ETV Bharat / bharat

ಚಂದ್ರನಲ್ಲಿಗೆ ಮಾನವರನ್ನ ಕಳುಹಿಸುವ ಪ್ಲಾನ್​ ಇದೆ : ಚಂದ್ರಯಾನ 3 ನಿರ್ದೇಶಕ ಡಾ ವೀರಮುತ್ತುವೇಲ್​ - ಚಂದ್ರಯಾನ

ತಾಂಬರಂನ ಸಾಯಿರಾಮ್​ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಡಾ ವೀರಮುತ್ತುವೇಲ್ ಅವರನ್ನು ಸನ್ಮಾನಿಸಲಾಯಿತು.

Chandrayaan 3 project director Dr Veeramuthuvel
ಚಂದ್ರಯಾನ 3 ನಿರ್ದೇಶಕ ಡಾ. ವೀರಮುತ್ತುವೇಲ್​
author img

By ETV Bharat Karnataka Team

Published : Oct 5, 2023, 7:53 AM IST

ಚೆನ್ನೈ( ತಮಿಳುನಾಡು): ಚಂದ್ರಯಾನ ಕೇವಲ ಚಂದ್ರನ ಮೇಲೆ ನೀರು ಇರುವುದನ್ನು ಪತ್ತೆ ಹಚ್ಚಲು ಮಾತ್ರ ಕಳುಹಿಸಲಾಗಿಲ್ಲ. ಜೊತೆಗೆ ಭವಿಷ್ಯದಲ್ಲಿ ಮಾನವರನ್ನು ಚಂದ್ರನಲ್ಲಿಗೆ ಕಳುಹಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ಭವಿಷ್ಯದಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಹೊಂದಿದೆ ಎಂದು ಚಂದ್ರಯಾನ 3 ಯೋಜನೆಯ ನಿರ್ದೇಶಕ ಡಾ. ವೀರಮುತ್ತುವೇಲ್​ ತಿಳಿಸಿದ್ದಾರೆ.

ಬುಧವಾರ ಚೆನ್ನೈ ತಾಂಬರಂನ ಸಾಯಿರಾಮ್​ ಇಂಜಿನಿಯರಿಂಗ್​ ಕಾಲೇಜಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಡಾ. ವೀರಮುತ್ತುವೇಲ್​ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಭಾರತದ ಬಾಹ್ಯಾಕಾಶ ಸಂಸ್ಥೆಯ ಭವಿಷ್ಯದ ಯೋಜನೆಗಳ ಬಗೆಗಿನ ಕನಸು ಹಾಗೂ ಯೋಜನೆಗಳನ್ನ ಬಿಚ್ಚಿಟ್ಟರು.

ನಂತರ ಮುಂದುವರಿಸಿ, "ನನ್ನ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು, ಸನ್ಮಾನ ಸ್ವೀಕರಿಸಿರುವುದು ನನಗೆ ಹೆಮ್ಮೆಯಾಗುತ್ತಿದೆ. ಹಲವು ವರ್ಷಗಳ ನಂತರ ಕಾಲೇಜಿನಿಂದ ನನ್ನ ಸ್ನೇಹಿತರನ್ನು ಭೇಟಿಯಾಗಿರುವುದು ಕೂಡಾ ಸಂತಸ ತಂದಿದೆ ಎಂದರು. ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ. ಅದರಲ್ಲೂ ಇಂಜಿನಿಯರಿಂಗ್​ ವಿದ್ಯಾರ್ಥಿಗಳು ಯಾವ ಶಾಖೆಯನ್ನು ಆಯ್ಕೆ ಮಾಡಿದ್ದರೂ, ಎಲ್ಲರಿಗೂ ಉಜ್ವಲ ಭವಿಷ್ಯವಿದೆ. ವಿದ್ಯಾರ್ಥಿಗಳು ಮಹತ್ವಾಕಾಂಕ್ಷೆ ಹಾಗೂ ಪ್ರಗತಿಯೊಂದಿಗೆ ಅಧ್ಯಯನ ಮಾಡಬೇಕು" ಎಂದು ಅವರು ಇದೇ ವೇಳೆ ಕಿವಿಮಾತು ಹೇಳಿದರು.

"ಸರ್ಕಾರಿ ಉದ್ಯೋಗಗಳು ಮತ್ತು ವೈಜ್ಞಾನಿಕ ಸಂಶೋಧನೆಗಳಲ್ಲಿ ಉತ್ತರ ಭಾರತೀಯರು ದಕ್ಷಿಣ ಭಾರತೀಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉತ್ತರ ಭಾರತೀಯರು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ, ಮತ್ತೆ ಮತ್ತೆ ಪ್ರಯತ್ನಿಸುತ್ತಾರೆ. ಪರೀಕ್ಷೆಗಳನ್ನು ಬರೆಯುವುದನ್ನು ಮುಂದುವರಿಸುತ್ತಲೇ ಇರುತ್ತಾರೆ. ಮತ್ತೆ ಕೊನೆಗೆ ಯಶಸ್ಸನ್ನೂ ಕಾಣುತ್ತಾರೆ. ಜೊತೆಗೆ ಸರ್ಕಾರಿ ಉದ್ಯೋಗಗಳಿಗೂ ಸೇರುತ್ತಾರೆ. ಹಾಗಾಗಿ ಬಾಹ್ಯಾಕಾಶ ಸಂಶೋಧನೆಯಲ್ಲೂ ಅವರು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ದಕ್ಷಿಣ ಭಾರತೀಯರ ಮಟ್ಟಿಗೆ ಹೇಳುವುದಾದರೆ, ಒಂದೋ ಎರಡೋ ಸಲ ಸೋತರೆ, ಪ್ರಯತ್ನ ಪಡುತ್ತಾ, ಬೇರೆ ಕ್ಷೇತ್ರಗಳಲ್ಲಿನ ಅವಕಾಶಗಳತ್ತ ಗಮನಹರಿಸುವುದಿಲ್ಲ. ಇದಕ್ಕೆ ಮಕ್ಕಳ ಪೋಷಕರೂ ಕೂಡ ಕಾರಣ. ಒಂದಲ್ಲ, ಹತ್ತು ಬಾರಿ ಸೋತರೂ, ಮತ್ತೆ ಪ್ರಯತ್ನ ಮಾಡುತ್ತಲೇ ಇರಬೇಕು. ಆಗ ಮಾತ್ರ ಗೆಲ್ಲಬಹುದು. ನಮ್ಮ ದಕ್ಷಿಣ ಭಾರತೀಯರು ಇದನ್ನು ಮಾಡಬೇಕಿದೆ" ಎಂದು ಸಲಹೆ ನೀಡಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ವೇಳೆ ಸಭಾಂಗಣದಲ್ಲಿ ವಿದ್ಯಾರ್ಥಿಗಳು ತಮ್ಮ ಮೊಬೈಲ್​ ಟಾರ್ಚ್​ ದೀಪಗಳನ್ನು ಬೆಳಗಿಸಿ, ಸಂಭ್ರಮಿಸಿದರು.

ಇದನ್ನೂ ಓದಿ : Chandrayaan-3 Mission: ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್‌ನಿಂದ ಸಿಗ್ನಲ್​ ಲಭಿಸಿಲ್ಲ: ಇಸ್ರೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.