ನವದೆಹಲಿ: ದೇಶದಲ್ಲಿ ಕೋವಿಡ್ ವ್ಯಾಕ್ಸಿನ್ ಅಭಿವೃದ್ಧಿಯಾಗಲು ಶುರುವಾದಾಗಿನಿಂದಲೂ ಇಲ್ಲಿಯವರೆಗೆ ವಿಶ್ವದಾದ್ಯಂತ 84 ದೇಶಗಳಿಗೆ 64 ಮಿಲಿಯನ್ ಡೋಸ್ ಕೋವಿಡ್ -19 ಲಸಿಕೆ ರವಾನೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಮಾಹಿತಿ ನೀಡಿದರು.
ಕೋವಿಡ್ -19 ಲಸಿಕೆ ಉತ್ಪಾದನೆ ಕುರಿತ ಸಮಿತಿಯ ಚರ್ಚೆ ಉದ್ದೇಶಿಸಿ ಮಾತನಾಡಿದ ಡಾ.ಹರ್ಷವರ್ಧನ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಾವು ವಿಶ್ವದ ಅಗತ್ಯತೆಗಳು ಮತ್ತು ಭಾರತೀಯರ ಅಗತ್ಯಗಳ ನಡುವೆ ಉತ್ತಮ ಗುಣಮಟ್ಟದ ಸಮತೋಲನ ಪ್ರಾರಂಭಿಸಿದ್ದೇವೆ.
ಭಾರತದಲ್ಲಿ ಕೋವಿಡ್ ವ್ಯಾಕ್ಸಿನ್ ಅಭಿವೃದ್ಧಿಯಾಗಲು ಶುರುವಾದಾಗಿನಿಂದಲೂ ಇಲ್ಲಿಯವರೆಗೆ ಇಡೀ ವಿಶ್ವದ 84 ದೇಶಗಳಿಗೆ 64 ಮಿಲಿಯನ್ ಡೋಸ್‌ಗಳನ್ನು ಸರಬರಾಜು ಮಾಡಲಾಗಿದೆ ಎಂದರು.
ಓದಿ: ಇಂದು ಭಾರತಕ್ಕೆ ಮತ್ತೆ ಮೂರು ರಫೇಲ್ ಆಗಮನ... ಐಎಎಫ್‌ಗೆ ಬರಲಿದೆ ಮತ್ತಷ್ಟು ಬಲ