ETV Bharat / bharat

ಮಾಡದ ತಪ್ಪಿಗೆ ಜೈಲು ಶಿಕ್ಷೆ: 20 ವರ್ಷದ ನಂತರ ಬಿಡುಗಡೆ! - ಮಾಡದ ತಪ್ಪಿಗೆ ವ್ಯಕ್ತಿಯೊಬ್ಬ 20 ವರ್ಷಗಳ ಕಾಲ ಜೈಲುವಾಸ

ತಾನು ಮಾಡದ ತಪ್ಪಿಗೆ ವ್ಯಕ್ತಿಯೊಬ್ಬ 20 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬಸ್ತಿಯಲ್ಲಿ ಈ ಘಟನೆ ನಡೆದಿದೆ.

Jailed for 20 years for keeping heroin, freed after it turns out to be powder

author img

By

Published : May 22, 2023, 6:58 PM IST

ಬಸ್ತಿ (ಉತ್ತರ ಪ್ರದೇಶ) : ನ್ಯಾಯದಾನ ವಿಳಂಬದ ಪ್ರಕರಣವೊಂದರಲ್ಲಿ ನ್ಯಾಯದಾನ ಎಷ್ಟು ವಿಳಂಬವಾಗಿದೆ ಎಂದರೆ ನ್ಯಾಯ ಸಿಕ್ಕೇ ಇಲ್ಲ ಎಂದು ಹೇಳಬಹುದು. ಮಾಡದ ತಪ್ಪಿಗೆ ವ್ಯಕ್ತಿಯೊಬ್ಬ 20 ವರ್ಷ ಜೈಲುವಾಸ ಅನುಭವಿಸಿದ ಕತೆ ಇದು. ಅಬ್ದುಲ್ಲಾ ಅಯೂಬ್ ಎಂಬಾತ ತಾನು ಮಾಡದ ತಪ್ಪಿಗೆ 20 ವರ್ಷ ಜೈಲಿನಲ್ಲಿದ್ದು, ಈಗ ಬಿಡುಗಡೆಯಾಗಿದ್ದಾನೆ. ಆತ ಮಾಡಿದ ಒಂದೇ ಒಂದು ತಪ್ಪು ಎಂದರೆ- ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಖುರ್ಷೀದ್ ಹೆಸರಿನ ಪೊಲೀಸ್ ಕಾನ್​ಸ್ಟೆಬಲ್ ಒಬ್ಬನನ್ನು ಮನೆ ಖಾಲಿ ಮಾಡಿಸಿದ್ದು.

ಈ ಕತೆಯ ಆರಂಭ ಮಾರ್ಚ್ 2003 ರಲ್ಲಾಗುತ್ತದೆ. ಆಗ ಅಬ್ದುಲ್ಲಾ ಅಯೂಬ್ ತನ್ನ ಮನೆಯಲ್ಲಿ ಬಾಡಿಗೆಗಿದ್ದ ಪೊಲಿಸ್ ಕಾನ್​ಸ್ಟೆಬಲ್ ಖುರ್ಷಿದ್​ನನ್ನು ಮನೆ ಖಾಲಿ ಮಾಡಿಸಿದ್ದ. ಅದಾಗಿ ಕೆಲವೇ ದಿನಗಳಲ್ಲಿ 1 ಕೋಟಿ ರೂಪಾಯಿ ಬೆಲೆಬಾಳುವ 25 ಗ್ರಾಮ್ ಹೆರಾಯಿನ್ ಇಟ್ಟುಕೊಂಡ ಆರೋಪದ ಮೇಲೆ ಆತನನ್ನು ಬಂಧಿಸಲಾಯಿತು. ದಿನಗಳು, ತಿಂಗಳುಗಳು ಹಾಗೂ ವರ್ಷಗಳು ಕಳೆದರೂ ಅಯೂಬ್ ಒಂದೇ ಮಾತು ಹೇಳುತ್ತಿದ್ದ, ತಾನು ಯಾವುದೇ ತಪ್ಪು ಮಾಡಿಲ್ಲ ಅಂತ. ತನ್ನ ವಿರುದ್ಧ ಸಂಚು ಮಾಡಲಾಗಿದೆ ಎಂದು ಆತ ಹೇಳುತ್ತಲೇ ಇದ್ದ. ಆದರೂ ಆತ ಜೈಲಿನಲ್ಲೇ ಇರಬೇಕಾಯಿತು.

ಅಯೂಬ್​ನ ವಕೀಲ ಪ್ರೇಮ್ ಪ್ರಕಾಶ್ ಶ್ರೀವಾಸ್ತವ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ಹೆರಾಯಿನ್​ ಎಂದು ವಸ್ತುವೊಂದನ್ನು ಹಾಜರುಪಡಿಸಿ ಸುಳ್ಳು ಪ್ರಕರಣದಲ್ಲಿ ಕಕ್ಷಿದಾರನನ್ನು ಬಂಧಿಸಲಾಗಿತ್ತು. ಖುರ್ಷಿದ್​ನನ್ನು ಮನೆ ಖಾಲಿ ಮಾಡಿಸಿದ ನಂತರ ಇದೆಲ್ಲ ಆಗಿತ್ತು. ಖುರ್ಷಿದ್ ಈತ ಅನಿಲ್ ಸಿಂಗ್, ಎಸ್​ಓ ಪುರಾನಿ ಬಸ್ತಿ ಲಾಲ್ಜಿ ಯಾದವ್ ಮತ್ತು ಎಸ್‌ಐ ನರ್ಮದೇಶ್ವರ್ ಶುಕ್ಲಾ ಅವರೊಂದಿಗೆ ತನ್ನ ಹಿಂದಿನ ಮನೆ ಮಾಲೀಕರನ್ನು ಬಲೆಗೆ ಬೀಳಿಸಲು ಸಂಚು ರೂಪಿಸಿದ್ದ. ಈ ಪೊಲೀಸ್​​​ ಅಧಿಕಾರಿಗಳು ಅಯೂಬ್‌ನ ಮೇಲೆ ನಕಲಿ ಹೆರಾಯಿನ್ ಪ್ರಕರಣದ ಸಂಚು ಮಾಡಿದ್ದು ಅಲ್ಲದೇ, ಅವನನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲು ಫೋರೆನ್ಸಿಕ್ ಪುರಾವೆಗಳನ್ನು ಸಹ ತಿರುಚಿದ್ದರು.

