ನವದೆಹಲಿ: ಭಾರತದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೋವಿಡ್ ಸೋಂಕಿತರ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 17,336 ಹೊಸ ಕೇಸ್ಗಳು ದೃಢಪಟ್ಟಿದ್ದು, 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದೊಂದು ದಿನದಲ್ಲಿ 13,029 ಜನರು ಕೋವಿಡ್ನಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 4,27,49,056 ಜನರು ಗುಣಮುಖರಾಗಿದ್ದಾರೆ. ಸದ್ಯಕ್ಕೆ ದೇಶದಲ್ಲಿ 88,284 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸಾವಿನ ಸಂಖ್ಯೆ 5,24,954 ಕ್ಕೆ ಏರಿಕೆಯಾಗಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಜೂನ್ 19 ರವರೆಗೆ 85.98 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಗುರುವಾರ 4,01,649 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಪ್ರಸ್ತುತ ಚೇತರಿಕೆಯ ಪ್ರಮಾಣವು ಪ್ರಸ್ತುತ ಶೇ 98.59 ರಷ್ಟಿದ್ದು, ದೈನಂದಿನ ಪಾಸಿಟಿವಿಟಿ ದರವು ಶೇ 4.32 ರಷ್ಟಿದೆ. ಇಲ್ಲಿಯವರೆಗೆ 196.77 ಕೋಟಿ ಕೊರೊನಾ ಡೋಸ್ಗಳನ್ನು ನೀಡಲಾಗಿದೆ.