ವಾಶಿಂಗ್ಟನ್: ಬ್ರಿಟಿಷ್ ರಾಜಮನೆತನದಲ್ಲಿ ಹುಟ್ಟಿರುವ ಮೇಘನ್ ಮರ್ಕೆಲ್ ಹಾಗೂ ಪ್ರಿನ್ಸ್ ಹ್ಯಾರಿ ದಂಪತಿಯ ಮಗಳಾದ ಲಿಲಿಬೆಟ್ ಲಿಲಿ ಮಗುವನ್ನು ನೋಡಲು ತಾವು ಕಾತರವಾಗಿರುವುದಾಗಿ ರಾಜಕುಮಾರಿ ಕೇಟ್ ಮಿಡಲ್ಟನ್ ಹೇಳಿದ್ದಾರೆ. ಅಮೆರಿಕದ ಪ್ರಥಮ ಮಹಿಳೆ ಡಾ. ಜಿಲ್ ಬಿಡೆನ್ ಅವರೊಂದಿಗೆ ರಾಜಮನೆತನದ ಸದಸ್ಯರು ಶಾಲೆಯೊಂದಕ್ಕೆ ಭೇಟಿ ನೀಡಿದ ಸಮಯದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಕೇಟ್ ಮಿಡಲ್ಟನ್ ಮಾತನಾಡಿದರು.
"ಮಗು ಚೆನ್ನಾಗಿರಲಿ ಎಂದು ನಾನು ಆಶಿಸುತ್ತೇನೆ. ಈವರೆಗೂ ನಾನು ಆಕೆಯನ್ನು ಭೇಟಿಯಾಗಿಲ್ಲ. ಆಕೆಯನ್ನು ನೋಡಲು ಉತ್ಸುಕಳಾಗಿದ್ದೇನೆ. ಮಗುವಿನೊಂದಿಗೆ ವಿಡಿಯೋ ಚಾಟ್ ಮೂಲಕವೂ ಮಾತನಾಡಿಲ್ಲ." ಎಂದು ಕೇಟ್ ಹೇಳಿದ್ದಾರೆ.
ಬ್ರಿಟಿಷ್ ರಾಜಮನೆತನದಲ್ಲಿ ಸದ್ಯ ಎರಡನೇ ಉತ್ತರಾಧಿಕಾರಿ ಸ್ಥಾನದಲ್ಲಿರುವ ಕೇಟ್ ಮಿಡಲ್ಟನ್, ಮೇಘನ್ ಮರ್ಕೆಲ್ ಅವರು ಗರ್ಭಿಣಿಯಾಗಿದ್ದಾಗಿನ ಚಿತ್ರವೊಂದನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದು, "ಬೇಬಿ ಲಿಲಿ ಹುಟ್ಟಿರುವ ಸುದ್ದಿ ಕೇಳಿ ನಾವೆಲ್ಲ ಸಂತಸಗೊಂಡಿದ್ದೇವೆ. ಹ್ಯಾರಿ, ಮೇಘನ್ ಅವರಿಗೆ ಶುಭಾಶಯಗಳು." ಎಂದು ಬರೆದಿದ್ದಾರೆ.
ಮೇಘನ್ ಮತ್ತು ಮರ್ಕೆಲ್ ದಂಪತಿ ಕಳೆದ ವರ್ಷದಿಂದ ಕ್ಯಾಲಿಫೋರ್ನಿಯಾಕ್ಕೆ ತಮ್ಮ ವಾಸಸ್ಥಾನ ಬದಲಿಸಿದ್ದು, ಮಹಾರಾಣಿಯು ತನ್ನ 11ನೇ ಮರಿಮೊಮ್ಮಗುವನ್ನು ಯಾವಾಗ ಭೇಟಿಯಾಗಲಿದ್ದಾರೆ ಎಂಬುದರ ಬಗ್ಗೆ ಖಚಿತತೆ ಇಲ್ಲ.