"ಇದೀಗ 20 ವರ್ಷಗಳ ನಂತರ ಅಯೂಬ್ ಜೈಲಿನಿಂದ ಹೊರ ಬಂದಿದ್ದಾರೆ. 20 ವರ್ಷಗಳ ಹಿಂದೆ ಆತನ ಮನೆಯಲ್ಲಿ ಸಿಕ್ಕಿದ್ದು ಹೆರಾಯಿನ್ ಅಲ್ಲ, ಬದಲಿಗೆ ಅದು ಮಾರ್ಕೆಟ್​ನಲ್ಲಿ ಸಿಗುವ 20 ರೂಪಾಯಿಯ ಮಾಮೂಲಿ ಪೌಡರ್​ ಎಂಬುದು ನ್ಯಾಯಾಲಯದಲ್ಲಿ ಸಾಬೀತಾದ ನಂತರ ನ್ಯಾಯಾಲಯ ಆತನನ್ನು ಬಿಡುಗಡೆ ಮಾಡಿದೆ." ಎಂದು ವಕೀಲರು ಹೇಳಿದರು. ಶ್ರೀವಾಸ್ತವ್ ಪ್ರಕಾರ, ವಿಚಾರಣೆ ಪ್ರಾರಂಭವಾದಾಗ ಬಸ್ತಿಯಲ್ಲಿನ ವಿಧಿವಿಜ್ಞಾನ ಪ್ರಯೋಗಾಲಯವು ಪುಡಿಯಲ್ಲಿ ಹೆರಾಯಿನ್ ಇರುವಿಕೆಯನ್ನು ದೃಢಪಡಿಸಿತ್ತು. ಆದರೆ, ನ್ಯಾಯಾಲಯವು ಈ ಹೆರಾಯಿನ್ ಮಾದರಿಯನ್ನು ಲಕ್ನೋದ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅದು ಹೆರಾಯಿನ್ ಅಲ್ಲ ಎಂದು ತಿಳಿದು ಬಂದಿದೆ. ನಂತರ ಮಾದರಿಯನ್ನು ದೆಹಲಿಯ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು, ಅಲ್ಲಿ ಪೊಲೀಸರು ಸಾಕ್ಷ್ಯವನ್ನು ತಿರುಚಿದರು.

ನಂತರ, ನ್ಯಾಯಾಲಯವು ಲಕ್ನೋದಿಂದ ತಜ್ಞ ವಿಜ್ಞಾನಿಗಳನ್ನು ಕರೆಸಿದಾಗ, ಪುಡಿಯು ಕಪ್ಪು ವರ್ಣಕ್ಕೆ ತಿರುಗಿತ್ತು ಎಂಬುದನ್ನು ಅವರು ದೃಢಪಡಿಸಿದರು. ಆದರೆ ಹೆರಾಯಿನ್ ಯಾವುದೇ ಹವಾಮಾನದಲ್ಲಿಯೂ ತನ್ನ ಬಣ್ಣವನ್ನು ಎಂದಿಗೂ ಬದಲಾಯಿಸುವುದಿಲ್ಲ ಮತ್ತು ಬಿಳಿಯಾಗಿಯೇ ಇರುತ್ತದೆ ಎಂದು ತಜ್ಞರು ದೃಢಪಡಿಸಿದರು. ನಂತರ ನ್ಯಾಯಮೂರ್ತಿ ವಿಜಯ್ ಕುಮಾರ್ ಕಟಿಯಾರ್ ಅವರು ತಪ್ಪಿತಸ್ಥ ಆರೋಪಿಯನ್ನು ಖುಲಾಸೆಗೊಳಿಸಿದರು. ಪೊಲೀಸರು ಇಡೀ ವಿಷಯವನ್ನು ತಪ್ಪಾಗಿ ಬಿಂಬಿಸಿದ್ದಾರೆ ಮತ್ತು ಪ್ರಾಸಿಕ್ಯೂಷನ್ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆದಾಗ್ಯೂ ಸದ್ಯ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮಕ್ಕೆ ನ್ಯಾಯಾಲಯ ಮುಂದಾಗಿಲ್ಲ.

ಇದನ್ನೂ ಓದಿ : ಗರ್ಲ್​ಫ್ರೆಂಡ್​ ಲಾರೆನ್​ರೊಂದಿಗೆ ಕಾಣಿಸಿಕೊಂಡ ಅಮೆಜಾನ್ ಸಂಸ್ಥಾಪಕ ಬೆಜೋಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.