ETV Bharat / bharat

ಕಾಳಿಚರಣ್​ ಸಂತನ ರೂಪದಲ್ಲಿರುವ ರಾಕ್ಷಸ ಎಂದ ಸಿಎಂ ಭೂಪೇಶ್​​ ಬಘೇಲ್​: ಎರಡು ರಾಜ್ಯಗಳ ನಡುವೆ ಜಟಾಪಟಿ

ಕಾಲಿಚರಣ್​ ಬಂಧನದ ಬಗ್ಗೆ ಈಟಿವಿ ಭಾರತ್​ ಜೊತೆ ಮಾತನಾಡುವ ವೇಳೆ ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಘೇಲ್​, ಕಾಳಿಚರಣ್​ ಹಿಂದೂ ಸಂತನಲ್ಲ, ಅವನೊಬ್ಬ 'ಸಂತನ ರೂಪದಲ್ಲಿರುವ ರಾಕ್ಷಸ' ಎಂದು ಕಟುವಾಗಿ ಟೀಕಿಸಿದ್ದಾರೆ.

Mahatma Gandhi
ಛತ್ತೀಸ್​ಗಢ ಸಿಎಂ
author img

By

Published : Dec 30, 2021, 6:17 PM IST

Updated : Dec 30, 2021, 9:10 PM IST

ಛತ್ತರ್‌ಪುರ (ಮಧ್ಯಪ್ರದೇಶ): ರಾಷ್ಟ್ರಪಿತ ಮಹಾತ್ಮಗಾಂಧಿ ವಿರುದ್ಧ ಹೇಳಿಕೆ ನೀಡಿ ಜೈಲುಪಾಲಾಗಿರುವ ಧಾರ್ಮಿಕ ಗುರು ಕಾಳಿಚರಣ್ ಅವ​ರನ್ನು ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಘೇಲ್​ 'ರಾಕ್ಷಸ' ಎಂದು ಟೀಕಿಸಿದ್ದಾರೆ.

ಕಾಲಿಚರಣ್​ ಬಂಧನದ ಬಗ್ಗೆ ಈಟಿವಿ ಭಾರತ್​ ಜೊತೆ ಮಾತನಾಡುವ ವೇಳೆ ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಘೇಲ್​, ಕಾಳಿಚರಣ್​ ಹಿಂದೂ ಸಂತನಲ್ಲ, ಅವನೊಬ್ಬ 'ಸಂತನ ರೂಪದಲ್ಲಿರುವ ರಾಕ್ಷಸ' ಎಂದು ಕಟುವಾಗಿ ಟೀಕಿಸಿದ್ದಾರೆ.

ಇದಲ್ಲದೇ, ಸಂತರು ಜನರಿಗೆ ಉತ್ತಮ ಬೋಧನೆ, ಧರ್ಮದ ಸಾರದ ಬಗ್ಗೆ ತಿಳಿಸುತ್ತಾರೆ. ಆದರೆ, ಸಂತನ ರೂಪದಲ್ಲಿರುವ ಕಾಳಿಚರಣ್​​ ಅಹಿಂಸೆ, ಶಾಂತಿ, ಪ್ರೀತಿ ಮತ್ತು ಸೌಹಾರ್ಧತೆಯನ್ನು ಸಾರಿದ ರಾಷ್ಟ್ರಪಿತ ಗಾಂಧೀಜಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೇ ನಾಥೂರಾಮ್​ ಗೋಡ್ಸೆಯನ್ನು ಹೊಗಳಿಸಿದ್ದರು. ಹಾಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಮಧ್ಯಪ್ರದೇಶದ ಬಿಜೆಪಿಗರು ಕಾಳಿಚರಣ್​ ಬಂಧನದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಗಾಂಧಿಯನ್ನು ಟೀಕಿಸಿದಾಗ ಖಂಡಿಸದ ಇವರು, ಕಾಳಿಚರಣ್​ ಬಂಧನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರಾ ಅಥವಾ ಬೆಂಬಲಿಸುತ್ತಿದ್ದಾರಾ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಗಾಂಧೀಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಮಧ್ಯಪ್ರದೇಶದ ಖುಜುರಾಹೋ ಹೋಟೆಲ್​ನಲ್ಲಿ ತಲೆಮರೆಸಿಕೊಂಡಿದ್ದ ಕಾಳಿಚರಣ್​ ಅವರನ್ನು ಛತ್ತೀಸ್​ಗಢ ಪೊಲೀಸರು ದಾಳಿ ಮಾಡಿ ಬಂಧಿಸಿದ್ದರು.

