ETV Bharat / bharat

ISRO ಗೂಢಚರ್ಯೆ ಪ್ರಕರಣ: ಆರೋಪಿಗಳಿಗೆ ಜಾಮೀನು ಕೊಡದಂತೆ ಹೈಕೋರ್ಟ್​ಗೆ CBI ಮನವಿ - ಕೇರಳ ಹೈಕೋರ್ಟ್​

ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಬಂಧಿಯಾಗಿರುವ ಆರೋಪಿಗಳಿಗೆ ಜಾಮೀನು ನೀಡದಂತೆ ಸಿಬಿಐ ಕೇರಳ ಹೈಕೋರ್ಟ್​ಗೆ ಮನವಿ ಮಾಡಿದೆ.

ISRO espionage case
ISRO espionage case
author img

By

Published : Jul 8, 2021, 4:37 PM IST

ಎರ್ನಾಕುಲಂ (ಕೇರಳ): ಇಸ್ರೋ ವಿರುದ್ಧ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಕೇಂದ್ರ ತನಿಖಾ ದಳ ಕೇರಳ ಹೈಕೋರ್ಟ್​ಗೆ ಮನವಿ ಮಾಡಿದೆ. ನಂಬಿ ನಾರಾಯಣನ್ ವಿರುದ್ಧದ ಇಸ್ರೋ ಗೂಢಚರ್ಯೆ ಪ್ರಕರಣದ ಹಿಂದೆ ಯಾವುದಾದರೂ ಅಂತಾರಾಷ್ಟ್ರೀಯ ಪಿತೂರಿ ಇದೆಯೇ? ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ನ್ಯಾಯಾಲಯಕ್ಕೆ ತನಿಖಾ ಸಂಸ್ಥೆ ತಿಳಿಸಿದೆ.

ನಂಬಿ ನಾರಾಯಣನ್ ಅವರನ್ನು ಯಾವುದೇ ಪುರಾವೆಗಳಿಲ್ಲದೆ ಬಂಧಿಸಲಾಗಿದೆ. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಪ್ರಕರಣದ ಮೊದಲ ಆರೋಪಿ ಎಸ್.ವಿಜಯನ್ ಮತ್ತು ಎರಡನೇ ಆರೋಪಿ ಥಾಂಪಿ ಎಸ್. ದುರ್ಗದ್ ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಈಗ ಕಸ್ಟಡಿಯಲ್ಲಿರುವ ಅವರನ್ನು ಪ್ರಶ್ನಿಸುವ ಅಗತ್ಯವಿಲ್ಲ ಮತ್ತು ಅದಕ್ಕೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ನಾವು ಪೊಲೀಸ್ ಅಧಿಕಾರಿಗಳಾಗಿ ಕೆಲಸ ಮಾಡಿದ್ದೇವೆ. ಹಲವು ವರ್ಷಗಳ ನಂತರ ಆರೋಪಗಳನ್ನು ಮುನ್ನೆಲೆಗೆ ತರುತ್ತಿರುವುದು ತರವಲ್ಲ. ತನಿಖೆಗೆ ನಾವು ಸಹಕರಿಸುತ್ತೇವೆ ಎಂದು ಅವರು ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.