ಅಮೃತಸರ (ಪಂಜಾಬ್): ಬೇಹುಗಾರಿಕೆ ಆರೋಪದ ಮೇಲೆ ಸೇನಾ ಸಿಬ್ಬಂದಿಯನ್ನು ಬಂಧಿಸಿದ ನಾಲ್ಕು ದಿನಗಳ ನಂತರ ಪಂಜಾಬ್ ಪೊಲೀಸರ ರಾಜ್ಯ ವಿಶೇಷ ಕಾರ್ಯಾಚರಣೆ ಕೋಶ (SSOC) ಪಾಕಿಸ್ತಾನದ ಐಎಸ್‌ಐಗೆ ಸೂಕ್ಷ್ಮ ಮಾಹಿತಿ ಒದಗಿಸಿದ ಆರೋಪದ ಮೇಲೆ ಮತ್ತೊಬ್ಬ ಗೂಢಚಾರನನ್ನು ಬಂಧಿಸಿದೆ.
ಎಸ್‌ಎಸ್‌ಒಸಿ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಪ್ರಸ್ತುತ ಪಠಾಣ್‌ಕೋಟ್ ಕಂಟೋನ್ಮೆಂಟ್‌ಗೆ ಸಮೀಪವಿರುವ ಸ್ಟೋನ್ ಕ್ರಷರ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಹರಿಯಾಣದ ಸಿರ್ಸಾ ನಿವಾಸಿ ಮನ್‌ದೀಪ್ ಸಿಂಗ್ (35) ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.
ರಕ್ಷಣಾ ಸಿಬ್ಬಂದಿ ಚಲನವಲನದ ಮೇಲೆ ಕಣ್ಣು : ಅವರಿದ್ದ ಸ್ಥಳವನ್ನು ಗಮನಿಸಿದರೆ, ಅವರು ಆ ಪ್ರದೇಶದಲ್ಲಿ ರಕ್ಷಣಾ ಸಿಬ್ಬಂದಿ ಚಲನವಲನದ ಮೇಲೆ ಕಣ್ಣಿಡಲು ಸಾಧ್ಯವಾಗುತ್ತಿತ್ತು. ಆರ್ಥಿಕ ಲಾಭಕ್ಕಾಗಿ ಇವರು ಪಾಕ್ ಹ್ಯಾಂಡ್ಲರ್‌ಗಳಿಗೆ ಅದೇ ಮಾಹಿತಿ ರವಾನಿಸಲು ಸಾಧ್ಯವಾಯಿತು ಎಂದು ಪ್ರಕಟಣೆ ತಿಳಿಸಿದೆ.
ಮಾರುವೇಷದಲ್ಲಿ ಕೆಲಸ ಮಾಡುತ್ತಿದ್ದ ಪಿಐಒ : ಭಾರತೀಯ ಸೇನೆಯ ಬೆಂಗಳೂರು ಮೂಲದ ಐಟಿ ಘಟಕದಲ್ಲಿ ಕೆಲಸ ಮಾಡುತ್ತಿರುವ ಐಟಿ ವೃತ್ತಿಪರರಾದ ನೇಹಾ ಸಿಂಗ್ ಅವರ ಮಾರುವೇಷದಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ ಮಹಿಳಾ ಗುಪ್ತಚರ ಅಧಿಕಾರಿ (ಪಿಐಒ)ಯೊಂದಿಗೆ ಅವರು ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.
ಫೇಸ್‌ಬುಕ್ ಮತ್ತು ಮೆಸೆಂಜರ್ ಮೂಲಕ ಸಂಪರ್ಕ : ಇದು ಒಂದು ಮೋಸವಾಗಿತ್ತು. ಮಹಿಳೆ ವಾಸ್ತವವಾಗಿ ಪಾಕಿಸ್ತಾನದಲ್ಲಿ ನೆಲೆಸಿದ್ದಳು ಮತ್ತು ಹಣದ ವಿನಿಮಯಕ್ಕಾಗಿ ಮಂದೀಪ್‌ನಿಂದ ಮಾಹಿತಿಯನ್ನು ಹೊರ ತೆಗೆಯುತ್ತಿದ್ದಳು. ಮೊದಲು ಇಬ್ಬರೂ ಫೇಸ್‌ಬುಕ್ ಮತ್ತು ಮೆಸೆಂಜರ್ ಮೂಲಕ ಸಂಪರ್ಕ ಹೊಂದಿದ್ದರು.
