ನವದೆಹಲಿ: ಭಯೋತ್ಪಾದಕರ ಎನ್‌ಕೌಂಟರ್‌ನಲ್ಲಿ ನಮ್ಮ ಸೈನಿಕರು ಹುತಾತ್ಮರಾಗುತ್ತಿದ್ದರೆ ಪಾಕಿಸ್ತಾನದ ವಿದೇಶಾಂಗ ಸಚಿವರು ಭಾರತ ಪ್ರವಾಸ ಕೈಗೊಂಡಿರುವುದು ಇಲ್ಲಿನ ಜನರಲ್ಲಿ ನೋವು ಮತ್ತು ಕೋಪ ತರಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ನಮ್ಮ ಐವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರಿಗೆ ಮೋದಿ ಸರ್ಕಾರವು ಆತ್ಮೀಯ ಸ್ವಾಗತವನ್ನು ನೀಡಿರುವುದನ್ನು ಆಕ್ಷೇಪಿಸಿ ಎಎಪಿ ಸಂಸದ ಸಂಜಯ್ ಸಿಂಗ್ ಅವರ ಟ್ವೀಟ್ ಅನ್ನು ಸಿಎಂ ಕೇಜ್ರಿವಾಲ್ ರಿಟ್ವೀಟ್ ಮಾಡಿದ್ದಾರೆ.
ರಿಟ್ವೀಟ್ ಮಾಡಿರುವ ಕೇಜ್ರಿವಾಲ್ ತಮ್ಮ ಟ್ವೀಟ್‌ನಲ್ಲಿ, ಇಲ್ಲಿ ನಮ್ಮ ಭಾರತೀಯ ಸೈನಿಕರು ಹುತಾತ್ಮರಾಗುತ್ತಿದ್ದಾರೆ. ಆದರೆ ವಿಪರ್ಯಾಸ ಎಂಬಂತೆ ಕೇಂದ್ರ ಸರ್ಕಾರವು ಪಾಕಿಸ್ತಾನದ ವಿದೇಶಾಂಗ ಸಚಿವರೊಂದಿಗೆ ಮಾತುಕತೆಯಲ್ಲಿ ತೊಡಗಿರುವುದರಿಂದ ಭಾರತೀಯರೆಲ್ಲರೂ ಕೋಪಗೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ 5 ಭಾರತೀಯ ಸೈನಿಕರು ಹುತಾತ್ಮರಾದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಎಎಪಿ ಟ್ವಿಟ್ನ ಮೂಲಕ ಮಾತಿನ ದಾಳಿ ನಡೆಸಿದೆ.
-
जब हमारे जवान शहीद हो रहे हैं, ऐसे में केंद्र सरकार द्वारा पाकिस्तानी विदेश मंत्री की ख़ातिर करने से सभी देशवासियों को बेहद पीड़ा और रोष है
— Arvind Kejriwal (@ArvindKejriwal) May 5, 2023 " class="align-text-top noRightClick twitterSection" data="
वीर शहीदों को नमन। https://t.co/BVL0BzTKxx
">जब हमारे जवान शहीद हो रहे हैं, ऐसे में केंद्र सरकार द्वारा पाकिस्तानी विदेश मंत्री की ख़ातिर करने से सभी देशवासियों को बेहद पीड़ा और रोष है
— Arvind Kejriwal (@ArvindKejriwal) May 5, 2023
वीर शहीदों को नमन। https://t.co/BVL0BzTKxxजब हमारे जवान शहीद हो रहे हैं, ऐसे में केंद्र सरकार द्वारा पाकिस्तानी विदेश मंत्री की ख़ातिर करने से सभी देशवासियों को बेहद पीड़ा और रोष है
— Arvind Kejriwal (@ArvindKejriwal) May 5, 2023
वीर शहीदों को नमन। https://t.co/BVL0BzTKxx
ಇದನ್ನೂ ಓದಿ: ರಾಜೌರಿಯಲ್ಲಿ ಸೇನೆ ದಾಳಿಗೆ ಉಗ್ರರ ಪ್ರತಿ ದಾಳಿ: ಐವರು ಯೋಧರು ಹುತಾತ್ಮ, ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ
ನಿನ್ನೆ ನಡೆದ ಎನ್‌ಕೌಂಟರ್ ನಂತರ, ಭಾರತೀಯರಿಗೆ ಪಾಕಿಸ್ತಾನದ ವಿದೇಶಾಂಗ ಸಚಿವರ ಮೇಲೆ ಸಾಕಷ್ಟು ಕೋಪ ಮೂಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹೊರಹಾಕುತ್ತಿದ್ದಾರೆ. ಇದರ ನಡುವೆ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ವೀರ ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿದ ಎಎಪಿ ಸಂಸದ ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದು, ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ನಮ್ಮ ಸೈನಿಕರು ಹುತಾತ್ಮರಾಗುತ್ತಿದ್ದರೆ, ನಮ್ಮ ಪ್ರಧಾನಿ ಮೋದಿ ಅವರು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರನ್ನು ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಶಾಂಘೈ ಸಹಕಾರ ಸಂಸ್ಥೆ ಸಭೆಯಲ್ಲಿರುವ ಬಿಲಾವಲ್ ಭುಟ್ಟೊ : ಬಿಲಾವಲ್ ಭುಟ್ಟೊ ಅವರು ಗೋವಾದ ಪಣಜಿಯಲ್ಲಿ ನಡೆಯುತ್ತಿರುವ SCO (ಶಾಂಘೈ ಸಹಕಾರ ಸಂಸ್ಥೆ) ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲಿ ನಡೆದ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಕೂಡ ಉಪಸ್ಥಿತರಿದ್ದು, ಭಯೋತ್ಪಾದನೆ ಜಗತ್ತಿಗೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
-
जब हमारे जवान शहीद हो रहे हैं, ऐसे में केंद्र सरकार द्वारा पाकिस्तानी विदेश मंत्री की ख़ातिर करने से सभी देशवासियों को बेहद पीड़ा और रोष है
— Arvind Kejriwal (@ArvindKejriwal) May 5, 2023 " class="align-text-top noRightClick twitterSection" data="
वीर शहीदों को नमन। https://t.co/BVL0BzTKxx
">जब हमारे जवान शहीद हो रहे हैं, ऐसे में केंद्र सरकार द्वारा पाकिस्तानी विदेश मंत्री की ख़ातिर करने से सभी देशवासियों को बेहद पीड़ा और रोष है
— Arvind Kejriwal (@ArvindKejriwal) May 5, 2023
वीर शहीदों को नमन। https://t.co/BVL0BzTKxxजब हमारे जवान शहीद हो रहे हैं, ऐसे में केंद्र सरकार द्वारा पाकिस्तानी विदेश मंत्री की ख़ातिर करने से सभी देशवासियों को बेहद पीड़ा और रोष है
— Arvind Kejriwal (@ArvindKejriwal) May 5, 2023
वीर शहीदों को नमन। https://t.co/BVL0BzTKxx
ಇತ್ತ ಆಪ್ ಸರ್ಕಾರವು ಕೇಂದ್ರದ ವಿರುದ್ಧ ಕಿಡಿಕಾರಿದೆ. ಇನ್ನೊಂದೆಡೆ ವಿದೇಶಾಂಗ ಸಚಿವರು ಬಿಲಾವಲ್ ಭುಟ್ಟೊ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಕ್ಕೆ ಆಪ್ ಆಕ್ಷೇಪ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಪ್ರತ್ಯೇಕ ಎನ್‌ಕೌಂಟರ್: ಬಾರಾಮುಲ್ಲಾದಲ್ಲಿ ಓರ್ವ ಎಲ್ಇಟಿ ಉಗ್ರನ ಹತ್ಯೆ, ಮುಂದುವರೆದ ಕಾರ್ಯಾಚರಣೆ