ETV Bharat / bharat

ನೇಪಾಳ ಚುನಾವಣೆ: ಇಂಡೋ-ನೇಪಾಳ ಗಡಿ ಇಂದು ಮಧ್ಯರಾತ್ರಿಯಿಂದಲೇ 72 ಗಂಟೆ ಬಂದ್​

author img

By

Published : Nov 17, 2022, 8:38 PM IST

ನೇಪಾಳದಲ್ಲಿ ನವೆಂಬರ್​ 20 ರಂದು ನಡೆಯುವ ಸಾರ್ವತ್ರಿಕ ಚುನಾವಣೆಗಾಗಿ ಇಂದಿನಿಂದಲೇ ಭಾರತ ನೇಪಾಳ ಗಡಿ ಬಂದ್​ ಮಾಡಲಾಗಿದೆ. ಈ ಬಗ್ಗೆ ಅಲ್ಲಿನ ಸರ್ಕಾರ ಭಾರತಕ್ಕೆ ಪತ್ರ ಬರೆದಿದೆ.

indo-nepal-border-sealed
ನೇಪಾಳ ಚುನಾವಣೆ

ಪಾಟ್ನಾ(ಬಿಹಾರ): ನೇಪಾಳ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾರತ ನೇಪಾಳ ಅಂತಾರಾಷ್ಟ್ರೀಯ ಗಡಿಯನ್ನು ನವೆಂಬರ್ 17 ರ ಮಧ್ಯರಾತ್ರಿಯಿಂದ​ 72 ಗಂಟೆಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ. ನೇಪಾಳದಲ್ಲಿ ನವೆಂಬರ್​ 20 ರಂದು ಮತದಾನ ನಡೆಯಲಿದ್ದು, ಶಾಂತಿಯುತ ಚುನಾವಣೆಗಾಗಿ ಉಭಯ ದೇಶಗಳ ನಡುವೆ ಪ್ರಯಾಣವನ್ನು ನಿರ್ಬಂಧಿಸಲಾಗಿದೆ.

ಈ ಬಗ್ಗೆ ಭಾರತದ ಗೃಹ ಇಲಾಖೆಗೆ ಪತ್ರ ಬರೆದಿರುವ ನೇಪಾಳ ಸರ್ಕಾರ ಮತದಾನದ ಬಳಿಕ ಅಂದರೆ, ನವೆಂಬರ್​ 20 ರಂದು ರಾತ್ರಿ 8 ಗಂಟೆಗೆ ಗಡಿ ತೆರೆಯಲಾಗುವುದು. ವಿಮಾನಗಳ ಮೂಲಕ ನೇಪಾಳಕ್ಕೆ ಬರುವ ಎಲ್ಲ ದೇಶಗಳ ಪ್ರಯಾಣಿಕರು ಪಾಸ್‌ಪೋರ್ಟ್ ಮತ್ತು ಟಿಕೆಟ್ ಅನ್ನು ಕಡ್ಡಾಯವಾಗಿ ಒಪ್ಪಿಸಬೇಕು. ಆಂಬ್ಯುಲೆನ್ಸ್, ನೀರು, ಹಾಲಿನ ಟ್ಯಾಂಕರ್, ಅಗ್ನಿಶಾಮಕ ವಾಹನ ಸೇರಿದಂತೆ ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆಯ ವೇಳೆ ಗಡಿ ಭಾಗದಿಂದ ಅಕ್ರಮ ಶಸ್ತ್ರಾಸ್ತ್ರಗಳು ಸರಬರಾಜಾಗುವ ಹಿನ್ನೆಲೆಯಲ್ಲಿ ಗಸ್ತು ಹೆಚ್ಚಿಸಲಾಗಿದೆ. ಶಾಂತಿಯುತವಾಗಿ ಚುನಾವಣೆ ನಡೆಸಲು ಎರಡೂ ದೇಶಗಳ ಭದ್ರತಾ ಪಡೆಗಳ ನಡುವೆ ಕಾರ್ಯತಂತ್ರ ರೂಪಿಸಲಾಗಿದೆ. ಇಂಡೋ-ನೇಪಾಳ ಗಡಿಯಿರುವ ವಾಲ್ಮೀಕಿನಗರದ ಗಂಡಕ್ ಬ್ಯಾರೇಜ್ ಬಳಿ ಭಾರತ ಮತ್ತು ನೇಪಾಳ ಜವಾನರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಒಳಬರುವ ಮತ್ತು ಹೊರಹೋಗುವ ವಾಹನ, ಜನರ ತೀವ್ರ ತಪಾಸಣೆ ನಡೆಯಲಿದೆ.

ಓದಿ: ಸಾವರ್ಕರ್​ ಕ್ಷಮಾಪಣೆಯನ್ನ ಟೀಕಿಸಿದ ರಾಹುಲ್​ ಗಾಂಧಿ: ಕೈ ನಾಯಕನ ವಿರುದ್ಧ ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.