ಕಲ್ಲಕುರಿಚಿ(ತಮಿಳುನಾಡು): ತಮಿಳುನಾಡಿನ ಕಲ್ಲಕುರಿಚಿ ವಸತಿ ಶಾಲೆಯಲ್ಲಿ ಜುಲೈ 13ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ವಿದ್ಯಾರ್ಥಿನಿಯ ಅಂತ್ಯಕ್ರಿಯೆ ಇಂದು ನಡೆಯಿತು. ಈ ವೇಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು. ಅಂತಿಮ ವಿದಾಯದ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಣ್ಣೀರು ಸುರಿಸಿದ ಕುಟುಂಬಸ್ಥರು: ಮಗಳ ಅಂತಿಮ ವಿಧಿ - ವಿಧಾನದಲ್ಲಿ ಭಾಗಿಯಾದ ಕುಟುಂಬಸ್ಥರು ಕಣ್ಣೀರು ಸುರಿಸಿದರು. ಜೊತೆಗೆ ಮಗಳ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಈ ವೇಳೆ, ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಅಂತ್ಯಕ್ರಿಯೆಯಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.
ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ತಮಿಳುನಾಡಿನಲ್ಲಿ ಭಾರಿ ಹಿಂಸಾಚಾರ, ವಿಧ್ವಂಸಕ ಕೃತ್ಯಕ್ಕೆ ಕಾರಣವಾಗಿತ್ತು. ಜುಲೈ 13ರಂದು ವಸತಿ ನಿಲಯದ ಕಟ್ಟಡದ ಮೇಲಿಂದ ಹಾರಿ ಮೃತಪಟ್ಟ 12ನೇ ತರಗತಿ ವಿದ್ಯಾರ್ಥಿನಿಯ ಮೃತದೇಹವನ್ನು ಪೋಷಕರಿಗೆ ನಿನ್ನೆ ಹಸ್ತಾಂತರಿಸಲಾಗಿತ್ತು.
ಇದರ ಬೆನ್ನಲ್ಲೇ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ತರಲಾಗಿತ್ತು.ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆದಿತ್ತು. ಇದು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಶಾಲೆಯ ಇಬ್ಬರು ಶಿಕ್ಷಕರ ಬಂಧನ ಮಾಡಲಾಗಿತ್ತು. ಜೊತೆಗೆ ಹಿಂಸಾಚಾರಕ್ಕೆ ಕಾರಣವಾಗಿದ್ದ ಸುಮಾರು 300ಕ್ಕೂ ಅಧಿಕ ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
-
#WATCH | Tamil Nadu: Family of class XII, Kallakurichi girl and locals bereave her loss as her body reaches her native village in Cuddalore district for last rites days after she passed away pic.twitter.com/5yNb2LuIVw
— ANI (@ANI) July 23, 2022 " class="align-text-top noRightClick twitterSection" data="
">#WATCH | Tamil Nadu: Family of class XII, Kallakurichi girl and locals bereave her loss as her body reaches her native village in Cuddalore district for last rites days after she passed away pic.twitter.com/5yNb2LuIVw
— ANI (@ANI) July 23, 2022#WATCH | Tamil Nadu: Family of class XII, Kallakurichi girl and locals bereave her loss as her body reaches her native village in Cuddalore district for last rites days after she passed away pic.twitter.com/5yNb2LuIVw
— ANI (@ANI) July 23, 2022
ಇದನ್ನೂ ಓದಿರಿ: Kallakurichi Violence: ಪೊಲೀಸ್ ಬಿಗಿ ಭದ್ರತೆಯಲ್ಲಿ ವಿದ್ಯಾರ್ಥಿನಿ ಮೃತದೇಹ ಪಾಲಕರಿಗೆ ಹಸ್ತಾಂತರ
ಮಗಳ ಸಾವಿಗೆ ಅನುಮಾನ ವ್ಯಕ್ತಪಡಿಸಿದ್ದ ಪೋಷಕರು ಆಕೆಯ ಮೃತದೇಹ ಪಡೆದುಕೊಳ್ಳಲು ಹಿಂದೇಟು ಹಾಕಿದ್ದರು. ಹೀಗಾಗಿ, ಮೃತದೇಹವನ್ನ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು ಮತ್ತು ನಾವು ಆಯ್ಕೆ ಮಾಡುವ ವೈದ್ಯರನ್ನ ಇದಕ್ಕೆ ನಿಯೋಜಿಸಬೇಕು ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಈ ಅರ್ಜಿ ಸುಪ್ರೀಂಕೋರ್ಟ್ನಿಂದ ವಜಾಗೊಂಡಿತ್ತು.