ಊಟಿ(ತಮಿಳುನಾಡು): ಸಿಡಿಎಸ್ ಬಿಪಿನ್ ರಾವತ್ ಹಾಗು ಅವರ ಕುಟುಂಬದ ಕೆಲವು ಸದಸ್ಯರು ಹಾಗು ಇತರೆ ಹಿರಿಯ ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಮಿಳುನಾಡಿನ ಊಟಿಯ ಕೂನೂರ್ ಬಳಿ ಪತನವಾಗಿದೆ.
ಘಟನಾ ಸ್ಥಳದಲ್ಲಿ ಸದ್ಯ 4 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ತುರ್ತು ರಕ್ಷಣಾ ಪಡೆ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗುತ್ತಿದೆ.
-
An IAF Mi-17V5 helicopter, with CDS Gen Bipin Rawat on board, met with an accident today near Coonoor, Tamil Nadu.
— Indian Air Force (@IAF_MCC) December 8, 2021 " class="align-text-top noRightClick twitterSection" data="
An Inquiry has been ordered to ascertain the cause of the accident. pic.twitter.com/cnKn7RNFeR
">An IAF Mi-17V5 helicopter, with CDS Gen Bipin Rawat on board, met with an accident today near Coonoor, Tamil Nadu.
— Indian Air Force (@IAF_MCC) December 8, 2021
An Inquiry has been ordered to ascertain the cause of the accident. pic.twitter.com/cnKn7RNFeRAn IAF Mi-17V5 helicopter, with CDS Gen Bipin Rawat on board, met with an accident today near Coonoor, Tamil Nadu.
— Indian Air Force (@IAF_MCC) December 8, 2021
An Inquiry has been ordered to ascertain the cause of the accident. pic.twitter.com/cnKn7RNFeR
ವೆಲ್ಲಿಂಗ್ಟನ್ ಸೇನಾ ಕೇಂದ್ರಕ್ಕೆ ಹೋಗುತ್ತಿದ್ದಾಗ ಎಂಐ-17ವಿ5 ಸೇನಾ ಹೆಲಿಕಾಪ್ಟರ್ ಪತನವಾಗಿದೆ ಎಂದು ತಿಳಿದುಬಂದಿದೆ.
ನತದೃಷ್ಟ ಹೆಲಿಕಾಪ್ಟರ್‌ನಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ವಾಯುಸೇನೆ ತಿಳಿಸಿದೆ.
ಪ್ರಧಾನಿಗೆ ರಕ್ಷಣಾ ಸಚಿವರಿಂದ ಮಾಹಿತಿ:
ಬಿಪಿನ್ ರಾವತ್, ಮತ್ತವರ ಪತ್ನಿ ಹಾಗೂ ಸಿಬ್ಬಂದಿಯಿದ್ದ ಹೆಲಿಕಾಪ್ಟರ್ ಪತನವಾಗಿರುವ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ.