗಳು ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್‌ನ ಶಾಖೆಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಆರ್‌ಬಿಐ ತಿಳಿಸಿದೆ..

Lakshmi Vilas Bank-DBIL merger effective from Nov 27: RBI
ಸಂಗ್ರಹ ಚಿತ್ರ
author img

By

Published : Nov 25, 2020, 7:46 PM IST

ಮುಂಬೈ : ಆರ್ಥಿಗ ಬಿಕ್ಕಟ್ಟಿನಿಂದ ಬಳಲುತ್ತಿರುವ ಹಾಗೂ ನಿರೀಕ್ಷಿತ ಲಾಭ ಗಳಿಸುವಲ್ಲಿ ಎಡವಿರುವ ಲಕ್ಷ್ಮಿ ವಿಲಾಸ್ ಬ್ಯಾಂಕ್‌ನ ಡಿಬಿಎಸ್ ಬ್ಯಾಂಕ್ ಇಂಡಿಯಾದೊಂದಿಗೆ ನವೆಂಬರ್ 27ರಿಂದ ಜಾರಿಗೆ ಬರುವಂತೆ ವಿಲೀನಗೊಳಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಸಾಲಗಾರನಿಗೆ ವಿಧಿಸಲಾದ ನಿಷೇಧವನ್ನು ಆ ದಿನವೇ ತೆಗೆದು ಹಾಕಲಾಗುವುದು ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

ಇದನ್ನೂ ಓದಿ: ಆರನೇ ದಿನ ಸ್ವಲ್ಪ ಚೇತರಿಕೆಯಾದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುಗಳ ಪ್ರಮಾಣ

ಲಕ್ಷ್ಮಿ ವಿಲಾಸ್ ಬ್ಯಾಂಕ್ ಲಿಮಿಟೆಡ್ (LVB) ಬ್ಯಾಂಕ್​ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಈ ಬ್ಯಾಂಕ್​ ಅನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾ(DBIL) ಲಿಮಿಟೆಡ್ ಜೊತೆ ವಿಲೀನಗೊಳಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿ ಆದೇಶ ತಂದ ಕೆಲವೇ ಗಂಟೆಗಳಲ್ಲಿ ಆರ್​ಬಿಐ ಈ ಹೇಳಿಕೆ ಕೊಟ್ಟಿದೆ.

Lakshmi Vilas Bank-DBIL merger effective from Nov 27: RBI
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್

ನವೆಂಬರ್ 27, 2020ರಂದು ಇದು ಜಾರಿಗೆ ಬರಲಿದೆ. ಲಕ್ಷ್ಮಿ ವಿಲಾಸ್ ಬ್ಯಾಂಕ್ ಲಿಮಿಟೆಡ್‌ನ ಎಲ್ಲಾ ಶಾಖೆಗಳು ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್‌ನ ಶಾಖೆಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಆರ್‌ಬಿಐ ತಿಳಿಸಿದೆ.

ಎಲ್‌ವಿಬಿಯ ಠೇವಣಿದಾರರು ಶುಕ್ರವಾರದಿಂದ ಜಾರಿಗೆ ಬರುವಂತೆ ಡಿಬಿಎಸ್ ಬ್ಯಾಂಕ್ ಇಂಡಿಯಾದ ಗ್ರಾಹಕರಾಗಿ ತಮ್ಮ ಖಾತೆಗಳನ್ನು ಬದಲಾಯಿಸಿಕೊಳ್ಳಬಹುದು. ಇದರ ಪರಿಣಾಮವಾಗಿ ಲಕ್ಷ್ಮಿ ವಿಲಾಸ್ ಬ್ಯಾಂಕ್ ಲಿಮಿಟೆಡ್‌ನಲ್ಲಿನ ನಿಷೇಧವು ಆ ದಿನಾಂಕದಿಂದ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ಆರ್​ಬಿಐ ಹೇಳಿದೆ.

Lakshmi Vilas Bank-DBIL merger effective from Nov 27: RBI
ಸಂಗ್ರಹ ಚಿತ್ರ

ಇದನ್ನೂ ಓದಿ: ಲಕ್ಷ್ಮಿ ವಿಲಾಸ್ ಬ್ಯಾಂಕ್​ಗೆ ವಿತ್​​ಡ್ರಾ ಮೀತಿ: 'ಗ್ರಾಹಕರ ಹಣ ಸುರಕ್ಷಿತ'ವೆಂದ ಆರ್‌ಬಿಐ ನೇಮಿತ ನಿರ್ವಾಹಕ

ಖಾಸಗಿ ವಲಯದ ಸಾಲಗಾರರ ಮೇಲೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಆರ್‌ಬಿಐ ನವೆಂಬರ್ 17ರಂದು ಎಲ್‌ವಿಬಿ ಮಂಡಳಿಯನ್ನು ರದ್ದುಗೊಳಿಸಿತ್ತು. ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್ ಲಕ್ಷ್ಮಿ ವಿಲಾಸ್ ಬ್ಯಾಂಕಿನ ಗ್ರಾಹಕರಿಗೆ ಎಂದಿನಂತೆ ಸೇವೆಯನ್ನು ಒದಗಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದೂ ಸಹ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.