ಪಾಟ್ನಾ(ಬಿಹಾರ): ಬಿಹಾರ ಪ್ರವಾಸದಲ್ಲಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವೈಫಲ್ಯಗಳಿಂದಲೇ ದೇಶವು ಪ್ರತಿಯೊಂದು ವಲಯದಲ್ಲೂ ನಷ್ಟ ಅನುಭವಿಸುತ್ತಿದೆ ಎಂದು ದೂರಿದ್ದಾರೆ.
ರಾಜಧಾನಿ ಪಾಟ್ನಾದಲ್ಲಿ ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ಸೇರಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಸಿಆರ್, ಮೋದಿ ಸರ್ಕಾರ ಅಧಿಕಾರ ಬರುವುದಕ್ಕಿಂತ ಮೊದಲು ರೂಪಾಯಿ ಮೌಲ್ಯ ಇಷ್ಟೊಂದು ಕುಸಿದಿರಲಿಲ್ಲ. ರೈತರು ಒಂದು ವರ್ಷದ ಕಾಲ ಯಾಕೆ ಪ್ರತಿಭಟನೆ ನಡೆಯಬೇಕಾಯಿತು?. ಇದಕ್ಕೆಲ್ಲ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ವಾಗ್ದಾಳಿ ನಡೆಸಿದರು.
ನಿತೀಶ್ ಹಿರಿಯ ರಾಜಕಾರಣಿ: ಇದೇ ವೇಳೆ ಎಲ್ಲ ಪ್ರತಿಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ನಿತೀಶ್ ಕುಮಾರ್ ಅವರು ದೇಶದ ಹಿರಿಯ ರಾಜಕಾರಣಿ. ತೆಲಂಗಾಣದಲ್ಲಿ ಅಭಿವೃದ್ಧಿಗೆ ಬಿಹಾರದಿಂದ ಬಂದಿರುವ ಸಾವಿರಾರು ಕೆಲಸಗಾರರ ಕೊಡುಗೆಯೂ ಇದೆ. ಅನೇಕ ಕ್ಷೇತ್ರದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವಿಶೇಷ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ನಿರಾಕರಿಸಿತ್ತು ಎಂದರು.
-
Bihar | Telangana CM K Chandrashekar Rao meets RJD chief Lalu Yadav and former Bihar CM Rabri Devi at Rabri Devi's residence in Patna pic.twitter.com/9O1jY2iLSt
— ANI (@ANI) August 31, 2022 " class="align-text-top noRightClick twitterSection" data="
">Bihar | Telangana CM K Chandrashekar Rao meets RJD chief Lalu Yadav and former Bihar CM Rabri Devi at Rabri Devi's residence in Patna pic.twitter.com/9O1jY2iLSt
— ANI (@ANI) August 31, 2022Bihar | Telangana CM K Chandrashekar Rao meets RJD chief Lalu Yadav and former Bihar CM Rabri Devi at Rabri Devi's residence in Patna pic.twitter.com/9O1jY2iLSt
— ANI (@ANI) August 31, 2022
ಲಾಲೂ ಭೇಟಿಯಾದ ಕೆಸಿಆರ್: ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರನ್ನೂ ಕೆಸಿಆರ್ ಭೇಟಿ ಮಾಡಿದರು. ಲಾಲೂ ಪತ್ನಿ, ಮಾಜಿ ಸಿಎಂ ರಾಬ್ಡಿ ದೇವಿ ಕೂಡ ಉಪಸ್ಥಿತರಿದ್ದರು.
ಇದನ್ನೂ ಓದಿ: ಬಿಹಾರದಲ್ಲಿ ನಿತೀಶ್ ಕುಮಾರ್ ಭೇಟಿ ಮಾಡಿದ ತೆಲಂಗಾಣ ಸಿಎಂ ಕೆಸಿಆರ್: ಹೊಸ ರಾಜಕೀಯ ಸಮೀಕರಣ