ETV Bharat / bharat

ಅಗ್ನಿ 5 ಖಂಡಾಂತರ ಕ್ಷಿಪಣಿಯ ರಾತ್ರಿ ಹಾರಾಟದ ಪ್ರಯೋಗ ಯಶಸ್ವಿ

ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪ ಪ್ರದೇಶದಿಂದ ಪರಮಾಣು ಸಾಮರ್ಥ್ಯದ ಅಗ್ನಿ 5 ಖಂಡಾಂತರ ಕ್ಷಿಪಣಿಯ ರಾತ್ರಿ ವೇಳೆಯ ಹಾರಾಟದ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನಡೆಸಿದೆ.

india-successfully-carries-out-night-trials-agni-5-ballistic-missile
ಪರಮಾಣು ಸಾಮರ್ಥ್ಯದ ಅಗ್ನಿ 5 ಖಂಡಾಂತರ ಕ್ಷಿಪಣಿಯ ರಾತ್ರಿ ವೇಳೆ ಪ್ರಯೋಗ ಯಶಸ್ವಿ
author img

By

Published : Dec 15, 2022, 9:27 PM IST

ಭುವನೇಶ್ವರ(ಒಡಿಶಾ): ಭಾರತವು ಪರಮಾಣು ಸಾಮರ್ಥ್ಯದ ಅಗ್ನಿ 5 ಖಂಡಾಂತರ ಕ್ಷಿಪಣಿಯ ರಾತ್ರಿ ವೇಳೆಯ ಪ್ರಯೋಗವನ್ನು ಗುರುವಾರ ಯಶಸ್ವಿಯಾಗಿ ನಡೆಸಿತು. ಖಂಡಾಂತರ ಕ್ಷಿಪಣಿಯು 5 ಸಾವಿರ ಕಿ.ಮೀ. ದೂರವರೆಗೂ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.

ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪ ಪ್ರದೇಶದಿಂದ ಸಂಜೆ ಸುಮಾರು 5:30 ಗಂಟೆಗೆ ಕ್ಷಿಪಣಿ ಉಡಾವಣೆ ಮಾಡಲಾಗಿದೆ. ಮೊದಲಿಗಿಂತ ಈಗ ಹಗುರವಾಗಿರುವ ಕ್ಷಿಪಣಿಯಲ್ಲಿನ ಹೊಸ ತಂತ್ರಜ್ಞಾನಗಳು ಮತ್ತು ಉಪಕರಣಗಳನ್ನು ಮೌಲ್ಯೀಕರಿಸಲು ಈ ಪರೀಕ್ಷೆಯನ್ನು ನಡೆಸಲಾಗಿದೆ ಮೂಲಗಳು ತಿಳಿಸಿವೆ.

ಅಗತ್ಯವಿದ್ದರೆ ಅಗ್ನಿ-5 ಕ್ಷಿಪಣಿಯು ತನ್ನ ವ್ಯಾಪ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನೂ ಈ ಪ್ರಯೋಗ ಸಾಬೀತುಪಡಿಸಿದೆ. ಹೆಚ್ಚು ದೂರ ಕ್ರಮಿಸಲು ಸಾಧ್ಯವಾಗುವಂತೆ ಹಗುರವಾದ ಸಂಯೋಜಿತ ವಸ್ತುಗಳನ್ನು ಸೇರಿಸುವ ಮೂಲಕ ಕ್ಷಿಪಣಿಯ ಭಾರ ಕಡಿಮೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಭಾರತವು ಕೊನೆಯ ಅಗ್ನಿ-5 ಪರೀಕ್ಷೆಯನ್ನು 2021ರ ಅಕ್ಟೋಬರ್​ನಲ್ಲಿ ನಡೆಸಿತ್ತು. ಮೂರು ಹಂತದ ಘನ ಇಂಧನ ಎಂಜಿನ್ ಒಳಗೊಂಡಿರುವ ಕ್ಷಿಪಣಿಯು ಐದು ಸಾವಿರ ಕಿ.ಮೀ ವ್ಯಾಪ್ತಿಯಲ್ಲಿರುವ ಗುರಿಗಳನ್ನು ಅತ್ಯಂತ ಹೆಚ್ಚಿನ ಮಟ್ಟದ ನಿಖರತೆಯೊಂದಿಗೆ ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಹೊಸ ಹೆಲಿಕಾಪ್ಟರ್ ಖರೀದಿಸಿ, ದೇವಸ್ಥಾನಕ್ಕೆ ತಂದು ವಾಹನ ಪೂಜೆ ಮಾಡಿಸಿದ ಉದ್ಯಮಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.