ಎರಡು ರಾಜ್ಯಗಳ ನಡುವೆ ತಿಕ್ಕಾಟ

ಈ ವೇಳೆ, ಅಂತಾರಾಜ್ಯ ನಿಯಮಗಳನ್ನು ಛತ್ತೀಸ್​ಗಢ ಉಲ್ಲಂಘಿಸಿದೆ. ಕಾಳಿಚರಣ್​ ಬಂಧನಕ್ಕೂ ಮುನ್ನ ಮಧ್ಯಪ್ರದೇಶ ಪೊಲೀಸರಿಗೆ ನೋಟಿಸ್​ ನೀಡಬೇಕಿತ್ತು. ಪ್ರೋಟೋಕಾಲ್​ಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಮಧ್ಯಪ್ರದೇಶ ಪೊಲೀಸರ ಆರೋಪವಾಗಿದೆ. ಇದು ಉಭಯ ರಾಜ್ಯಗಳ ತಿಕ್ಕಾಟಕ್ಕೆ ಕಾರಣವಾಗಿದೆ.

ಬಂಧಿತ ಕಾಳಿಚರಣ್​​​ರನ್ನು ಕೋರ್ಟ್​ಗೆ ಹಾಜರು ಪಡಿಸಿದ ಪೊಲೀಸರು

ಇದಕ್ಕೆ ಸ್ಪಷ್ಟನೆ ನೀಡಿರುವ ಛತ್ತೀಸ್​ಗಢ ಪೊಲೀಸರು ಕಾಳಿಚರಣ್ ಬಂಧನಕ್ಕೂ ಮುನ್ನ ಅವರ ಕುಟುಂಬಸ್ಥರು ಮತ್ತು ವಕೀಲರಿಗೆ ಮಾಹಿತಿ ನೀಡಲಾಗಿತ್ತು ಎಂದು ಹೇಳಿದ್ದಾರೆ. ಅಲ್ಲದೇ ಕಾಳಿಚರಣ್​ ಅವರನ್ನು ಛತ್ತರ್​ಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಡಿಸೆಂಬರ್​​ 26ರರಂದು ನಡೆದ ಧರ್ಮ ಸಂಸದ್​​ನಲ್ಲಿ ಕಾಲಿಚರಣ್​​ ಮಹಾತ್ಮಗಾಂಧಿ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ರಾಷ್ಟ್ರ ದೋಹದ ಆರೋಪ ಹೋರಿಸಿ, ಸೆಕ್ಷನ್​ 153 ಎ(1), 153 ಬಿ(1) (ಎ), ಸೆಕ್ಷನ್​​​ 295 ಎ ಹಾಗೂ ಸೆಕ್ಷನ್​ 505(1) (ಬಿ) ಅನ್ವಯ ತಿಕ್ರಪಾರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಎನ್​ಸಿಪಿ ಬೆಂಬಲ ಕೇಳಿದ್ದ ಪ್ರಧಾನಿ ಮೋದಿ.. ಸಂಚಲನ ಸೃಷ್ಟಿಸಿದ ಶರದ್​ ಪವಾರ್​ ಹೇಳಿಕೆ

Last Updated : Dec 30, 2021, 9:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.