ETV Bharat / bharat

13ರ ಬಾಲಕಿಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿ, ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ಮಾವ - ಅಶ್ಲೀಲ ವಿಡಿಯೋ ಬಿಡುಗಡೆ

ಗುಜರಾತ್​​ನಲ್ಲಿ ಕೆಲಸ ಕಳೆದುಕೊಂಡು ಬಾಲಕಿ ಮೇಲೆ ಸಹೋದರ ಮಾವನೊಬ್ಬ ಅತ್ಯಾಚಾರ ಎಸಗಿದ್ದಲ್ಲದೇ, ಆಕೆಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿದ್ದ ಕೃತ್ಯ ಬಯಲಾಗಿದೆ.

jharkhand-girl-lost-job-in-gujarat-uncle-engaged-her-in-flesh-trade
13ರ ಬಾಲಕಿಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ಮಾವ
author img

By

Published : Sep 13, 2022, 10:10 PM IST

ಸಿಂಗ್‌ಭೂಮ್ (ಜಾರ್ಖಂಡ್): ಕೆಲಸಕ್ಕೆಂದು 13 ವರ್ಷದ ಬಾಲಕಿಯನ್ನು ಗುಜರಾತ್‌ಗೆ ಕರೆದೊಯ್ದ ಮಾವನೊಬ್ಬ ಅಲ್ಲಿ ಬಾಲಕಿ ಕೆಲಸ ಕಳೆದುಕೊಂಡ ನಂತರ ವೇಶ್ಯಾವಾಟಿಕೆ ದಂಧೆ ದೂಡಿದ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ, ಅಪ್ರಾಪ್ತ ಬಾಲಕಿಯ ಅಶ್ಲೀಲ ವಿಡಿಯೋ ಮಾಡಿ ವೈರಲ್ ಮಾಡಲಾಗಿದೆ.

ಜಾರ್ಖಂಡ್​ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಜಗನ್ನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಡಕಟ್ಟು ಜನಾಂಗದ ಅಪ್ರಾಪ್ತ ಬಾಲಕಿಯನ್ನು ತಾಯಿಯ ಸಹೋದರ ಇದೇ ಮೇ ತಿಂಗಳಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡಲು ಗುಜರಾತ್‌ಗೆ ಕರೆದುಕೊಂಡು ಹೋಗಿದ್ದ.

ಆದರೆ, ಆ ಕಂಪನಿಯಲ್ಲಿ ಒಂದು ತಿಂಗಳೇ ಮುಚ್ಚಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಬಾಲಕಿ ತನ್ನನ್ನು ಮನೆಗೆ ಕರೆದೊಯ್ಯುವಂತೆ ತನ್ನ ಮಾವನಿಗೆ ಕೇಳಿದ್ದಾಳೆ.

ಇದನ್ನೂ ಓದಿ: ಚುನಾವಣೆಗೆ ಟಿಕೆಟ್​ ಕೊಡಿಸುವ ಆಮಿಷ.. ಮಹಿಳೆ ಮೇಲೆ ಅತ್ಯಾಚಾರ ಆರೋಪ: ಎಂಎನ್‌ಎಸ್ ಮುಖಂಡನ ಬಂಧನ

ಈ ವೇಳೆ ಬೇರೆ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಗುಜರಾತ್​ನಲ್ಲೇ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದಾದ ನಂತರ ವೇಶ್ಯಾವಾಟಿಕೆ ದಂಧೆಗೆ ದೂಡಿದ್ದಾನೆ. ಒಂದು ತಿಂಗಳ ಕಾಲ ನಿರಂತರವಾಗಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿದ್ದಾನೆ. ಆದರೆ, ಸಂತ್ರಸ್ತ ಬಾಲಕಿ ತ್ರೀವವಾಗಿ ನೊಂದು ಮನೆಗೆ ಕರೆದುಕೊಂಡು ಹೋಗುವಂತೆ ಪಟ್ಟು ಹಿಡಿದ ಕಾರಣ ನಾಲ್ಕು ದಿನಗಳ ಹಿಂದೆ ಜಗನ್ನಾಥಪುರಕ್ಕೆ ಕರೆ ತಂದಿದ್ದರು.

ಇದನ್ನೂ ಓದಿ: ಅಮ್ಮ ಥಳಿಸುತ್ತಾರೆ.. ಊಟ ಕೇಳಿದರೂ ಹಾಕಲ್ಲ: ತಾಯಿ ವಿರುದ್ಧ ದೂರಲು ಠಾಣೆಗೆ ಬಂದ ಪುಟ್ಟ ಬಾಲಕ

ಆದರೆ, ಊರಿಗೆ ಕರೆತಂದ ಬಳಿಕ ಮಾವ ಮತ್ತು ಆತನ ಹೆಂಡತಿ ಸೇರಿಕೊಂಡು ಬಾಲಕಿಯ ಸಣ್ಣಪುಟ್ಟ ಆಕ್ಷೇಪಾರ್ಹ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಆಗ ಬಾಲಕಿಯ ಕುಟುಂಬ ಸದಸ್ಯರಿಗೂ ಆ ವಿಡಿಯೋಗಳು ತಲುಪಿವೆ.

ನಂತರ ವಿಷಯ ಇಡೀ ಗ್ರಾಮಕ್ಕೆ ಹರಡಿದ್ದು, ಆರೋಪಿ ದಂಪತಿಯನ್ನು ಹಿಡಿದು ಮನೆಯಲ್ಲಿ ಕೂಗಿ ಹಾಕಿದ್ದಾರೆ. ಅಲ್ಲದೇ, ಜನರೇ ಪೊಲೀಸರಿಗೆ ಒಪ್ಪಿಸಿ ಸಂತ್ರಸ್ತ ಬಾಲಕಿಗೆ ನ್ಯಾಯ ಕೊಡಿಸಬೇಕು ಮತ್ತು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಘಟನೆ ಬಗ್ಗೆ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸಾಗರದಲ್ಲಿ ಅಂತಾರಾಜ್ಯ ಸೆಕ್ಸ್ ರಾಕೆಟ್​​ ದಂಧೆ: ಆರು ಯುವತಿಯರು, ಇಬ್ಬರು ಯುವಕರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.