ಕೊಲ್ಲಂ/ಕೇರಳ: ಕೊಲ್ಲಂನ ಅತ್ಯಂತ ಜನಪ್ರಿಯ ಪ್ರವಾಸಿತಾಣವಾದ ಅಷ್ಟಮುಡಿ ಸರೋವರವು ಸಾಹಸ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತ ಸ್ಥಳವಾಗಿದ್ದು, ಸಾಹಸಿಗಳನ್ನು ಹೆಚ್ಚು ಆಕರ್ಷಿಸುತ್ತಿದೆ.
ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳಿಗಾಗಿ ಜೆಟ್ ಸ್ಕೈಯಿಂಗ್ ಮತ್ತು ಫ್ಲೈ ಬೋರ್ಡ್ ಸವಾರಿಗಳು ಸರೋವರದಲ್ಲಿ ಪ್ರಾರಂಭವಾಗಲಿವೆ. ಅಷ್ಟಮುಡಿ ಲೇಕ್ ವ್ಯೂ ಯೋಜನೆಯ ಭಾಗವಾಗಿ, ಅಷ್ಟಮುಡಿ ಸರೋವರದ ಮತ್ತು ಅದರ ಉದ್ದಕ್ಕೂ ಅನೇಕ ಪ್ರವಾಸೋದ್ಯಮ ಕೇಂದ್ರಗಳನ್ನು ಸಂಪರ್ಕಿಸಲಾಗಿದೆ. ಜೆಟ್ ಸ್ಕೈಯಿಂಗ್ನಲ್ಲಿ ರೈಡರ್ ಜೊತೆ ಇನ್ನೊಬ್ಬ ವ್ಯಕ್ತಿ ಸಹ ಗಂಟೆಗೆ 110 ಕಿ.ಮೀ. ವೇಗದಲ್ಲಿ ಸವಾರಿ ಮಾಡುತ್ತಾ ನೀರಿನ ಮೇಲೆ ತೇಲುತ್ತಾ ಎಂಜಾಯ್ ಮಾಡಬಹುದು.
ದೇಶದಲ್ಲಿ ಪ್ರವಾಸಿಗರು ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿ ಗೋವಾದ ಕಡಲತೀರಗಳಲ್ಲಷ್ಟೇ ಕಂಡು ಬರ್ತಿತ್ತು. ಆದರೆ, ಈಗ ಕೇರಳದಲ್ಲಿ ಕೂಡ ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ಪಾಲ್ಗೊಂಡು ಥ್ರಿಲ್ ಆಗಬಹುದು.
ಇದನ್ನೂ ಓದಿ:ಗೂಗಲ್ ಸಿಇಒ ಸೇರಿದಂತೆ ಮೂವರ ವಿರುದ್ಧದ ಎಫ್ಐಆರ್ ರದ್ದು