ಅಮೃತಸರ(ಪಂಜಾಬ್): ಪತಿ ಹಾಗು ತನ್ನಿಬ್ಬರು ಮಕ್ಕಳನ್ನು ತೊರೆದು ತನ್ನ ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ಅಂಜು ಎಂಬಾಕೆ ಬುಧವಾರ ವಾಘಾ-ಅಟ್ಟಾರಿ ಗಡಿ ಮೂಲಕ ಭಾರತಕ್ಕೆ ಬಂದಿದ್ದಾರೆ. ಈ ಸಂಗತಿಯನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.
-
#WATCH | Anju, who had travelled to Pakistan in July, arrived at the Delhi airport. pic.twitter.com/ssg3IzDWYw
— ANI (@ANI) November 29, 2023 " class="align-text-top noRightClick twitterSection" data="
">#WATCH | Anju, who had travelled to Pakistan in July, arrived at the Delhi airport. pic.twitter.com/ssg3IzDWYw
— ANI (@ANI) November 29, 2023#WATCH | Anju, who had travelled to Pakistan in July, arrived at the Delhi airport. pic.twitter.com/ssg3IzDWYw
— ANI (@ANI) November 29, 2023
34 ವರ್ಷದ ಅಂಜು ಅಲಿಯಾಸ್ ಫಾತಿಮಾ ಗೆಳೆಯ ನಸ್ರುಲ್ಲಾನನ್ನು ವರಿಸಲು ಕೆಲ ತಿಂಗಳ ಹಿಂದೆ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ದೂರದ ಹಳ್ಳಿಗೆ ಹೋಗಿದ್ದರು. ಈ ವಿಚಾರ ಉಭಯ ದೇಶಗಳಲ್ಲಿ ಭಾರಿ ಸುದ್ದಿಯಾಗಿತ್ತು.
ಅಂಜು ಅವರ 29 ವರ್ಷದ ಪಾಕಿಸ್ತಾನಿ ಪತಿ ಆಕೆಯೊಂದಿಗೆ ವಾಘಾ ಗಡಿಯವರೆಗೆ ಬಂದಿದ್ದ ಎಂದು ವರದಿಯಾಗಿದೆ. ಭಾರತ ತಲುಪಿದ ನಂತರ ಆಕೆಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಲು ಅವಕಾಶ ದೊರೆಯಲಿಲ್ಲ. ಅಂಜು ತಕ್ಷಣವೇ ದೆಹಲಿಗೆ ತೆರಳಲು ವಿಮಾನಕ್ಕಾಗಿ ನಿಲ್ದಾಣಕ್ಕೆ ಹೋದರು. ಆ ಬಳಿಕ ದೆಹಲಿಯಿಂದ ಪಂಜಾಬ್ನ ಅಮೃತಸರಕ್ಕೆ ಪ್ರಯಾಣಿಸಿದ ಅಂಜು ಶ್ರೀ ಗುರು ರಾಮದಾಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಡು ಬಂದರು. ಈ ಸಂದರ್ಭದಲ್ಲಿ ಬುರ್ಖಾ ಧರಿಸಿದ ರೀತಿಯಲ್ಲಿ ಮಾಧ್ಯಮಗಳ ಕಣ್ಣಿಗೆ ಬಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ನನ್ನ ಹೆಣ್ಣು ಮಕ್ಕಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹಾಗಾಗಿ ಅವರನ್ನು ನೋಡಲು ಭಾರತಕ್ಕೆ ಬಂದಿದ್ದೇನೆ" ಎಂದು ಹೇಳಿದ್ದಾರೆ.
ವಾಘಾ ಗಡಿಯಲ್ಲಿ ಅಂಜು ಹಾಗು ನಸ್ರುಲ್ಲಾನಿಗೆ ಅಲ್ಲಿನ ಮಾಧ್ಯಮದವರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಸ್ರುಲ್ಲಾ, "ಆಕೆ ತನ್ನ ಕುಟುಂಬವನ್ನು ಭೇಟಿಯಾಗಲು ಹೋಗಿದ್ದು, ಅಲ್ಲಿಂದ ಹಿಂತಿರುಗುವುದಾಗಿ ಹೇಳಿದ್ದಾಳೆ. ಪಾಕಿಸ್ತಾನದಲ್ಲಿ ವಾಸಿಸಲು ಬಯಸಿದರೆ ನಾವು ಅವಳೊಂದಿಗೆ ಇದ್ದೇವೆ. ಅಷ್ಟೇ ಅಲ್ಲ, ಇಬ್ಬರು ಪುತ್ರಿಯರು ಸಹ ಭಾರತದಿಂದ ಪಾಕಿಸ್ತಾನಕ್ಕೆ ಬರಲು ಬಯಸಿದರೆ ಅವರೂ ಬರಬಹುದು" ಎಂದು ಹೇಳಿದ್ದಾನೆ.
