ನವದೆಹಲಿ : ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ಯಾವುದೇ ಹಕ್ಕಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಕಿಡಿಕಾರಿದ್ದಾರೆ.
ಲೋಕಸಭಾ ಕಲಾಪದಲ್ಲಿ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಬಿಜೆಪಿ ಸರ್ಕಾರದ ವಿರುದ್ಧ ದೇಶದ್ರೋಹ ಹಾಗೂ ಕಾನೂನು ದುರುಪಯೋಗಪಡಿಸಿಕೊಂಡಿರುವುದಾಗಿ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಿಶನ್ ರೆಡ್ಡಿ, ಪ್ರಜಾಪ್ರಭುತ್ವ-ಕಾನೂನು ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ಯಾವುದೇ ಹಕ್ಕಿಲ್ಲ. ಕಾನೂನು ದುರುಪಯೋಗದ ಬಗ್ಗೆ ಕಾಂಗ್ರೆಸ್ ಸ್ವಲ್ಪ ಕಡಿಮೆ ಮಾತನಾಡಿದರೆ ಒಳಿತು ಎಂದರು.
ಇದನ್ನೂ ಓದಿ: 'ರಾಷ್ಟ್ರೀಯ ಅರಿಶಿಣ ಮಂಡಳಿ' ರಚನೆಗೆ ಲೋಕಸಭೆಯಲ್ಲಿ ಬಚ್ಚೇಗೌಡ ಆಗ್ರಹ
ಆಂತರಿಕ ಭದ್ರತೆ ನಿರ್ವಹಣಾ ಕಾಯ್ದೆ (MISA) ಅಡಿ ನೀವು ಪತ್ರಕರ್ತರು, ವಿದ್ಯಾರ್ಥಿಗಳು ಹಾಗೂ ಜೆ.ಪಿ.ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಮತ್ತು ಇತರರನ್ನು ಜೈಲಿಗೆ ಕಳುಹಿಸಿದ್ದೀರಿ. 1980ರಲ್ಲಿ ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆ ತಡೆ ಕಾಯ್ದೆ (TADA) ಅಡಿ ಅನೇಕ ಜನರನ್ನು ಜೈಲಿಗೆ ಹಾಕಿದ್ದೀರಿ ಎಂದು ಕಿಶನ್ ರೆಡ್ಡಿ ಆರೋಪಿಸಿದರು.