ನವದೆಹಲಿ: ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಜಿಯೋ ಮೊಬೈಲ್ ನೆಟ್ವರ್ಕ್ ಡೌನ್ ಆಗಿದೆ ಎಂದು ಕೆಲವು ಗ್ರಾಹಕರು ದೂರು ನೀಡಿದ್ದು, ಈ ಸಮಸ್ಯೆ ಕೆಲವು ಬಳಕೆದಾರರಲ್ಲಿ ಮಾತ್ರ ಕಾಣಿಸಿಕೊಂಡಿದೆಯೇ ಅಥವಾ ದೇಶದ ಹಲವಡೆ ಕಾಣಿಸಿಕೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಹಲವಾರು ಮಂದಿ ಜಿಯೋ ಬಳಕೆದಾರರು ಟ್ವಿಟರ್ನಲ್ಲಿ ನೆಟ್ವರ್ಕ್ ಡೌನ್ ಆಗಿದೆ ಎಂದು ದೂರುಗಳನ್ನು ನೀಡಿದ್ದಾರೆ.#jioddown ಎಂಬುದು ಟ್ವಿಟರ್ ಟ್ರೆಂಡಿಂಗ್ ಕೂಡಾ ಆಗಿದ್ದು, ಡೌನ್ ಡಿಟೆಕ್ಟರ್ (Downdetector)ನಲ್ಲಿ ಸುಮಾರು 4000 ಮಂದಿ ಬೆಳಗ್ಗೆಯಿಂದ ಜಿಯೋ ನೆಟ್ವರ್ಕ್ ಸಮಸ್ಯೆ ಇದೆ ಎಂದು ದೂರು ನೀಡಿದ್ದಾರೆ.
-
We understand your concern. You may face intermittent problem in using internet services and making or receiving calls/SMS. This is temporary & our teams are working on the same to resolve it as soon as possible. Thank you for your patience - Akshay
— JioCare (@JioCare) October 6, 2021 " class="align-text-top noRightClick twitterSection" data="
">We understand your concern. You may face intermittent problem in using internet services and making or receiving calls/SMS. This is temporary & our teams are working on the same to resolve it as soon as possible. Thank you for your patience - Akshay
— JioCare (@JioCare) October 6, 2021We understand your concern. You may face intermittent problem in using internet services and making or receiving calls/SMS. This is temporary & our teams are working on the same to resolve it as soon as possible. Thank you for your patience - Akshay
— JioCare (@JioCare) October 6, 2021
ರಿಲಯನ್ಸ್ ಜಿಯೋದ ಅಧಿಕೃತ ಗ್ರಾಹಕ ಸೇವಾ ಟ್ವಿಟರ್ ಖಾತೆಯಾದ @JioCare ಖಾತೆಗೆ ಸಾಕಷ್ಟು ಮಂದಿ ದೂರುಗಳನ್ನು ನೀಡಿದ್ದಾರೆ. ದೇಶದ ವಿವಿಧ ಕಡೆಗಳಿಂದ ಈ ದೂರುಗಳು ಬಂದಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಿಯೋ ನಿಮಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದಿದೆ.
ಇದರ ಜೊತೆಗೆ ಇಂಟರ್ನೆಟ್ ಸೇವೆಗಳನ್ನು ಬಳಸುವಾಗ ಮತ್ತು ಕರೆ/ಎಸ್‌ಎಂಎಸ್ ಮಾಡುವಾಗ ಇಂತಹ ಸಮಸ್ಯೆ ಎದುರಾಗಬಹುದು. ಈ ಸಮಸ್ಯೆ ತಾತ್ಕಾಲಿಕವಾಗಿದ್ದು, ಆದಷ್ಟು ಬೇಗ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಜಿಯೋ ಹೇಳಿದೆ.
ಮಾರ್ಕ್ ಜುಕರ್ ಬರ್ಗ್ ಒಡೆತನದ ಫೇಸ್ಬುಕ್ , ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ,ಮೆಸೆಂಜರ್ ಅಪ್ಲಿಕೇಶನ್ಗಳು ಸ್ಥಗಿತವಾಗಿದ್ದ ಬೆನ್ನಲ್ಲೇ ಈ ರೀತಿ ಜಿಯೋ ನೆಟ್ವರ್ಕ್ ಸಮಸ್ಯೆ ಉಂಟಾಗಿರುವುದು ಗ್ರಾಹಕರಲ್ಲಿ ಗೊಂದಲ ಮೂಡಿಸಿದೆ.
ಇದನ್ನೂ ಓದಿ: ಹಳೆಯ ಪರೀಕ್ಷಾ ಮಾದರಿಯಲ್ಲೇ ಈ ವರ್ಷದ NEET-SS ಪರೀಕ್ಷೆ: ಸುಪ್ರೀಂಗೆ ಕೇಂದ್ರ ಮಾಹಿತಿ