ನಂತರ ಅವರು ವಾಟ್ಸ್‌ಆ್ಯಪ್ ಮತ್ತು ಇತರ ಖಾಸಗಿ ಸಂದೇಶ ಮತ್ತು ಕರೆ ಮಾಡುವ ಅಪ್ಲಿಕೇಶನ್‌ಗಳಲ್ಲಿ ಸಂದೇಶ ರವಾನಿಸುತ್ತಿದ್ದರು. ಆರೋಪಿಯು ಯುಕೆ ಮೂಲದ ಫೋನ್ ಸಂಖ್ಯೆ ಒಂದರಲ್ಲಿ ಪಿಐಒ ಜೊತೆ ಸಂಪರ್ಕದಲ್ಲಿದ್ದರು ಎಂದು SSOC ಮೂಲಗಳು ತಿಳಿಸಿವೆ.
ಪಠಾಣ್‌ಕೋಟ್ ವಾಯುನೆಲೆಯ ಬಗ್ಗೆ ಮಾಹಿತಿ : SSOC ಅಮೃತಸರ ಅಕ್ಟೋಬರ್ 23ರಂದು ಪಾಕ್ ಮಹಿಳಾ ಗುಪ್ತಚರ ಅಧಿಕಾರಿ ಸಿದ್ರಾ ಖಾನ್ ಅವರೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಮತ್ತು ಅವರಿಗೆ ಸೂಕ್ಷ್ಮ ಮಾಹಿತಿಯನ್ನು ಒದಗಿಸಿದ ಆರೋಪದ ಮೇಲೆ ಗುಜರಾತ್ ನಿವಾಸಿ ಕೃನಾಲ್ ಕುಮಾರ್ ಬೈರಾ ಅವರನ್ನು ಬಂಧಿಸಿತ್ತು. ಎನ್‌ಬೈರಾ ಅವರನ್ನು ಫಿರೋಜ್‌ಪುರ ಕಂಟೋನ್ಮೆಂಟ್‌ನ ಐಟಿ ಸೆಲ್‌ನಲ್ಲಿ ನಿಯೋಜಿಸಲಾಗಿದೆ.
ಆಪಾದಿತ ಆರೋಪಿಯು ಪಿಐಒನಿಂದ ಬೇಹುಗಾರಿಕೆ ಚಟುವಟಿಕೆಗಳಿಗೆ ಆಕರ್ಷಿತನಾಗಿದ್ದನೆಂದು ಅವರ ತನಿಖೆಗಳು ಬಹಿರಂಗಪಡಿಸಿವೆ ಮತ್ತು ಪಠಾಣ್‌ಕೋಟ್, ಅಮೃತಸರ ಕಂಟೋನ್ಮೆಂಟ್‌ಗಳು ಮತ್ತು ಪಠಾಣ್‌ಕೋಟ್ ವಾಯುನೆಲೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಆಕೆಗೆ ಜವಾಬ್ದಾರಿ ವಹಿಸಲಾಗಿದೆ ಎಂದು SSOC ಪ್ರಕಟಣೆ ತಿಳಿಸಿದೆ.
ರಹಸ್ಯ ದಾಖಲೆಗಳು ಮತ್ತು ಛಾಯಾಚಿತ್ರ ಹಂಚಿಕೆ : ಆರೋಪಿಯು ಎನ್‌ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳ ಮೂಲಕ ಕಂಟೋನ್ಮೆಂಟ್ ಪ್ರದೇಶಗಳ ಕೆಲವು ರಹಸ್ಯ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅವರ ಮೊಬೈಲ್ ಫೋನ್‌ನ ಪ್ರಾಥಮಿಕ ತಪಾಸಣೆಯ ಸಮಯದಲ್ಲಿ ಅನೇಕ ವರ್ಗೀಕೃತ ದಾಖಲೆಗಳು ಮತ್ತು ಛಾಯಾಚಿತ್ರಗಳು ಪತ್ತೆಯಾಗಿವೆ. ಪಾಕ್ ಐಎಸ್‌ಐಗೆ ಆತ ಮಾಡಿದ ಕೆಲಸಕ್ಕೆ ಬದಲಾಗಿ ಪಿಐಒ ಆತನಿಗೆ ನಾನಾ ರೀತಿ ಹಣ ಸಂದಾಯ ಮಾಡಿದ್ದ.
ಅಮೃತಸರ SSOCಯಿಂದ ಪ್ರಕರಣ ದಾಖಲು : ನಾವು ತನಿಖೆಯ ಆರಂಭಿಕ ಹಂತದಲ್ಲಿದ್ದೇವೆ. ಆದರೆ, ಅವರಿಂದ ಪ್ರಮುಖ ಮಾಹಿತಿಯನ್ನು ಹೊರ ತೆಗೆಯಬೇಕಿದೆ ಎಂದು ಮೂಲಗಳು ತಿಳಿಸಿವೆ. ಅಮೃತಸರ SSOC FIR No. 20ನಲ್ಲಿ ಅಧಿಕೃತ ರಹಸ್ಯ ಕಾಯಿದೆ u/s 3, 4, 5, 9 ಮತ್ತು120-B IPC PS ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದೆ.