ಶ್ರೀನಗರ: ಜಮ್ಮು- ಕಾಶ್ಮೀರದ ಪೂಂಚ್ನಲ್ಲಿರುವ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಒಳನುಸುಳುವಿಕೆ ತಡೆಗಟ್ಟಲು ಕೆಲ ಸಾಧನ ಲ್ಯಾಂಡ್‌ಮೈನ್‌ಗಳನ್ನು ಬಳಸಲಾಗುತ್ತದೆ. ಆದರೆ ಆ ಸಾಧನಗಳಿಗೆ ಭಯೋತ್ಪಾದಕರು ಬೆಂಕಿ ಹಚ್ಚಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಪೂಂಚ್ ಸೆಕ್ಟರ್ನ ಇಲಾಕೊ ಬಳಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಕಿ.ಮೀವರೆಗೆ ಬೆಂಕಿಯ ಕೆನ್ನಾಲಿಗೆ ಮತ್ತು ಹೊಗೆ ಕಾಣಿಸಿಕೊಂಡಿದೆ.
ಇದನ್ನು ಓದಿ: ನಿರ್ಮಲಾ ಬಜೆಟ್ನಲ್ಲಿ ಯಾವ ವಲಯಕ್ಕೆ ಎಷ್ಟು ಪಾಲು, ಬಂದದೆಷ್ಟು- ಖರ್ಚಾಗಿದೆಷ್ಟು? ಇಲ್ಲಿದೆ ಡಿಟೆಲ್ಸ್
ಅನೇಕ ಬಾರಿ ಭಯೋತ್ಪಾದಕರು ಅಥವಾ ಪಾಕಿಸ್ತಾನಿ ಸೈನಿಕರು ದೇಶದ ಗಡಿಯೊಳಗೆ ಒಳನುಳುಸುವ ಉದ್ದೇಶದಿಂದ ಲ್ಯಾಂಡ್‌ಮೈನ್‌ಗಳನ್ನು ನಾಶಮಾಡಿದ್ದರು. ಆದರೆ, ಭಾರತೀಯ ಸೈನಿಕರ ಕಣ್ಗಾವಲಿನಿಂದ ಉಗ್ರರ ಒಳನುಸುಳಿವಿಕೆ ತಡೆಯಲಾಗಿದೆ.