ಮುಂಬೈ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ ಪ್ರಕರಣ ಕುರಿತು ಬಾಲಿವುಡ್ ನಟಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಯಾವಾಗಲೂ ಸುದ್ದಿಯಲ್ಲಿರುವ ಕಂಗನಾ ಇದೀಗ ಕುಂದ್ರಾ ಅರೆಸ್ಟ್ ಆಗಿರುವ ಕುರಿತು ಸ್ಟೋರಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡು, ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
'ಅದಕ್ಕೆ ನಾನು ಈ ಸಿನಿಮಾ ಉದ್ಯಮವನ್ನು ಚರಂಡಿ ಎಂದು ಕರೆಯುತ್ತೇನೆ. ಹೊಳೆಯುವುದೆಲ್ಲ ಬಂಗಾರವಲ್ಲ. ನನ್ನ ಮುಂದಿನ ನಿರ್ಮಾಣ ತಿಕು ವೆಡ್ಸ್ ಶೆರುದಲ್ಲಿ ಬಾಲಿವುಡ್ನ ಚಿತ್ರವನ್ನು ಅನಾವರಣ ಮಾಡುತ್ತೇನೆ. ಸೃಜನಾತ್ಮಕ ಉದ್ಯಮದಲ್ಲಿ ನಮಗೆ ಪ್ರಬಲವಾದ ಮೌಲ್ಯಯುತ ವ್ಯವಸ್ಥೆ ಹಾಗೂ ಆತ್ಮಸಾಕ್ಷಿಯ ಅಗತ್ಯವಿದೆ. ಜೊತೆಗೆ ಒಂದು ಚಾವಟಿಯೂ ಬೇಕಿದೆ' ಎಂದು ಬಾಲಿವುಡ್ ಕ್ವೀನ್ ಬರೆದುಕೊಂಡಿದ್ದಾರೆ.
ಇನ್ನು ಸಿನಿಮಾ ಇಂಡಸ್ಟ್ರೀಯನ್ನು ಗಟಾರ್ ಎಂದು ಕಂಗನಾ ಹೇಳಿರುವುದು ಮೊದಲೇನಲ್ಲ. ಈ ಮೊದಲು ಕೂಡ ಈ ಪದ ಬಳಸಿದ್ದರು.( 'ನೀವು ಹೇಗೆ ಹಣ ಸಂಪಾದಿಸುತ್ತೀರಿ'? ರಾಜ್ ಕುಂದ್ರಾ- ಕಪಿಲ್ ಶರ್ಮಾ ಶೋ ವಿಡಿಯೋ ವೈರಲ್)
ನೀಲಿ ಚಿತ್ರ ನಿರ್ಮಾಣ ಆರೋಪದ ಮೇಲೆ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. (ಅಶ್ಲೀಲ ಚಿತ್ರಗಳ ಪ್ರಸಾರ, ಪತಿ ರಾಜ್ ಕುಂದ್ರಾ ಬಂಧನ: ಅವಮಾನದಿಂದ ಈ ನಿರ್ಧಾರಕ್ಕೆ ಬಂದ್ರಾ ಶಿಲ್ಪಾ ಶೆಟ್ಟಿ!?)