ಅಂಜು ಭಾರತಕ್ಕೇಕೆ ಮರಳಿದ್ದಾರೆ ಮತ್ತು ಅವರು ಇಲ್ಲಿಯೇ ಇರುತ್ತಾರೆಯೇ ಅಥವಾ ಪಾಕಿಸ್ತಾನಕ್ಕೆ ಮರಳುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಂಜು ಇದೀಗ ಬಿಎಸ್‌ಎಫ್ ಶಿಬಿರದಲ್ಲಿದ್ದಾರೆ. ಭದ್ರತಾ ಏಜೆನ್ಸಿಗಳು ಆಕೆಯನ್ನು ವಿಚಾರಣೆಗೊಳಪಡಿಸುತ್ತಿವೆ. ಸಂಪೂರ್ಣ ಪ್ರಕ್ರಿಯೆ ಮುಗಿದ ನಂತರವೇ ಆಕೆ ಬಿಡುಗಡೆಯಾಗುವರು. ಅಂಜು ವಾಪಸಾದ ಸುದ್ದಿಗೆ ಮೊದಲ ಪತಿ ಅರವಿಂದ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. "ತನಗೂ ಅಂಜುಗೂ ಯಾವುದೇ ಸಂಬಂಧವಿಲ್ಲ. ಆಕೆಯೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳಲು ಕೂಡಾ ಬಯಸಲಾರೆ" ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಭಿವಾಡಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಸೈನಿ ಮಾತನಾಡಿ, "ಅಂಜು ಹಿಂದಿರುಗಿದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಅರವಿಂದ್ ಅವರು ಭಿವಾಡಿಯಲ್ಲಿ ನೆಲೆಸಿಲ್ಲ. ಅವರು ತಮ್ಮ ಮಕ್ಕಳೊಂದಿಗೆ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ" ಎಂದರು.
ಏನಿದು ಪ್ರಕರಣ?: "ನನ್ನ ಪತ್ನಿ ಜೈಪುರಕ್ಕೆ ಭೇಟಿ ನೀಡುವ ನೆಪದಲ್ಲಿ ಮನೆಯಿಂದ ಹೊರಗೆ ಹೋಗಿದ್ದಳು. ಆದರೆ ಇದ್ದಕ್ಕಿದ್ದಂತೆ ಆಕೆ ಪಾಕಿಸ್ತಾನದಲ್ಲಿ ಕಾಣಿಸಿಕೊಂಡಿದ್ದಾಳೆ. ಆ ನಂತರ ತನ್ನ ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾರನ್ನು ಭೇಟಿಯಾಗಲು ಬಂದಿದ್ದಾಗಿ ಹೇಳಿದ್ದಾಳೆ. ಕೆಲವು ದಿನಗಳ ನಂತರ ನಸ್ರುಲ್ಲಾ ಮತ್ತು ಅಂಜು ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇಬ್ಬರ ನಿಶ್ಚಿತಾರ್ಥವನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಇಬ್ಬರಿಗೂ ಮದುವೆಯೂ ಆಗಿದೆ. ಮದುವೆಯ ನಂತರ ಅಂಜು ತನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದಾಳೆ" ಎಂದು ಮಾಜಿ ಪತಿ ಅರವಿಂದ್ ಹೇಳಿದ್ದರು. ಅರವಿಂದ್ ರಾಜಸ್ಥಾನದ ಭಿವಾಡಿಯಲ್ಲಿ ವಾಸವಿದ್ದರು. ಅಂಜು ಉತ್ತರ ಪ್ರದೇಶದ ಕೈಲೋರ್ ಗ್ರಾಮದವರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅರವಿಂದ್ ಕೂಡ ಅಲ್ಲೇ ಕೆಲಸ ಮಾಡುತ್ತಿದ್ದರು. ಇಬ್ಬರದ್ದೂ ಪ್ರೇಮ ವಿವಾಹವಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಇದನ್ನೂ ಓದಿ: ಬಾಯ್ ಫ್ರೆಂಡ್ ಫೋನ್‌ನಲ್ಲಿ 13 ಸಾವಿರ ನಗ್ನ ಫೋಟೋಗಳು.. ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